ಮುಂಬೈ : ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಸೋಮವಾರ ಯಶಸ್ವಿ ಅಪೆಂಡಿಕ್ಸ್ ಸರ್ಜರಿಗೆ ಒಳಗಾಗಿದ್ದಾರೆ. ಒಂದು ವಾರ ಕ್ವಾರಂಟೈನ್ ಮುಗಿಸಿ ಬಯೋಬಬಲ್ನಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಕೆ ಎಲ್ ರಾಹುಲ್ ಚಾರ್ಟರ್ ಫ್ಲೈಟ್ ಮೂಲಕ ಮುಂಬೈಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ವಾರದೊಳಗೆ ರಾಹುಲ್ ಮತ್ತೆ ದೈಹಿಕ ಚಟುವಟಿಕೆ ಆರಂಭಿಸಬಹುದೆಂದು ವೈದ್ಯರು ತಿಳಿಸಿದ್ದಾರೆಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಭಾನುವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಮುಂದಿನ ಒಂದೆರಡು ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಶನಿವಾರ ರಾತ್ರಿ ಅವರು ಹೊಟ್ಟೆ ನೋವೆಂದು ತಿಳಿಸಿದ್ದರು.
ಔಷದಿಯನ್ನು ತೆಗೆದುಕೊಂಡರೂ ನೋವು ಶಮನವಾಗದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಾಗಿ, ಡೆಲ್ಲಿ ವಿರುದ್ಧ ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸಿದ್ದರು.
ಈ ಪಂದ್ಯದಲ್ಲಿ ಪಂಜಾಬ್ ನಾಯಕ ಮಯಾಂಕ್ ಅವರ 99 ರನ್ಗಳ ನೆರವಿನಿಂದ 166 ರನ್ಗಳಿಸಿತ್ತು. ಆದರೆ, ಪೃಥ್ವಿ ಶಾ ಮತ್ತು ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು 14 ಎಸೆತಗಳಿರುವಂತೆಯೇ ಡೆಲ್ಲಿ ಚೇಸ್ ಮಾಡಿ ಗೆದ್ದಿತ್ತು.
ಇದನ್ನು ಓದಿ:ಐಪಿಎಲ್ಗೆ ಕೊರೊನಾತಂಕ!!: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಮೂವರಿಗೆ ಕೊರೊನಾ ದೃಢ