ಮುಂಬೈ: ನ್ಯೂಜಿಲ್ಯಾಂಡ್ನ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮೈದಾನದ ಅಂಪೈರ್ ನೀಡಿದ ಎಲ್ಬಿ ಡಬ್ಲ್ಯೂ ತೀರ್ಪನ್ನು ಪರಾಮರ್ಶಿಸಿದ ಟಿವಿ ಅಂಪೈರ್, ಚೆಂಡು ಮೊದಲು ಬ್ಯಾಟ್ ಅಥವಾ ಪ್ಯಾಡ್ಗೆ ತಗುಲಿದೆಯೇ ಎನ್ನುವುದಕ್ಕೆ ಸಂಪೂರ್ಣ ಸ್ಪಷ್ಟತೆ ಸಿಗದ ಕಾರಣ ಔಟ್ ಎಂದು ತೀರ್ಪು ನೀಡಿದ್ದರು. ಆದರೆ, ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಅದನ್ನ ಸರಳವಾಗಿ ನಾಟೌಟ್ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಎದುರಿಸಿದ ನಾಲ್ಕನೇ ಎಸೆತದಲ್ಲಿ ಅಜಾಜ್ ಪಟೇಲ್ ಬೌಲಿಂಗ್ನಲ್ಲಿ ಮೈದಾನದ ಅಂಪೈರ್ ಅನಿಲ್ ಚೌದರಿ ಔಟ್ ಎಂದು ತೀರ್ಪು ನೀಡಿದರು. ತಕ್ಷಣ ವಿರಾಟ್ ಕೊಹ್ಲಿ ರಿವ್ಯೂವ್ ತೆಗೆದುಕೊಂಡರು. ಆದರೆ, ಟಿವಿ ರಿಪ್ಲೇ ವೀಕ್ಷಿಸಿದ 3ನೇ ಅಂಪೈರ್ ವಿರೇಂದ್ರ ಶರ್ಮಾ, ಚೆಂಡು ಮೊದಲು ಬ್ಯಾಟ್ ಅಥವಾ ಪ್ಯಾಡ್ಗೆ ತಗುಲಿದೆ ಎನ್ನುವುದರ ಬಗ್ಗೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಮೈದಾನದ ಅಂಪೈರ್ ತೀರ್ಪನ್ನು ಎತ್ತಿ ಹಿಡಿದಿದ್ದರು.
-
This is simply - not out !!!!! We often discuss technology & its use / accuracy. The main problem@is the interpretation of the technology. Here’s a perfect example of the ball clearly hitting the edge of the bat first. https://t.co/OATRzIHcfg
— Shane Warne (@ShaneWarne) December 4, 2021 " class="align-text-top noRightClick twitterSection" data="
">This is simply - not out !!!!! We often discuss technology & its use / accuracy. The main problem@is the interpretation of the technology. Here’s a perfect example of the ball clearly hitting the edge of the bat first. https://t.co/OATRzIHcfg
— Shane Warne (@ShaneWarne) December 4, 2021This is simply - not out !!!!! We often discuss technology & its use / accuracy. The main problem@is the interpretation of the technology. Here’s a perfect example of the ball clearly hitting the edge of the bat first. https://t.co/OATRzIHcfg
— Shane Warne (@ShaneWarne) December 4, 2021
ಇದು ಸರಳವಾಗಿ ನಾಟೌಟ್!!!!, ನಾವು ಸಾಮಾನ್ಯವಾಗಿ ತಂತ್ರಜ್ಞಾನ ಮತ್ತು ಅದರ ಬಳಕೆ/ನಿಖರತೆಯನ್ನು ಚರ್ಚಿಸುತ್ತೇವೆ. ಇಲ್ಲಿ ತಂತ್ರಜ್ಞಾನವನ್ನು ವ್ಯಾಖ್ಯಾನಿಸುವಾಗ ತಪ್ಪಾಗಿದೆ. ಚೆಂಡು ಮೊದಲು ಬ್ಯಾಟ್‌ನ ಅಂಚಿಗೆ ಸ್ಪಷ್ಟವಾಗಿ ಬಡಿದಿದೆ ಎಂಬುದಕ್ಕೆ ಒಂದು ಪರಿಪೂರ್ಣ ಉದಾಹರಣೆ ಇಲ್ಲಿದೆ" ಎಂದು ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಆಗಿರುವ ವಿಡಿಯೋಗೆ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಈ ತೀರ್ಪಿನಿಂದ ತಕ್ಷಣ ಕುಪಿತರಾದ ವಿರಾಟ್ ಕೊಹ್ಲಿ, ಲೆಗ್ ಅಂಪೈರ್ ನಿತಿನ್ ಮೆನನ್ ಅವರ ಜೊತೆಗೆ ಮಾತಿನ ಚಕಮಕಿ ನಡೆಸಿ ಮೈದಾನವನ್ನು ತೊರೆದಿದ್ದರು. ಈ ತೀರ್ಪಿನ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೇ ಐಸಿಸಿ ನಿಯಮ 36.2.2ನಲ್ಲಿ ಒಂದೇ ಸಮಯದಲ್ಲಿ ಚೆಂಡು ಬ್ಯಾಟರ್ ಮತ್ತು ಬ್ಯಾಟ್ಗೆ ತಾಗಿದರೆ, ಅದನ್ನು ಬ್ಯಾಟ್ಗೆ ತಾಗಿದೆ ಎಂದು ಪರಿಗಣಿಸಬೇಕೆಂದು ತಿಳಿಸಿದೆ.