ETV Bharat / sports

ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ನನ್ನನ್ನು ಆರ್​ಸಿಬಿಗೆ ಸೇರಿಸಿಕೊಳ್ಳುವ ಬಗ್ಗೆ ಕೊಹ್ಲಿ ಮಾತನಾಡಿದ್ದರು! - ಆರ್​ಸಿಬಿ ತಂಡಕ್ಕೆ ಮ್ಯಾಕ್ಸ್​ವೆಲ್ ಸೇರ್ಪಡೆ

ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಮ್ಯಾಕ್ಸ್​ವೆಲ್​ಗಾಗಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಭಾರಿ ಪೈಪೋಟಿ ನಡೆಸಿದ್ದವು. ಕೊನೆಗೆ 14.25 ಕೋಟಿ ರೂ.ಗಳಿಗೆ ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು.

ಗ್ಲೇನ್ ಮ್ಯಾಕ್ಸ್​ವೆಲ್
ಗ್ಲೇನ್ ಮ್ಯಾಕ್ಸ್​ವೆಲ್
author img

By

Published : Apr 14, 2021, 4:17 PM IST

ಚೆನ್ನೈ: ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಓವರ್​ಗಳ ಸರಣಿ ನಡೆಯುತ್ತಿದ್ದಾಗ ನನ್ನನ್ನು ಆರ್​ಸಿಬಿಗೆ ಸೇರಿಸಿಕೊಳ್ಳಲು ನಾಯಕ ವಿರಾಟ್​ ಕೊಹ್ಲಿ ಬಯಸಿದ್ದರು ಎಂದು ಆರ್​ಸಿಬಿ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್ ಬಹಿರಂಗಪಡಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿ ನಂತರ ಒಳ್ಳೆಯ ಚಾಟ್​ ಮಾಡುತ್ತಿದ್ದೆವು. ನನ್ನ ಜೊತೆ ಮಾತನಾಡುತ್ತಾ, ಆರ್​ಸಿಬಿಯಲ್ಲಿ ಸಮರ್ಥವಾಗಿ ಆಡುವ ಬಗ್ಗೆ ಅವರು ನನ್ನ ಜೊತೆ ಮಾತನಾಡಿದ್ದರು. ಅವಕಾಶ ಸಿಕ್ಕರೆ ನಿಮ್ಮನ್ನು ಹೊಂದುವುದಕ್ಕೆ ನಾವು ಇಷ್ಟಪಡುತ್ತೇವೆ ಎಂದು ಕೊಹ್ಲಿ ಹೇಳಿದ್ದರು. ಆದರೆ ನಿಸ್ಸಂಶಯವಾಗಿ ಈ ಮಾತುಕತೆಯ ಮಧ್ಯೆ ಹರಾಜು ಇತ್ತು ಎಂದು ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮ್ಯಾಕ್ಸ್​ವೆಲ್ ಹೇಳಿದ್ದಾರೆ.

"ನಿಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಉತ್ತಮವಾಗಿರುತ್ತದೆ ಎಂದು ಅವರು ಹೇಳಿದ್ದರು. ಆಸೀಸ್ ಪ್ರವಾಸದಲ್ಲಿದ್ದಾಗಲೇ ಇದೇ ಆಲೋಚನೆಯಲ್ಲಿದ್ದರು. ಆದರೆ ಇದು ದೀರ್ಘ ಪ್ರಕ್ರಿಯೆಯಾಗಿತ್ತು. ಅದೃಷ್ಟವಶಾತ್ ನಾನು ಈಗ ಆರ್‌ಸಿಬಿಗೆ ಆಡುತ್ತಿದ್ದೇನೆ" ಎಂದು ಸ್ಫೋಟಕ ಬ್ಯಾಟ್ಸ್​ಮನ್​ ಹೇಳಿದ್ದಾರೆ.

ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಮ್ಯಾಕ್ಸ್​ವೆಲ್​ಗಾಗಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಭಾರಿ ಪೈಪೋಟಿ ನಡೆಸಿದ್ದವು. ಕೊನೆಗೆ 14.25 ಕೋಟಿ ರೂ.ಗಳಿಗೆ ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು.

ಇದನ್ನು ಓದಿ: ನಾ ಕೊಹ್ಲಿ ಆಗಿದ್ರೆ, ಚಹಾಲ್-ಕುಲ್ದೀಪ್​ ಬದಲಿಗೆ ಇವರಿಬ್ಬರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡ್ತಿದ್ದೆ : ಪನೇಸರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.