ದುಬೈ : ಕಾಲ್ಬೆರಳಿನ ಗಾಯಕ್ಕೆ ಒಳಗಾಗಿದ್ದ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅವರು ಫಿಟ್‌ನೆಸ್ ಮರಳಿ ಪಡೆದಿದ್ದು, ಇಲ್ಲಿ ನಡೆಯುವ ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೆ ಮತ್ತೆ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಗಪ್ಟಿಲ್ ಅವರ ಎಡಗಾಲಿನ ಬೆರಳಿಗೆ ಪೆಟ್ಟಾಗಿತ್ತು. ಅಂದು ಪಾಕ್ ವಿರುದ್ಧ ನ್ಯೂಜಿಲೆಂಡ್ ಮ್ಯಾಚ್ ಸೋತಿತ್ತು. ಮುಂದಿನ ಪಂದ್ಯದಲ್ಲಿ ಗಪ್ಟಿಲ್ ಆಡುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಮೂಡಿತ್ತು. ಇದೀಗ ಈ ಪ್ರಶ್ನೆಗೆ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ವಿರಾಟ್ vs ವಿಲಿಯಮ್ಸನ್: ಇಂದಿನ ಪಂದ್ಯ ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮ
ಅವರ ಕಾಲ್ಬೆರಳು ಸ್ವಲ್ಪ ಸಮಯದವರೆಗೆ ವಿಭಿನ್ನ ಬಣ್ಣದ ಛಾಯೆಯನ್ನು ಹೊಂದಿತ್ತು. ಆದರೆ, ಅವರಿಗೆ ತರಬೇತಿ ನೀಡಲಾಗಿದ್ದು, ಇಂದಿನ ಮ್ಯಾಚ್ಗೆ ಫಿಟ್ ಆಗಿದ್ದಾರೆ ಎಂದು ನ್ಯೂಜಿಲೆಂಡ್‌ನ ಮಾಧ್ಯಮವೊಂದಕ್ಕೆ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ಭಾರತದ ವಿರುದ್ಧ ಆಡಲು ಆ್ಯಡಂ ಮಿಲ್ನೆ ಕೂಡ 11 ಸದಸ್ಯರ ಟೀಂ ನ್ಯೂಜಿಲೆಂಡ್ ಭಾಗವಾಗಬಹುದು. ಲೂಕಿ ಫರ್ಗ್ಯುಸನ್ಗೆ ಗಾಯವಾಗಿರುವ ಕಾರಣ ಅವರ ಬದಲು ಮಿಲ್ನೆ ಆಡಬಹುದು ಎಂದು ಗ್ಯಾರಿ ಸ್ಟೆಡ್ ತಿಳಿಸಿದರು.