ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಓಪನರ್ ಬ್ಯಾಟರ್ ಕೆ.ಎಲ್.ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(ಎನ್ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದು, ಮಹಿಳಾ ತಂಡದ ಮಾಜಿ ಬೌಲರ್ ಜೂಲನ್ ಗೋಸ್ವಾಮಿ ಅವರ ಎಸೆತವನ್ನು ಎದುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
-
K L Rahul is batting and Jhulan Goswami is bowling.
— Juman Sarma (@Juman_gunda) July 18, 2022 " class="align-text-top noRightClick twitterSection" data="
📍NCA, Bangalore@klrahul • @cool_rahulfan pic.twitter.com/xkuvvPZsHP
">K L Rahul is batting and Jhulan Goswami is bowling.
— Juman Sarma (@Juman_gunda) July 18, 2022
📍NCA, Bangalore@klrahul • @cool_rahulfan pic.twitter.com/xkuvvPZsHPK L Rahul is batting and Jhulan Goswami is bowling.
— Juman Sarma (@Juman_gunda) July 18, 2022
📍NCA, Bangalore@klrahul • @cool_rahulfan pic.twitter.com/xkuvvPZsHP
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಕ್ಕೂ ಮೊದಲು ಕೆ.ಎಲ್.ರಾಹುಲ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಬಳಿಕ ಗಾಯ ಉಲ್ಬಣಗೊಂಡಿದ್ದರಿಂದ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಚೇತರಿಸಿಕೊಂಡಿದ್ದು, ಎನ್ಸಿಎ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ರಾಹುಲ್‌ಗೆ ಸಿಬ್ಬಂದಿಯಲ್ಲದೇ, ಗೋಸ್ವಾಮಿ ಅವರೂ ಕೂಡಾ ಬೌಲಿಂಗ್ ಮಾಡಿ ಅಭ್ಯಾಸಕ್ಕೆ ನೆರವಾದರು. ಸ್ಟಂಪ್ ಮೇಲೆ ಫುಲ್ ಲೆಂಗ್ತ್ ಮತ್ತು ಆಫ್ ಸ್ಟಂಪ್‌ನ ಹೊರಗೆ ಶಾರ್ಟ್ ಬಾಲ್ ಎಸೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಭಾರತದ ವಿರುದ್ಧ ಕಳಪೆ ಪ್ರದರ್ಶನ.. ಏಕದಿನ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ ಸ್ಟೋಕ್ಸ್