ETV Bharat / sports

ಭಾರತದ ವಿರುದ್ಧದ ಟಿ 20ಯಿಂದ ಲುಂಗಿ ಎನ್‌ಗಿಡಿ ಹೊರಕ್ಕೆ: ಟೆಸ್ಟ್​​ಗೆ​​ ಮರಳುವ ಸಾಧ್ಯತೆ - ಬ್ಯೂರಾನ್ ಹೆಂಡ್ರಿಕ್ಸ್

ಗಾಯದ ಕಾರಣ ಲುಂಗಿ ಎನ್‌ಗಿಡಿ ಭಾರತದ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ಬ್ಯೂರಾನ್ ಹೆಂಡ್ರಿಕ್ಸ್ ದಕ್ಷಿಣ ಆಫ್ರಿಕಾ ತಂಡವನ್ನು ಸೇರಲಿದ್ದಾರೆ.

Lungi Ngidi out  India T20I series  Beuran Hendricks  India tour of South Africa  South Africa vs India 1st T20I  Kingsmead Durban  ಭಾರತ ವಿರುದ್ಧದ ಟಿ20  ಲುಂಗಿ ಎನ್‌ಗಿಡಿ ಹೊರ  ಟೆಸ್ಟ್​​ ಮರಳುವ ಸಾಧ್ಯತೆ  ಬ್ಯೂರಾನ್ ಹೆಂಡ್ರಿಕ್ಸ್  ಲುಂಗಿ ಬದಲಿಗೆ ಹೆಂಡ್ರಿಕ್ಸ್
ಟೆಸ್ಟ್​​ ಮರಳುವ ಸಾಧ್ಯತೆ
author img

By ETV Bharat Karnataka Team

Published : Dec 9, 2023, 10:59 AM IST

ಡರ್ಬನ್​, ಸೌತ್​ ಆಫ್ರಿಕಾ​: ಭಾರತದ ವಿರುದ್ಧದ ತವರಿನ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಹಿನ್ನಡೆ ಆಗಿದೆ. ಭಾನುವಾರದಿಂದ ಭಾರತದ ವಿರುದ್ಧ ಟಿ-20 ಪಂದ್ಯಗಳು ಆರಂಭವಾಗುತ್ತಿದೆ. ಇದಕ್ಕೂ ಮುನ್ನ ಗಾಯಕ್ಕೆ ತುತ್ತಾಗಿರುವ ದಕ್ಷಿಣ ಆಫ್ರಿಕಾ ಪಡೆಯ ಸ್ಟಾರ್​ ಅನುಭವಿ ಬೌಲರ್​ ಲುಂಗಿ ಎನ್‌ಗಿಡಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಲುಂಗಿ ಅವರ ಎಡ ಪಾದ ನೋವಿಗೆ ತುತ್ತಾಗಿರುವುದರಿಂದ ಅವರನ್ನು ಕೈಬಿಡಲಾಗಿದೆ. ಶೀಘ್ರದಲ್ಲೇ ಪುನರ್ವಸತಿಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿ ತಯಾರಿಗಾಗಿ ಡಿಸೆಂಬರ್ 14-17 ರವರೆಗೆ ನಾಲ್ಕು- ದಿನದ ಸ್ಥಳೀಯ ಪಂದ್ಯದಲ್ಲಿ ಆಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ.

ಲುಂಗಿ ಬದಲಿಗೆ ಹೆಂಡ್ರಿಕ್ಸ್: 33ರ ಹರೆಯದ ಹೆಂಡ್ರಿಕ್ಸ್ 2021ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಪರ ಟಿ-20ಗಳಲ್ಲಿ ಆಡಿದ್ದರು. ಅವರು 19 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾವು ಡಿಸೆಂಬರ್ 10, 12 ಮತ್ತು 14 ರಂದು ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡದ ವಿರುದ್ಧ ಕ್ರಮವಾಗಿ ಡರ್ಬನ್, ಜಿಕೆಬರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಮೂರು ಪಂದ್ಯಗಳನ್ನು ಆಡಲಿದೆ.

ಭಾನುವಾರದಿಂದ ಪಂದ್ಯಗಳು ಆರಂಭವಾಗಲಿರುವ ಕಾರಣ ಭಾರತದ ಟಿ20 ತಂಡ ಗುರುವಾರ ದಕ್ಷಿಣ ಆಫ್ರಿಕಾವನ್ನು ತಲುಪಿದೆ. ಈಗಾಗಲೇ ಆಟಗಾರರು ಅಭ್ಯಾಸಕ್ಕೆ ಇಳಿದಿದ್ದು, ನೆಟ್ಸ್​ನಲ್ಲಿ ಬೆವರಿಳಿಸಿದ್ದಾರೆ. ವಿಶ್ವಕಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಶುಭಮನ್​ ಗಿಲ್​, ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಿದ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯ್ ಮತ್ತು ಮುಖೇಶ್ ಕುಮಾರ್ ಅವರ ಮೇಲೆ ಹೆಚ್ಚಿನ ದೃಷ್ಟಿ ಕೇಂದ್ರೀಕೃತವಾಗಿದೆ.

ದಕ್ಷಿಣ ಆಫ್ರಿಕಾ ಟಿ20 ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಓಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ (1ನೇ ಮತ್ತು 2ನೇ T20I), ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್ (1ನೇ ಮತ್ತು 2ನೇ T20I), ಕೆರಾಜ್, ಕೆಹಾವ್ಸ್, ಕೆಹಾವ್ಸ್ ಡೇವಿಡ್ ಮಿಲ್ಲರ್, ಬ್ಯೂರಾನ್ ಹೆಂಡ್ರಿಕ್ಸ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.

ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ), ಜಿತೇಶ್ ಶರ್ಮಾ (ವಿ,ಕೀ), ರವೀಂದ್ರ ಜಡೇಜಾ (ಉ.ನಾ), ವಾಷಿಂಗ್ಟನ್ ಸುಂದರ್​, ರವಿ ಬಿಷ್ಣೋಯ್, ಕುಲ್ದೀಪ್​ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

ಓದಿ: ಪ್ರೊ ಕಬಡ್ಡಿ 10ನೇ ಆವೃತ್ತಿ: ಯು ಮುಂಬಾ ಪಲ್ಟಿ ಹೊಡಿಸಿದ ಪುಣೇರಿ ಪಲ್ಟನ್​ಗೆ ಎರಡನೇ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.