ETV Bharat / sports

Major League Cricket: ಅಮೆರಿಕದ ಮೇಜರ್‌ ಲೀಗ್ ಕ್ರಿಕೆಟ್‌ನಲ್ಲಿ CSK ತಂಡದ ಆಟಗಾರರು ಭಾಗಿ: ಯಾರೆಲ್ಲಾ? - ETV Bharath Kannada news

ಅಮೆರಿಕದಲ್ಲಿ ನಡೆಯಲಿರುವ ಮೇಜರ್​ ಲೀಗ್​ ಕ್ರಿಕೆಟ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಫ್ರಾಂಚೈಸಿ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ಆಡುತ್ತಿದ್ದು, ಫಾಫ್​​ ಡು ಪ್ಲೆಸಿಸ್​ ನಾಯಕರಾಗಿದ್ದಾರೆ. ​

Texas Super Kings announce Faf du Plessis as captain
ಫಾಫ್​ ಡು ಪ್ಲೆಸಿಸ್
author img

By

Published : Jun 16, 2023, 10:26 PM IST

ಇತ್ತೀಚೆಗೆ ಲೀಗ್​ ಕ್ರಿಕೆಟ್​​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ದೇಶಗಳು ಇಂಥ ಲೀಗ್‌ಗ​ಳನ್ನು ನಡೆಸಿ ಚುಟುಕು ಕ್ರಿಕೆಟ್ ಎಂಜಾಯ್ ಮಾಡುತ್ತಿದ್ದಾರೆ. ಇದು ಟೆಸ್ಟ್​ ಮತ್ತು ಏಕದಿನ ಮಾದರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹಿರಿಯ ಆಟಗಾರರು ಹೇಳುತ್ತಿದ್ದಾರೆ. ಆದರೂ ಟಿ20 ಮಾದರಿಯ ಆಟ ನೋಡಲು ಜನ ಇಷ್ಟಪಡುತ್ತಾರೆ ಎಂಬುದೂ ಸತ್ಯ.

ಆದರೆ ಈಗ ಕ್ರಿಕೆಟ್​ನಿಂದ ದೂರ ಉಳಿದಿದ್ದ ಅಮೆರಿಕ ಕೂಡ ಚುಟುಕು ಕ್ರಿಕೆಟ್​ ಮಾರು ಹೋಗಿದೆ. ಮೇಜರ್ ಲೀಗ್ ಕ್ರಿಕೆಟ್​ ನಡೆಸಲು ಮುಂದಾಗಿದೆ. 2022ರಲ್ಲಿ ಉದ್ಘಾಟನಾ ಲೀಗ್​ ನಡೆದಿತ್ತು. 2023ರಲ್ಲಿ ಐಪಿಎಲ್​ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಫ್ರಾಂಚೈಸಿಯ ಲೀಗ್ ಆಯೋಜನೆ ಮಾಡುತ್ತಿದೆ. ಇದಕ್ಕೆ ಈಗಾಗಲೇ ಆರು ಫ್ರಾಂಚೈಸಿಗಳು ಸೇರಿಕೊಂಡಿವೆ. ಈ ಪೈಕಿ ಮೂರು ಭಾರತದ ಮೂಲದವು. ಚೆನ್ನೈ ಸೂಪರ್​ ಕಿಂಗ್ಸ್​ನ ಟೆಕ್ಸಾಸ್ ಸೂಪರ್ ಕಿಂಗ್ಸ್​ (ಟಿಎಸ್​ಕೆ), ಮುಂಬೈ ಇಂಡಿಯನ್ಸ್​ನ MI ನ್ಯೂಯಾರ್ಕ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ನ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳು ಆಡಲಿವೆ. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್, ಸಿಯಾಟಲ್ ಓರ್ಕಾಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳಿವೆ.

ಮೇಜರ್​ ಲೀಗ್​​ ಕ್ರಿಕೆಟ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮತ್ತೆ ಒಂದಾಗಿದೆ. ಐಪಿಎಲ್​ನಲ್ಲಿ ಆರ್​​ಸಿಬಿಗೆ ಆಡುತ್ತಿರುವ ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್​ ಈಗ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಳದಿ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೆಕ್ಸಾಸ್ ಸೂಪರ್ ಕಿಂಗ್ಸ್‌ಗೆ ಇವರೇ ನಾಯಕ ಕೂಡಾ.

ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಆಡುತ್ತಿದ್ದ ಆಟಗಾರರು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದಾಗಿದ್ದಾರೆ. ಫಾಫ್ ಡು ಪ್ಲೆಸಿಸ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ಡೆವೊನ್ ಕಾನ್ವೆ, ಮಿಚೆಲ್ ಸ್ಯಾಂಟ್ನರ್ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡವರು. ಹಳೆಯ ಚೆನ್ನೈ ಸೂಪರ್​ ಕಿಂಗ್ಸ್​ನ ಆಟಗಾರರು ಒಂದೇ ತಂಡ ಸೇರಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಅನುಭವಿ ಬಲಗೈ ಬ್ಯಾಟರ್ ಪ್ಲೆಸಿಸ್ ಅವರನ್ನು ಮೇಜರ್ ಲೀಗ್ ಕ್ರಿಕೆಟ್ 2023 ರ ಸೀಸನ್‌ಗೆ ಟಿಎಸ್​ಕೆ ನಾಯಕ ಎಂದು ಪ್ರಕಟಿಸಿದೆ. ಆದರೆ ಅವರು ಇನ್ನೊಂದು ಎಲ್ಲೋ ಟೀಮ್ ಅ​ನ್ನು ಸಹ ಮುನ್ನಡೆಸುತ್ತಿದ್ದಾರೆ. ಸೌಥ್ ಆಫ್ರಿಕಾ 20 ಲೀಗ್ 2023 ರಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ (ಜೆಎಸ್​ಕೆ) ಗೂ ಫಾಫ್​ ನಾಯಕ.

ಎಂಐ ನ್ಯೂಯಾರ್ಕ್​ಗೆ ಕೀರಾನ್ ಪೊಲಾರ್ಡ್ ನಾಯಕರಾಗಿರಲಿದ್ದರೆ, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಇನ್ನೂ ನಾಯಕನನ್ನು ಗುರುತಿಸಿಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್​ ಅನ್ನು ಆರನ್ ಫಿಂಚ್ ಮುನ್ನಡೆಸಲಿದ್ದಾರೆ. ವಾಷಿಂಗ್ಟನ್ ಫ್ರೀಡಂ ತಂಡದ ಮುಂದಾಳತ್ವವನ್ನು ಮೋಸೆಸ್ ಹೆನ್ರಿಕೇಸ್​ಗೆ ನೀಡಲಾಗಿದೆ.

ಮುಂದಿನ ತಿಂಗಳಿನಿಂದ ಲೀಗ್ ಆರಂಭ: ಜುಲೈ 13 ರಂದು ಪ್ರಾರಂಭವಾಗುವ ಲೀಗ್​ ಜುಲೈ 30 2023 ರಂದು ಮುಕ್ತಾಯಗೊಳ್ಳಲಿದೆ. ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ಚರ್ಚ್​ ಸ್ಟ್ರೀಟ್​ ಪಾರ್ಕ್​ ಎಂಬ ಎರಡು ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. 15 ಲೀಗ್​ ಪಂದ್ಯಗಳು ನಡೆಯಲಿದೆ. ಎಲ್ಲ ತಂಡಗಳ ಒಂದೊಂದು ಬಾರಿ ಮುಖಾಮುಖಿ ಪಂದ್ಯ ಆಡುತ್ತವೆ. ಅಂಕಪಟ್ಟಿಯ 3 ಮತ್ತು 4 ನೇ ಸ್ಥಾನದಲ್ಲಿರುವವರು ಎಲಿಮಿನೇಟರ್​ ಆಡಲಿದ್ದು, ಗೆದ್ದವರು ಚಾಲೆಂಜರ್​ಗೆ ಆಯ್ಕೆ ಆಗುತ್ತಾರೆ. ಕ್ವಾಲಿಫೈಯರ್​ನಲ್ಲಿ ಟಾಪ್​ನಲ್ಲಿರುವ ಎರಡು ತಂಡಗಳು ಆಡಲಿದ್ದು, ಗೆದ್ದವು ನೇರ ಫೈನಲ್​ ಮತ್ತು ಸೋತವರು ಚಾಲೆಂಜರ್​ನಲ್ಲಿ ಆಡಬೇಕಿದೆ. ಚಾಲೆಂಜರ್​ನಲ್ಲಿ ಗೆದ್ದವರು ಕ್ವಾಲಿಫೈಯರ್​ನಲ್ಲಿ ಗೆದ್ದವರ ಜೊತೆ ಚಾಂಪಿಯನ್​ ಪಂದ್ಯ ಆಡಲಿದ್ದಾರೆ.

ಇದನ್ನೂ ಓದಿ: Rohit Sharma: ಪತ್ನಿಗಾಗಿ ಸಮುದ್ರಕ್ಕೆ ಹಾರಿದ ರೋಹಿತ್ ಶರ್ಮಾ! ಯಾಕೆ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.