ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯ ಅನಿರ್ದಿಷ್ಟ ಉಲ್ಲಂಘನೆ ಮಾಡಿದ್ದಕ್ಕಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ಗೆ ಅವರ ಪಂದ್ಯದ ಸಂಭಾವನೆಯ ಶೇ.20ರಷ್ಟನ್ನು ದಂಡವಾಗಿ ಪಾವತಿಸಬೇಕಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಎಲ್ಎಸ್ಜಿ 18 ರನ್ಗಳ ಸೋಲು ಕಂಡಿತ್ತು.
ಈ ಪಂದ್ಯದಲ್ಲಿ ರಾಹುಲ್ ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ. ರಾಹುಲ್ ಟೀಮ್‌ಮೇಟ್ ಆಲ್ ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಇದೇ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಸ್ಟೋಯಿನಿಸ್ ಬ್ಯಾಟಿಂಗ್ ಮಾಡುವ ವೇಳೆ ಹೇಜಲ್ವುಡ್ರ ಒಂದು ಎಸೆತ ವೈಡ್ ಆಗಿತ್ತು. ಆದರೆ, ಚೆಂಡನ್ನು ಎಸೆಯುವ ಮುನ್ನವೇ ಸ್ಟೋಯಿನಿಸ್ ಮುಂದೆ ಹೋಗಿದ್ದರಿಂದ ಆ ಎಸೆತವನ್ನು ವೈಡ್ ಕೊಡಲು ಅಂಪೈರ್ ನಿರಾಕರಿಸಿದ್ದರು. ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಅವರು ಅಂಪೈರ್‌ರತ್ತ ತಿರುಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ಟೋಯಿನಿಸ್ ನೀತಿ ಸಂಹಿತಿ ಉಲ್ಲಂಘಿಸಿರುವ ಆರೋಪಕ್ಕೆ ವಾಗ್ದಂಡನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಡುಪ್ಲೆಸಿ ಕೆಚ್ಚೆದೆಯ ಬ್ಯಾಟಿಂಗ್, ಬೌಲರ್ಗಳ ಮಿಂಚು: ಲಖನೌ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್