ETV Bharat / sports

ವಿಂಡೀಸ್ ಪ್ರವಾಸಕ್ಕೆ ಘೋಷಿಸಿದ ತಂಡದಲ್ಲಿ ಕೌಂಟಿಯಾಡುತ್ತಿರುವ ಲಾಬುಶೇನ್​ಗಿಲ್ಲ ಅವಕಾಶ - ಕ್ರಿಕೆಟ್ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ನ್ಯೂಜಿಲ್ಯಾಂಡ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ತಂಡದಿಂದ ಹೊರಗಿದ್ದ ಮಿಚೆಲ್ ಸ್ಟಾರ್ಕ್, ಸ್ವೀವನ್ ಸ್ಮಿತ್​, ಜೋಶ್ ಹೆಜಲ್​ವುಡ್​, ಡೇವಿಡ್ ವಾರ್ನರ್​, ಮೊಯಿಸಸ್ ಹೆನ್ರಿಕ್ಸ್​, ಅಲೆಕ್ಸ್ ಕ್ಯಾರಿ ಮತ್ತು ಪ್ಯಾಟ್​ ಕಮಿನ್ಸ್​ ಈ ಪ್ರವಾಸಕ್ಕಾಗಿ ಘೋಷಿಸಿದ ತಂಡದಲ್ಲಿ ಅವಕಾಶ ಪಡೆದಿದ್ದಾರೆ..

ಮಾರ್ನಸ್ ಲಾಬುಶೇನ್
ಮಾರ್ನಸ್ ಲಾಬುಶೇನ್
author img

By

Published : May 17, 2021, 4:54 PM IST

ಮೆಲ್ಬೋರ್ನ್ ​: ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಸೀಮಿತ ಓವರ್​ಗಳ ಸರಣಿಗಾಗಿ ಪ್ರಕಟಿಸಿರುವ ತಂಡದಲ್ಲಿ ಲಾಬುಶೇನ್​ರನ್ನು ಸೇರಿಸಿಲ್ಲ ಎಂದು ಆಸ್ಟ್ರೇಲಿಯಾ ತಂಡದ ರಾಷ್ಟ್ರೀಯ ಆಯ್ಕೆಗಾರ ಟ್ರೆವರ್ ಹಾನ್ಸ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ನ್ಯೂಜಿಲ್ಯಾಂಡ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ತಂಡದಿಂದ ಹೊರಗಿದ್ದ ಮಿಚೆಲ್ ಸ್ಟಾರ್ಕ್, ಸ್ವೀವನ್ ಸ್ಮಿತ್​, ಜೋಶ್ ಹೆಜಲ್​ವುಡ್​, ಡೇವಿಡ್ ವಾರ್ನರ್​, ಮೊಯಿಸಸ್ ಹೆನ್ರಿಕ್ಸ್​, ಅಲೆಕ್ಸ್ ಕ್ಯಾರಿ ಮತ್ತು ಪ್ಯಾಟ್​ ಕಮಿನ್ಸ್​ ಈ ಪ್ರವಾಸಕ್ಕಾಗಿ ಘೋಷಿಸಿದ ತಂಡದಲ್ಲಿಅವಕಾಶ ಪಡೆದಿದ್ದಾರೆ.

ಆದರೆ, ಯುವ ಆಟಗಾರ ಮಾರ್ನಸ್​ ಲಾಬುಶೇನ್ ಅವರಿಗೆ ಅವಕಾಶ ನೀಡಿಲ್ಲ. ಏಕೆಂದರೆ, ಅವರು ಪ್ರಸ್ತುತ ಇಂಗ್ಲೆಂಡ್​ನಲ್ಲಿ ಕೌಂಟಿ ಆಡುತ್ತಿದ್ದಾರೆ. ಪ್ರಯಾಣ ನಿರ್ಬಂಧದಿಂದ ಅವರು ಈ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.

"ನಾವು ಜಾಗತಿಕ ಸಾಂಕ್ರಾಮಿಕದ ಮಧ್ಯದಲ್ಲಿ ಇಲ್ಲದಿದ್ದರೆ ಮಾರ್ನಸ್ ಈ ಪ್ರವಾಸದಲ್ಲಿ ಪ್ರಮುಖ ಸದಸ್ಯರಾಗಿ ಮತ್ತು ಏಕದಿನ ತಂಡದ ಪ್ರಮುಖ ಭಾಗವಾಗಿರುತ್ತಿದ್ದರು. ಕೋವಿಡ್​-19 ಸವಾಲುಗಳ ಅವರಿಗೆ ಅವಕಾಶ ನೀಡುತ್ತಿಲ್ಲ.

ಹಾಗಾಗಿ, ಟಿ20 ವಿಶ್ವಕಪ್ ಮತ್ತು ತವರಿನ ಬೇಸಿಗೆ ಆರಂಭದವರೆಗೂ ಅವರು ಗ್ಲಾಮೋರ್ಗನ್ ತಂಡದೊಂದಿಗೆ ಕೌಂಟಿ ಕ್ರಿಕೆಟ್ ಮತ್ತು ಟಿ20 ಪಂದ್ಯಗಳಲ್ಲಿ ಮುಂದುವರಿಯುವುದು ಮಾರ್ನಸ್​ಗೆ ಸೂಕ್ತ ಮತ್ತು ಪ್ರಾಯೋಗಿಕವಾಗಿದೆ "ಎಂದು ಹಾನ್ಸ್ ತಿಳಿಸಿದ್ದಾರೆ

ವಿಂಡೀಸ್ ಸರಣಿಗೆ ಆಸ್ಟ್ರೇಲಿಯಾ ತಂಡ : ಆ್ಯರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್,, ಗ್ಲೆನ್ ಮ್ಯಾಕ್ಸ್‌ವೆಲ್, ಆಷ್ಟನ್ ಅಗರ್, ಜೇಸನ್ ಬೆಹ್ರೆಂಡಾರ್ಫ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಜೋಶ್ ಹೆಜಲ್ವುಡ್, ಮೊಯಿಸಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ರಿಲೆ ಮೆರೆಡಿತ್, ಜೋಶ್ ಫಿಲಿಪ್ಪೆ, ಜೇ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ತನ್ವೀರ್ ಸಂಘ, ಡಾರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮಿಚೆಲ್ ಸ್ವೆಪ್ಸನ್, ಆಂಡ್ರ್ಯೂ ಟೈ, ಆಡಮ್ ಜಂಪಾ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.