ನವದೆಹಲಿ: ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಬುಧವಾರ ತಮ್ಮ ಟ್ವಿಟರ್ನಲ್ಲಿ ಟೆಸ್ಟ್ ತಂಡದ ಜರ್ಸಿ ತೊಟ್ಟಿರುವ ಫೋಟೋ ಶೇರ್ ಮಾಡಿಕೊಂಡಿದ್ದು, ತಾವೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇನ್ನೂ ಸಾಕಷ್ಟು ದೂರ ಸಾಗಬೇಕಿದೆ ಎಂದು ಬರೆದುಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ರವೀಂದ್ರ ಜಡೇಜಾ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದರೆ ಜಡೇಜಾ ಮೂರು ಮಾದರಿಯಲ್ಲಿ ಸಕ್ರಿಯರಾಗಿರುವುದರಿಂದ ಕೆಲಸದೊತ್ತಡವನ್ನು ನಿಯಂತ್ರಿಸಲು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯಾಗಲಿದ್ದಾರೆ ಎಂದು ವರದಿಯಾಗಿದ್ದವು. ಆದರೆ ಇದನ್ನೆಲ್ಲಾ ಒಂದೇ ಪೋಸ್ಟ್ ಮೂಲಕ ಜಡೇಜಾ ತೆರೆ ಎಳೆದಿದ್ದಾರೆ.
-
Long way to go💪🏻💪🏻 pic.twitter.com/tE9EdFI7oh
— Ravindrasinh jadeja (@imjadeja) December 15, 2021 " class="align-text-top noRightClick twitterSection" data="
">Long way to go💪🏻💪🏻 pic.twitter.com/tE9EdFI7oh
— Ravindrasinh jadeja (@imjadeja) December 15, 2021Long way to go💪🏻💪🏻 pic.twitter.com/tE9EdFI7oh
— Ravindrasinh jadeja (@imjadeja) December 15, 2021
ಭಾರತದ ಟೆಸ್ಟ್ ಜರ್ಸಿಯನ್ನು ತೊಟ್ಟಿರುವ ಫೋಟೋ ಶೇರ್ ಮಾಡಿಕೊಂಡಿರುವ ಜಡ್ಡು, " ಇನ್ನೂ ತುಂಬಾ ದೂರ ಸಾಗಬೇಕಿದೆ(Long way to go) " ಎಂದು ಬರೆದುಕೊಂಡಿದ್ದಾರೆ. ಅಂದರೆ ತಾವೂ ಟೆಸ್ಟ್ ಮಾದರಿಯಲ್ಲಿ ಇನ್ನೂ ಸಾಕಷ್ಟು ಸಮಯ ಆಡುವುದಿದೆ ಎಂಬರ್ಥದಲ್ಲಿ ಆಲ್ರೌಂಡರ್ ಬರೆದುಕೊಂಡಿದ್ದಾರೆ.
33 ವರ್ಷದ ಜಡೇಜಾ 57 ಟೆಸ್ಟ್ ಪಂದ್ಯಗಳಿಂದ 2,195 ಹಾಗೂ 232 ವಿಕೆಟ್ ಪಡೆದಿದ್ದಾರೆ. ಗಾಯದಿಂದ ಟೆಸ್ಟ್ ಸರಣಿ ತಪ್ಪಿಸಿಕೊಂಡಿರುವ ಅವರೂ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.