ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿರಾಶಾದಾಯಕ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ನಡೆಯಲಿರುವ 2ನೇ ಪಂದ್ಯದಲ್ಲಿ, ಟೂರ್ನಿಯಲ್ಲಿ ತಲಾ ಒಂದು ಸೋಲು-ಗೆಲುವು ಕಂಡಿರುವ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸೆಣಸಾಡಲಿದೆ.
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಅನುಭವಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೂಪರ್ ಬ್ಯಾಟಿಂಗ್ ಪ್ರದರ್ಶಿಸಿ 7 ವಿಕೆಟ್ಗಳ ಜಯ ಸಾಧಿಸಿ ಶುಭಾರಂಭ ಮಾಡಿತ್ತು. ಆದರೆ ತನ್ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಗೆಲುವಿನ ಸನಿಹ ಬಂದು ಸೋಲೊಪ್ಪಿಕೊಂಡಿತ್ತು.
-
💙 𝐌𝐀𝐓𝐂𝐇𝐃𝐀𝐘 💙
— Delhi Capitals (@DelhiCapitals) April 18, 2021 " class="align-text-top noRightClick twitterSection" data="
Time to end our Mumbai leg on a high with a win against @PunjabKingsIPL 🔥
🏟️: Wankhede Stadium
🕖: 7:30 PM#YehHaiNayiDilli #IPL2021 #DCvPBKS @OctaFX pic.twitter.com/jWxhIPVokc
">💙 𝐌𝐀𝐓𝐂𝐇𝐃𝐀𝐘 💙
— Delhi Capitals (@DelhiCapitals) April 18, 2021
Time to end our Mumbai leg on a high with a win against @PunjabKingsIPL 🔥
🏟️: Wankhede Stadium
🕖: 7:30 PM#YehHaiNayiDilli #IPL2021 #DCvPBKS @OctaFX pic.twitter.com/jWxhIPVokc💙 𝐌𝐀𝐓𝐂𝐇𝐃𝐀𝐘 💙
— Delhi Capitals (@DelhiCapitals) April 18, 2021
Time to end our Mumbai leg on a high with a win against @PunjabKingsIPL 🔥
🏟️: Wankhede Stadium
🕖: 7:30 PM#YehHaiNayiDilli #IPL2021 #DCvPBKS @OctaFX pic.twitter.com/jWxhIPVokc
ಇತ್ತ ಮೊದಲ ಪಂದ್ಯದಲ್ಲಿ 221 ರನ್ಗಳ ಬೃಹತ್ ಮೊತ್ತ ಕಲೆ ಹಾಕಿ 4 ರನ್ಗಳ ರೋಚಕ ಜಯ ಸಾಧಿಸಿದ್ದ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತನ್ನ 2ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಕೇವಲ 106 ರನ್ಗಳಿಸಿತ್ತು. ಈ ಮೊತ್ತವನ್ನು ಧೋನಿ ಪಡೆ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿತ್ತು.
ಉಭಯ ತಂಡಗಳ ಶಕ್ತಿ
ಪಂಜಾಬ್ಗೆ ರಾಹುಲ್, ಮಯಾಂಕ್, ಕ್ರಿಸ್ ಗೇಲ್, ಪೂರನ್, ಶಾರುಖ್ ಖಾನ್ ರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನೇ ನೆಚ್ಚಿಕೊಂಡಿದೆ.
ಡೆಲ್ಲಿಗೆ ಬ್ಯಾಟಿಂಗ್ಗಿಂತಲೂ ಬೌಲಿಂಗ್ ಪ್ರಮುಖ ಅಸ್ತ್ರವಾಗಿದೆ. ಇಂದಿನ ಪಂದ್ಯದಲ್ಲಿ ರಬಾಡ ಜೊತೆಗೆ ಕ್ವಾರಂಟೈನ್ ಮುಗಿಸಿರುವ ಎನ್ರಿಚ್ ನೋಕಿಯಾ ತಂಡ ಸೇರಿಕೊಂಡಿದ್ದಾರೆ. ಪಂತ್ ಬಳಗಕ್ಕೆ ಇದು ಆನೆ ಬಲ ತಂದುಕೊಟ್ಟಿದೆ.
ಪಂಜಾಬ್ ತಂಡ ಕೂಡ ಸತತ 2 ಪಂದ್ಯಗಳಲ್ಲಿ ಸೊನ್ನೆ ಸುತ್ತಿರುವ ನಿಕೋಲಸ್ ಪೂರನ್ ಬದಲಿಗೆ ನಂಬರ್ 1 ಟಿ20 ಬ್ಯಾಟ್ಸ್ಮನ್ ಡೇವಿಡ್ ಮಲನ್ ಅಥವಾ ಸ್ಟಾರ್ ಆಲ್ರೌಂಡರ್ ಹೆನ್ರಿಕ್ಸ್ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
-
Striding towards #DCvPBKS 🏃🏻#SaddaPunjab #PunjabKings #IPL2021 pic.twitter.com/2pRNX55SNz
— Punjab Kings (@PunjabKingsIPL) April 17, 2021 " class="align-text-top noRightClick twitterSection" data="
">Striding towards #DCvPBKS 🏃🏻#SaddaPunjab #PunjabKings #IPL2021 pic.twitter.com/2pRNX55SNz
— Punjab Kings (@PunjabKingsIPL) April 17, 2021Striding towards #DCvPBKS 🏃🏻#SaddaPunjab #PunjabKings #IPL2021 pic.twitter.com/2pRNX55SNz
— Punjab Kings (@PunjabKingsIPL) April 17, 2021
ಮುಖಾಮುಖಿ
- ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.
- ಇದರಲ್ಲಿ ಪಂಜಾಬ್ 15 ಮತ್ತು ಡೆಲ್ಲಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಸಂಭವನೀಯ ತಂಡಗಳು ಹೀಗಿವೆ..
ಪಂಜಾಬ್ ಕಿಂಗ್ಸ್: ಕೆ.ಎಲ್.ರಾಹುಲ್ (ನಾಯಕ/ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಡೇವಿಡ್ ಮಲನ್/ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಾರುಖ್ ಖಾನ್, ದೀಪಕ್ ಹೂಡಾ, ಮುರುಗನ್ ಅಶ್ವಿನ್/ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್, ಜೇ ರಿಚರ್ಡ್ಸನ್, ರಿಲೆ ಮೆರೆಡಿತ್/ಮೊಯಿಸಸ್ ಹೆನ್ರಿಕ್ಸ್,
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶಿಮ್ರಾನ್ ಹೆಟ್ಮಿಯರ್/ಎನ್ರಿಚ್ ನೋಕಿಯಾ, ಕಗಿಸೊ ರಬಾಡ, ಆವೇಶ್ ಖಾನ್, ಮಾರ್ಕಸ್ ಸ್ಟೋನಿಸ್, ರವಿಚಂದ್ರನ್ ಅಶ್ವಿನ್, ಕ್ರಿಸ್ ವೋಕ್ಸ್
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ
ಇದನ್ನೂ ಓದಿ: ಕೊಹ್ಲಿ ನಾಯಕತ್ವ ಹೊಗಳಿ,ಇಲ್ಲಿನ ಪಿಚ್ಗಳಲ್ಲಿ ಬೌಲಿಂಗ್ ಮಾಡುವುದು ವಿಭಿನ್ನ ಅನುಭವ ಎಂದ ಜೆಮೀಸನ್!