ಇದೇ ವರ್ಷ ಇಂಗ್ಲೆಂಡ್ನಲ್ಲಿ ನಡೆಯುವ 'ದಿ ಹಂಡ್ರೆಡ್' ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಸ್ಟಾರ್ ಆಟಗಾರರಾದ ಜೆಮಿಮಾ ರೋಡ್ರಿಗಾಸ್(ಸೂಪರ್ ಚಾರ್ಜರ್ಸ್) ಸ್ಮೃತಿ ಮಂಧಾನ(ಸೌಥರ್ನ್ ಬ್ರೇವ್) ಅವರನ್ನು ಆಯಾ ತಂಡಗಳು ರೀಟೇನ್ ಮಾಡಿಕೊಂಡಿವೆ. ಈ ಇಬ್ಬರು ಮಾತ್ರ ವಿದೇಶಿ ಟೂರ್ನಿಯಲ್ಲಿ ಉಳಿದುಕೊಂಡ ಆಟಗಾರರಾಗಿದ್ದಾರೆ.
ಕಳೆದ ವರ್ಷದ ಉದ್ಘಾಟನಾ ಪಂದ್ಯಾವಳಿಯನ್ನು ತಪ್ಪಿಸಿಕೊಂಡಿದ್ದ ಆಸ್ಟ್ರೇಲಿಯಾದ ಆಟಗಾರ್ತಿಯರು ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಇಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
-
Jemimah and Smriti are heading back to the Hundred.#TheHundred pic.twitter.com/5DchyaQNIg
— Cricket Talk (@Cricket__talk) February 22, 2022 " class="align-text-top noRightClick twitterSection" data="
">Jemimah and Smriti are heading back to the Hundred.#TheHundred pic.twitter.com/5DchyaQNIg
— Cricket Talk (@Cricket__talk) February 22, 2022Jemimah and Smriti are heading back to the Hundred.#TheHundred pic.twitter.com/5DchyaQNIg
— Cricket Talk (@Cricket__talk) February 22, 2022
ಪೆರ್ರಿ (ಬರ್ಮಿಂಗ್‌ಹ್ಯಾಮ್ ಫೀನಿಕ್ಸ್) ಮತ್ತು ಅಲಿಸ್ಸಾ ಹೀಲಿ (ಸೌಥರ್ನ್ ಸೂಪರ್‌ಚಾರ್ಜರ್ಸ್) ಅವರನ್ನು ತಂಡಗಳು ಉಳಿಸಿಕೊಂಡಿವೆ. ಮಹಿಳಾ ಪಂದ್ಯಾವಳಿಯು ಜುಲೈ 29 ರಿಂದ ಆಗಸ್ಟ್ 7 ರವರೆಗೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.
ಆಯಾ ತಂಡಗಳು ಮೂವರು ಆಟಗಾರರನ್ನು ರೀಟೇನ್ ಮಾಡಿಕೊಂಡ ಬಳಿಕ ಉಳಿದ ಆಟಗಾರರು ಹರಾಜಿಗೆ ಲಭ್ಯರಿದ್ದು, ಅವರನ್ನು ತಂಡಗಳು ಖರೀದಿಸಬಹುದು ಎಂದು ಇಸಿಬಿ ತಿಳಿಸಿದೆ.
ಏನಿದು ದಿ ಹಂಡ್ರೆಂಡ್ ಪಂದ್ಯಾವಳಿ?: ಈ ಪಂದ್ಯಾವಳಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗಳು ಆಯೋಜಿಸುತ್ತವೆ. ಟಿ-20 ಮಾದರಿಯಂತೆ 100 ಎಸೆತಗಳ ಟೂರ್ನಿ ಇದಾಗಿದೆ. ಇದರಲ್ಲಿ ಓವರ್ಗೆ 5 ಎಸೆತಗಳು ಮಾತ್ರ ಇರುತ್ತವೆ. ಒಬ್ಬರು 20 ಎಸೆತ (4 ಓವರ್) ಹಾಕಬಹುದು. ಒಬ್ಬ ಬ್ಯಾಟರ್ 10 ಎಸೆತದ ಬಳಿಕ ಕ್ರೀಸ್ ಬದಲಿಸಬಹುದಾಗಿದೆ.
ಇದನ್ನೂ ಓದಿ: U19 ವಿಶ್ವಕಪ್ ವೇಳೆ ಭಾರತದ ಯುವಕರು ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟ ಟೀಮ್ ಮ್ಯಾನೇಜರ್