ETV Bharat / sports

ಪಾಕ್​ ವಿರುದ್ಧ ಅಮೋಘ ಆಟದ ಫಲ: ಟಿ20 ರ‍್ಯಾಂಕಿಂಗ್​ನಲ್ಲಿ ಏರಿಕೆ ಕಂಡ ಕೊಹ್ಲಿ - ಹಾರ್ದಿಕ್​ ಪಾಂಡೆ

ಟಿ20 ಕ್ರಿಕೆಟ್‌​​ ಬ್ಯಾಟಿಂಗ್​, ಬೌಲಿಂಗ್​ ಹಾಗೂ ಅಲ್​ರೌಂಡರ್​ ರ‍್ಯಾಂಕಿಂಗ್‌ ಅನ್ನು ಐಸಿಸಿ ಇಂದು ಪ್ರಕಟಿಸಿದೆ.

king-kohli-storms-into-top10-t20-batters-list
ಪಾಕ್​ ವಿರುದ್ಧ ಅಮೋಘ ಆಟ: ಟಿ20 ರ‍್ಯಾಂಕಿಂಗ್​ನಲ್ಲಿ ಏರಿಕೆ ಕಂಡ ಕಿಂಗ್ ಕೊಹ್ಲಿ
author img

By

Published : Oct 26, 2022, 5:40 PM IST

ದುಬೈ: ಟಿ20 ಕ್ರಿಕೆಟ್​​ ಬ್ಯಾಟಿಂಗ್​ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ 5 ಸ್ಥಾನಗಳಷ್ಟು ಜಿಗಿತ ಕಂಡಿದ್ದು, 9ನೇ ರ‍್ಯಾಂಕ್​ ಪಡೆದಿದ್ದಾರೆ. ಪಾಕಿಸ್ತಾನದ ವಿಕೆಟ್​ ಕೀಪರ್​ ಮತ್ತು ಬ್ಯಾಟರ್ ಮೊಹಮ್ಮದ್​​ ರಿಜ್ವಾನ್​ 849 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಕಳೆದ ಭಾನುವಾರ ಕೊಹ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್​ಗಳ ನೆರವಿನೊಂದಿಗೆ ಅಜೇಯ 82 ರನ್​ ಸಿಡಿಸಿದ್ದರು. ಇದರಿಂದ ಟಿ20 ಕ್ರಿಕೆಟ್​ನ ಬ್ಯಾಟಿಂಗ್​ನಲ್ಲಿ ಟಾಪ್​ 10ರೊಳಗೆ ಅವರು ಸ್ಥಾನ ಗಿಟ್ಟಿಸಿದ್ದಾರೆ.

ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ 831 ಪಾಯಿಂಟ್​ಗಳೊಂದಿಗೆ ಮೂರು ಸ್ಥಾನ ಜಿಗಿತ ಕಂಡು ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕಾನ್ವೆ 58 ಬಾಲ್​ಗಳಲ್ಲಿ 92 ರನ್​ಗಳನ್ನು ಬಾರಿಸಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್​ : ಮುಂದಿನ ಪಂದ್ಯದಲ್ಲಿ ಭಾರತದ ಪ್ರಮುಖ ಆಲ್​ರೌಂಡರ್​ ಆಡುವುದು ಅನುಮಾನ

ಎರಡನೇ ಸ್ಥಾನದಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಸೂರ್ಯಕುಮಾರ್ ಯಾದವ್ ಮೂರನೇ ರ‍್ಯಾಂಕ್​ ಪಡೆದಿದ್ದಾರೆ. ನಂತರದಲ್ಲಿ ಪಾಕಿಸ್ತಾನದ ಕ್ಯಾಪ್ಟನ್​ ಬಾಬರ್​ ಅಜಂ (799) ಹಾಗೂ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ (762) ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್‌ನ ಫಿನ್ ಅಲೆನ್ ರ‍್ಯಾಂಕ್ ಕೂಡ ಏರಿಕೆಯಾಗಿದ್ದು, 17ನೇ ಸ್ಥಾನದಿಂದ 13ನೇ ಸ್ಥಾನ ಪಡೆದಿದ್ದಾರೆ.

ಭುವಿ ಬೌಲಿಂಗ್‌ ಸಾಧನೆ: ಬೌಲಿಂಗ್​ ವಿಭಾಗದಲ್ಲಿ ಭುವನೇಶ್ವರ ಕುಮಾರ್​ ಎರಡು ಸ್ಥಾನಗಳನ್ನು ಜಿಗಿತ ಕಂಡು ಟಾಪ್​ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಆಸ್ಟ್ರೇಲಿಯಾದ ಸೀಮರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಹಿಂದಿಕ್ಕಿ ಅಗ್ರ ರ‍್ಯಾಂಕ್​ ಪಡೆದಿದ್ದಾರೆ.

ಅಲ್​ರೌಂಡರ್​ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ಮೂರನೇ ಸ್ಥಾನ ಪಡೆದಿದ್ದಾರೆ. ಬಾಂಗ್ಲಾದೇಶದ ಕ್ಯಾಪ್ಟನ್​ ಶಕೀಬ್​ ಅಲ್​ ಹಸನ್ ಮೊದಲ ರ‍್ಯಾಂಕ್ ಹೊಂದಿದ್ದಾರೆ. ಅಫ್ಘಾನಿಸ್ತಾನದ ಕ್ಯಾಪ್ಟನ್​ ಮೊಹಮ್ಮದ್ ನಬಿ ಕೇವಲ 14 ಪಾಯಿಂಟ್​ಗಳ ಅಂತರದಿಂದ ಎರಡನೇ ರ‍್ಯಾಂಕ್​ ಪಡೆದಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್: ಇಂಗ್ಲೆಂಡ್‌ ವಿರುದ್ಧ ಗೆದ್ದು ಬೀಗಿದ ಐರ್ಲೆಂಡ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.