ETV Bharat / sports

ನಾಳೆ ಆಸ್ಟೇಲಿಯಾ ವಿರುದ್ಧ 3ನೇ ಟೆಸ್ಟ್‌: ಕೆ.ಎಲ್.ರಾಹುಲ್ ಬಗ್ಗೆ ರೋಹಿತ್​ ಶರ್ಮಾ ಹೇಳಿದ್ದೇನು?

author img

By

Published : Feb 28, 2023, 6:23 PM IST

ಕೆ.ಎಲ್.ರಾಹುಲ್​ರನ್ನು ಟೆಸ್ಟ್‌ ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದ್ದು ಈ ಬಗ್ಗೆ ರೋಹಿತ್​ ಶರ್ಮಾ ಪ್ರತಿಕ್ರಿಯಿಸಿದರು.

ಕೆಎಲ್​ ರಾಹುಲ್​ , ರೋಹಿತ್​ ಶರ್ಮಾ
ಕೆಎಲ್​ ರಾಹುಲ್​ , ರೋಹಿತ್​ ಶರ್ಮಾ

ಇಂದೋರ್​: ಕೆ.ಎಲ್.ರಾಹುಲ್​ ಅವರನ್ನು ಟೆಸ್ಟ್‌ ಉಪನಾಯಕ ಸ್ಥಾನದಿಂದ ತೆಗೆದು ಹಾಕಿರುವುದು ಏನನ್ನೂ ಸೂಚಿಸುವುದಿಲ್ಲ ಎಂದು ಟೀಂ​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದರು. ತಂಡದ ಓಪನರ್​ ಆಗಿರುವ ರಾಹುಲ್​ ಕೆಲ ಸಮಯದಿಂದ ಕಳಪೆ ಫಾರ್ಮ್​ ಸಮಸ್ಯೆ ಎದುರಿಸುತ್ತಿದ್ದು, ಬಾರ್ಡರ್- ಗವಾಸ್ಕರ್​ ಟೆಸ್ಟ್​ ಸರಣಿಯಲ್ಲೂ ವೈಫಲ್ಯ ಮುಂದುವರೆಸಿದ್ದಾರೆ. ​ಇದುವರೆಗೆ ಅವರು ಆಡಿರುವ ಎರಡು ಟೆಸ್ಟ್​ ಪಂದ್ಯಗಳ ಮೂರು ಇನ್ನಿಂಗ್ಸ್​ನಲ್ಲಿ ಕೇವಲ 38ರನ್​ಗಳನ್ನಷ್ಟೇ ಕಲೆ ಹಾಕಿದ್ದಾರೆ.

ಹೀಗಾಗಿ, ಮೊದಲೆರಡು ಟೆಸ್ಟ್‌ಗೆ ಉಪನಾಯಕರಾಗಿದ್ದ ಅವರನ್ನು ಉಳಿದೆರಡು ಟೆಸ್ಟ್‌ ಪಂದ್ಯಗಳಿಗೆ ಉಪನಾಯಕನ ಜವಾಬ್ದಾರಿಯಿಂದ ಮುಕ್ತಗೊಳಿಸಿ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕಳಪೆ ಪ್ರದರ್ಶನ ತೋರುತ್ತಿರುವ ಕ್ರಿಕೆಟಿಗನನ್ನು ತಂಡದಿಂದ ಕೈಬಿಡಬೇಕು ಹಾಗೂ ಅವರ ಬದಲಿಗೆ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್‌ರನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದರು. ಕೆ.ಎಲ್.ರಾಹುಲ್​ರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿರುವುದು ತಂಡದಿಂದ ಕೈಬಿಡುವ ಮುನ್ಸೂಚನೆ ಎಂಬೆಲ್ಲ ಮಾತುಗಳೂ ಕೇಳಿ ಬಂದಿದ್ದವು.

ಆಸೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಾರಂಭಕ್ಕೂ ಮುನ್ನ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ರೋಹಿತ್ ಶರ್ಮಾ, ಉಪ ನಾಯಕನ ಸ್ಥಾನದಿಂದ ಅವರನ್ನು ತೆಗೆದುಹಾಕಿದ್ದು ಏನನ್ನೂ ಸೂಚಿಸುವುದಿಲ್ಲ. ತಂಡದ ಎಲ್ಲಾ 17 ಆಟಗಾರರಿಗೂ ಆಡಲು ಅವಕಾಶವಿದೆ. ತಂಡವು ಪ್ರತಿಭಾವಂತರನ್ನು ಬೆಂಬಲಿಸುತ್ತದೆ. ಕಳೆದ ಪಂದ್ಯದ ಬಳಿಕವೂ ನಾನು ಈ ಬಗ್ಗೆ ಮಾತನಾಡಿದ್ದೆ. ವೈಫಲ್ಯ ಎದುರಿಸುತ್ತಿರುವ ಆಟಗಾರರಿಗೆ ತಮ್ಮನ್ನು ತಾವು ಸಾಬೀತುಪಡಿಸಲು ಹೆಚ್ಚಿನ ಸಮಯ ನೀಡಲಾಗುತ್ತದೆ ಎಂದರು.

ಕೆ.ಎಲ್.ರಾಹುಲ್ ಉಪನಾಯಕನಾಗಿ ನೇಮಕಗೊಂಡಾಗ ತಂಡದಲ್ಲಿ ಹೆಚ್ಚು ಅನುಭವಿ ಆಟಗಾರರು ಇರಲಿಲ್ಲ. ಅದಕ್ಕಾಗಿಯೇ ಉಪನಾಯಕನನ್ನಾಗಿ ಮಾಡಲಾಯಿತು ಎಂದು ಅವರು ವಿವರಿಸಿದರು. ಇದೇ ವೇಳೆ ಮೂರನೇ ಪಂದ್ಯದಲ್ಲಿ ಓಪನರ್​ ಆಗಿ ಶುಭಮನ್​ ಗಿಲ್​ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ, ಟಾಸ್​ ನಂತರವಷ್ಟೇ 11ರ ಬಳಗವನ್ನು ಬಹಿರಂಗ ಪಡಿಸಲಾಗುತ್ತದೆ ಎಂದರು. 2020 ರಿಂದ ಈವರೆಗೂ ಕೆ.ಎಲ್.ರಾಹುಲ್​ ಆಡಿರುವ ಟೆಸ್ಟ್​ ಪಂದ್ಯಗಳ 21 ಇನ್ನಿಂಗ್ಸ್​ಗಳಲ್ಲಿ ಒಟ್ಟು 636 ರನ್​ಗಳನ್ನು ಕಲೆಹಾಕಿದ್ದು, ಈ ಪೈಕಿ 2 ಶತಕ ಮತ್ತು 2 ಅರ್ಧಶತಕ ಸೇರಿವೆ. 30.28 ಸರಾಸರಿಯೊಂದಿಗೆ 41 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ನಾಳೆ ಮೂರನೇ ಟೆಸ್ಟ್​ ಪಂದ್ಯ ಇಂದೋರ್​ನ ಹೋಲ್ಕರ್​ ಸ್ಟೇಡಿಯಂನಲ್ಲಿ ಶುರುವಾಗಲಿದೆ. ಈಗಾಗಲೇ ನಾಲ್ಕು ಪಂದ್ಯಗಳ ​​ಸರಣಿಯಲ್ಲಿ ಆಸೀಸ್​ ವಿರುದ್ಧ 2-0 ಮುನ್ನಡೆ ಸಾಧಿಸಿರುವ ಭಾರತ ಮೂರನೇ ಪಂದ್ಯ ಗೆದ್ದಿದ್ದೇ ಆದಲ್ಲಿ ನೇರವಾಗಿ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ಗೆ ಅರ್ಹತೆ ಪಡೆಯಲಿದೆ. ಅಲ್ಲದೇ ಐಸಿಸಿ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲಿದೆ.

ಇದನ್ನೂ ಓದಿ: ಕೊನೆಯ ಎರಡು ಟೆಸ್ಟ್​ಗೆ ತಂಡ ಪ್ರಕಟ: ರಾಹುಲ್​ಗೆ ಉಪನಾಯಕ ಸ್ಥಾನ ಖೋತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.