ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ ದ್ವೀತಿಯಾರ್ಧದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ಯುವ ಪ್ರತಿಭೆ ವೆಂಕಟೇಶ್ ಅಯ್ಯರ್ಗೆ ಕೆಕೆಆರ್ ರಿಟೈನ್ ಮಾಡಿಕೊಂಡಿದ್ದು, ಇದಕ್ಕಾಗಿ ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದೆ.
2021ರ ಐಪಿಎಲ್ ಹರಾಜಿನಲ್ಲಿ ಮೂಲ ಬೆಲೆ 20 ಲಕ್ಷ ರೂ. ನೀಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ಗೆ ಮಣೆ ಹಾಕಿತ್ತು. ಭಾರತದಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದ ಅಯ್ಯರ್, ತಂದನಂತರ ದುಬೈನಲ್ಲಿ ಆರ್ಸಿಬಿ ವಿರುದ್ಧ ನಡೆದ ದ್ವೀತಿಯಾರ್ಧದ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ 41ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಾದ ಬಳಿಕ ಅನೇಕ ಪಂದ್ಯಗಳಲ್ಲಿ ಮಿಂಚಿ ತಂಡವನ್ನ ಗೆಲುವಿನ ದಢ ಸೇರಿಸಿದ್ದರು.
-
𝙃𝙚’𝙨 𝙟𝙪𝙨𝙩 𝙜𝙚𝙩𝙩𝙞𝙣𝙜 𝙨𝙩𝙖𝙧𝙩𝙚𝙙! 👊@ivenkyiyer2512 #KKR #AmiKKR #IPLRetention #GalaxyOfKnights #WeTheFuture pic.twitter.com/WypAro7JVJ
— KolkataKnightRiders (@KKRiders) November 30, 2021 " class="align-text-top noRightClick twitterSection" data="
">𝙃𝙚’𝙨 𝙟𝙪𝙨𝙩 𝙜𝙚𝙩𝙩𝙞𝙣𝙜 𝙨𝙩𝙖𝙧𝙩𝙚𝙙! 👊@ivenkyiyer2512 #KKR #AmiKKR #IPLRetention #GalaxyOfKnights #WeTheFuture pic.twitter.com/WypAro7JVJ
— KolkataKnightRiders (@KKRiders) November 30, 2021𝙃𝙚’𝙨 𝙟𝙪𝙨𝙩 𝙜𝙚𝙩𝙩𝙞𝙣𝙜 𝙨𝙩𝙖𝙧𝙩𝙚𝙙! 👊@ivenkyiyer2512 #KKR #AmiKKR #IPLRetention #GalaxyOfKnights #WeTheFuture pic.twitter.com/WypAro7JVJ
— KolkataKnightRiders (@KKRiders) November 30, 2021
ಇವರ ಪ್ರದರ್ಶನಕ್ಕೆ ಬೆರಗಾಗಿರುವ ಭಾರತೀಯ ಕ್ರಿಕೆಟ್ ಮಂಡಳಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಗೂ ಆಯ್ಕೆ ಮಾಡಿತ್ತು. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 8 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.
ಇದನ್ನೂ ಓದಿರಿ: ಕನ್ನಡಿಗನಿಗೆ ಜಾಕ್ಪಾಟ್: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್ ಆದ ಮಯಾಂಕ್
ಇದರ ಜೊತೆಗೆ ವೆಸ್ಟ್ ಇಂಡೀಸ್ನ ಆಲ್ರೌಂಡರ್ ಆ್ಯಂಡ್ರೆ ರಸೆಲ್ 12 ಕೋಟಿ, ವರುಣ್ ಚಕ್ರವರ್ತಿಗೆ 8 ಕೋಟಿ ರೂ ಹಾಗೂ ಸುನಿಲ್ ನರೈನ್ಗ 6 ಕೋಟಿ ರೂ. ನೀಡಿ ತನ್ನ ಬಳಿ ಉಳಿಸಿಕೊಂಡಿದೆ. ಉಳಿದಂತೆ ಶುಬ್ಮನ್ ಗಿಲ್, ಶಕೀಬ್ ಅಲ್ ಹಸನ್,ನಿತೀಶ್ ರಾಣಾ, ಕಮ್ಮಿನ್ಸ್,ರಾಹುಲ್ ತ್ರಿಪಾಠಿ ಹಾಗೂ ದಿನೇಶ್ ಕಾರ್ತಿಕ್ನಂತಹ ಪ್ಲೇಯರ್ಸ್ಗೆ ಕೈಬಿಟ್ಟಿದೆ.