ETV Bharat / sports

ಮಹಾರಾಜ ಟ್ರೋಫಿ: ಮಂಗಳೂರು ವಿರುದ್ಧ ಗೆದ್ದು ಪ್ಲೇ ಆಫ್‌ ತಲುಪಿದ ಹುಬ್ಬಳ್ಳಿ - ಮಂಗಳೂರು ಯುನೈಟೆಡ್​ ವಿರುದ್ಧ ಹುಬ್ಬಳ್ಳಿ ಟೈಗರ್ಸ್​ಗೆ ಗೆಲುವು

ಮಹಾರಾಜ ಟ್ರೋಫಿಯ ಗೆಲ್ಲಲೇಬೇಕಾದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ ಮತ್ತು ಮಂಗಳೂರು ಯುನೈಟೆಡ್​ ತಂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಅಂತಿಮವಾಗಿ ಹುಬ್ಬಳ್ಳಿ ಗೆಲ್ಲುವ ಮೂಲಕ ಪ್ಲೇ ಆಫ್​ ತಲುಪಿತು.

maharaja-trophy
ಜಿದ್ದಾಜಿದ್ದಿನ ಪಂದ್ಯದಲ್ಲಿ ಮಂಗಳೂರು ವಿರುದ್ಧ ಹುಬ್ಬಳ್ಳಿಗೆ ಗೆಲುವು
author img

By

Published : Aug 23, 2022, 7:36 AM IST

ಬೆಂಗಳೂರು: ನಿರ್ಣಾಯಕ ಪಂದ್ಯದಲ್ಲಿ ನಾಯಕನ ಆಟವಾಡಿದ ಲವ್‌ನೀತ್‌ ಸಿಸೋಡಿಯಾ (80 ರನ್) ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಹುಬ್ಬಳ್ಳಿ ಟೈಗರ್ಸ್​ ತಂಡ ಮಂಗಳೂರು ಯುನೈಟೆಡ್​ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಹುಬ್ಬಳ್ಳಿ ಟೈಗರ್ಸ್​ ತಂಡ ಪ್ಲೇ ಅಫ್‌ ಹಂತಕ್ಕೇರಿದೆ. ಹುಬ್ಬಳ್ಳಿ ತಾನಾಡಿದ 10 ಪಂದ್ಯಗಳಲ್ಲಿ 5 ಗೆದ್ದು 5 ರಲ್ಲಿ ಸೋಲುವ ಮೂಲಕ 10 ಅಂಕ ಗಳಿಸಿ ಪಾಯಿಂಟ್​ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ಈ ಸ್ಥಾನ ಗಿಟ್ಟಿಸಿಕೊಂಡಿತು. ಇಂದು ಎಲಿಮಿನೇಟರ್​ ಪಂದ್ಯದಲ್ಲಿ ಹುಬ್ಬಳ್ಳಿ ತಂಡ ಮೈಸೂರು ವಾರಿಯರ್ಸ್​ ಎದುರಿಸಲಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ತಂಡ ಅಭಿನವ್‌ ಮನೋಹರ್‌ ಔಟಾಗದೇ 69 ಹಾಗೂ ಅಮಿತ್‌ ವರ್ಮಾರ 47 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಆರಂಭಿಕ ಸಮರ್ಥ್​ 31 ರನ್​ ಚಚ್ಚಿದರು. ಇದರಿಂದ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 184 ರನ್‌ ಕಲೆಹಾಕಿತು. ಹುಬ್ಬಳ್ಳಿ ಟೈಗರ್ಸ್‌ ಪರ ನವೀನ್‌ 2 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಗೆಲ್ಲಲೇಬೇಕಾದ ಪಂದ್ಯದಲ್ಲಿ 185 ರನ್‌ಗಳ ಕಠಿಣ ಸವಾಲು ಪಡೆದ ಹುಬ್ಬಳ್ಳಿ ತಂಡಕ್ಕೆ ನಾಯಕ ಲವ್​ನೀತ್​ ಸಿಸೋಡಿಯಾ ಕನಸಿನ ಆರಂಭ ನೀಡಿದರು. ಮಹಮದ್​ ತಾಹಾ ಜೊತೆ ದೊಡ್ಡ ಇನಿಂಗ್ಸ್​ ಕಟ್ಟಿದ ಲವ್​ನೀತ್​ ಮೊದಲ ವಿಕೆಟ್​ಗೆ 88 ರನ್​ ಕಲೆ ಹಾಕಿದರು. ಉತ್ತಮವಾಗಿ ಆಡುತ್ತಿದ್ದ ತಾಹಾ 34 ರನ್​ಗೆ ಔಟಾದರು. ಬಳಿಕ ಬಂದ ಶಿವಕುಮಾರ್​ ಕೂಡ 34 ರನ್ ಸೇರಿಸಿದರು.

ಅಬ್ಬರದ ಆಟವಾಡಿದ ನಾಯಕ ಲವ್​ನೀತ್​ 80 ರನ್​ ಗಳಿಸಿದರು. ಕೊನೆಯಲ್ಲಿ ತುಷಾರ್​ ಸಿಂಗ್​ 15 ರನ್‌ಗಳ ಮೂಲಕ 17.5 ಓವರ್​ಗಳಲ್ಲಿ ಸವಾಲು ಮೆಟ್ಟಿ ನಿಂತು ತಂಡ ಪ್ಲೇ ಆಫ್​ ಹಂತ ತಲುಪುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಮಂಗಳೂರು ಯುನೈಟೆಡ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 184. ಆರ್‌.ಸಮರ್ಥ್‌- 31, ಅಮಿತ್‌ ವರ್ಮಾ 47, ಅಭಿನವ್‌ ಮನೋಹರ್‌ 69*, ಜಿ.ನವೀನ್‌ 22/2

ಹುಬ್ಬಳ್ಳಿ ಟೈಗರ್ಸ್‌: 17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 189. ಲವ್‌ನೀತ್‌ ಸಿಸೋಡಿಯಾ 80, ಮೊಹಮ್ಮದ್‌ ತಾಹ 34, ಶಿವಕುಮಾರ್‌ 34, ವೈಶಾಖ್‌ ವಿಜಯ್‌ ಕುಮಾರ್‌ 36/2)

ಇದನ್ನೂ ಓದಿ: IND vs ZIM 3rd ODI: ಕೊನೆ ಪಂದ್ಯದಲ್ಲಿ ಹೋರಾಡಿ ಸೋತ ಜಿಂಬಾಬ್ವೆ.. ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.