ಮೊಹಾಲಿ: ಶ್ರೀಲಂಕಾ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ 100ನೇ ಟೆಸ್ಟ್ ಪಂದ್ಯವಾಗಲಿದೆ. ಈ ವಿಶೇಷ ಮೈಲುಗಲ್ಲನ್ನು ಸ್ಥಾಪಿಸಲಿರುವ ವಿರಾಟ್ಗೆ ದಿಗ್ಗಜರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಶುಭಕೋರಿದ್ದಾರೆ.
ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕೊಹ್ಲಿ ಭಾರತ ತಂಡದ ಪರ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ 12ನೇ ಕ್ರಿಕೆಟಿಗನಾಗಿದ್ದಾರೆ. ಶ್ರೀಲಂಕಾ ವಿರುದ್ಧ ಮಾರ್ಚ್ 4-8ರವರೆಗೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಬಿಂದ್ರಾ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
-
𝗗𝗢 𝗡𝗢𝗧 𝗠𝗜𝗦𝗦!
— BCCI (@BCCI) March 2, 2022 " class="align-text-top noRightClick twitterSection" data="
Welcome to the 1⃣0⃣0⃣-Test club Virat Kohli 👏 👏#TeamIndia greats share their thoughts on @imVkohli's landmark Test, his achievements & the impact he's had on Indian cricket. 🔝 👍
Watch the full feature 🎥 🔽https://t.co/m135xwB2zt pic.twitter.com/gzN71BZnCn
">𝗗𝗢 𝗡𝗢𝗧 𝗠𝗜𝗦𝗦!
— BCCI (@BCCI) March 2, 2022
Welcome to the 1⃣0⃣0⃣-Test club Virat Kohli 👏 👏#TeamIndia greats share their thoughts on @imVkohli's landmark Test, his achievements & the impact he's had on Indian cricket. 🔝 👍
Watch the full feature 🎥 🔽https://t.co/m135xwB2zt pic.twitter.com/gzN71BZnCn𝗗𝗢 𝗡𝗢𝗧 𝗠𝗜𝗦𝗦!
— BCCI (@BCCI) March 2, 2022
Welcome to the 1⃣0⃣0⃣-Test club Virat Kohli 👏 👏#TeamIndia greats share their thoughts on @imVkohli's landmark Test, his achievements & the impact he's had on Indian cricket. 🔝 👍
Watch the full feature 🎥 🔽https://t.co/m135xwB2zt pic.twitter.com/gzN71BZnCn
100ನೇ ಟೆಸ್ಟ್ ಮೈಲುಗಲ್ಲಿನ ಹೊಸ್ತಿಲಲ್ಲಿರುವ 33 ವರ್ಷದ ಬ್ಯಾಟರ್ ಬಗ್ಗೆ ಲೆಜೆಂಡರಿ ಕ್ರಿಕೆಟಿಗರು ಶುಭಕೋರಿದ್ದು, ಈ ಸಂದರ್ಭದಲ್ಲಿ ಕೊಹ್ಲಿಯ ವೃತ್ತಿಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು 2007ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ನಿಮ್ಮ ಬಗ್ಗೆ ಮೊದಲ ಬಾರಿಗೆ ಕೇಳಿದ ನೆನಪಿದೆ. ನೀವೆಲ್ಲರೂ ಅಂಡರ್ 19 ವಿಶ್ವಕಪ್ಗಾಗಿ ಮಲೇಷ್ಯಾಗೆ ತೆರಳುವ ಯೋಜನೆಯಲ್ಲಿದ್ದಿರಿ. ಆ ವೇಳೆ ಕೆಲವು ಭಾರತೀಯ ಆಟಗಾರರು ನಿಮ್ಮ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವಿಶ್ವಕಪ್ನಲ್ಲಿ ಎದುರು ನೋಡಬಹುದಾದ ಆಟಗಾರ, ಆತ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ ಎಂದು ಅವರು ಮಾತನಾಡುತ್ತಿದ್ದರು ಎಂದು ಸಚಿನ್ ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಒಂದು ಪಂದ್ಯವನ್ನು ಆಡಲು ಸಾಧ್ಯವಾಗುವುದು ಅದ್ಭುತ. ಆದರೆ ನೂರು ಬಾರಿ ಆಡಲು ಸಾಧ್ಯವಾದರೆ ಅದು ಒಂದು ಅದ್ಭುತ ಸಾಧನೆ. ವಿರಾಟ್ ಕೊಹ್ಲಿ ಅವರ ಈ ಸಾಧನೆ ಹೆಮ್ಮೆ ಪಡುವಂತಹದ್ದು ಎಂದು ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಅದ್ಭುತವಾದ ಕ್ರಿಕೆಟ್ ಜರ್ನಿಯನ್ನು ಹೊಂದಿದ್ದಾರೆ. 10-11 ವರ್ಷಗಳ ಹಿಂದೆ ಪ್ರಾರಂಭವಾಗಿ, ಇಲ್ಲಿಯವರೆಗೆ ತಲುಪಿರುವುದು ಅಸಾಧಾರಣ ಸಾಧನೆಯಾಗಿದೆ. ಬಿಸಿಸಿಐ ಪರವಾಗಿ ಮತ್ತು ಮಾಜಿ ನಾಯಕ ಮತ್ತು 100 ಪಂದ್ಯಗಳನ್ನಾಡಿರುವ ಮಾಜಿ ಕ್ರಿಕೆಟಿಗನಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಬಿಸಿಸಿಐ ಕೇಂದ್ರೀಯ ಗುತ್ತಿಗೆ: ರಹಾನೆ, ಪೂಜಾರ B ಗ್ರೇಡ್ಗೆ, ಪಾಂಡ್ಯ C ಗ್ರೇಡ್ಗೆ ಹಿಂಬಡ್ತಿ
ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಬಿಸಿಸಿಐ: ಕೊಹ್ಲಿಯ 100ನೇ ಟೆಸ್ಟ್ಗೆ ಪ್ರೇಕ್ಷಕರಿಗೆ ಅವಕಾಶ