ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿಯ ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ 281 ರನ್ ಹಾಗು ಇನ್ನಿಂಗ್ಸ್ ಗೆಲುವು ಪಡೆಯಿತು. ಶ್ರೇಯಸ್ ಗೋಪಾಲ್ ಮತ್ತು ವಿಜಯ್‌ಕುಮಾರ್ ವೈಶಾಕ್ ಅವರು ಕಬಳಿಸಿದ ಅಮೂಲ್ಯ ಆರು ವಿಕೆಟ್ಗಳ ನೆರವಿನಿಂದ ಕರ್ನಾಟಕವು ಉತ್ತರಾಖಂಡವನ್ನು 209 ರನ್‌ಗಳಿಗೆ ಆಲೌಟ್ ಮಾಡಿ ಇನ್ನಿಂಗ್ಸ್‌ಸಹಿತ ವಿಜಯೋತ್ಸವ ಆಚರಿಸಿತು. ಈ ಮೂಲಕ ಕರ್ನಾಟಕ ಸೆಮೀಸ್ಗೆ ಅವಕಾಶ ಪಡೆದುಕೊಂಡಿದೆ. ಶ್ರೇಯಸ್ ಗೋಪಾಲ್ ಆಲ್ರೌಂಡ್ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಮೂರನೇ ದಿನವಾದ ನಿನ್ನೆಗೆ ಉತ್ತರಾಖಂಡ 106ಕ್ಕೆ 3 ವಿಕೆಟ್ ನಷ್ಟ ಅನುಭವಿಸಿತ್ತು. ಕರ್ನಾಟಕ 384 ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು. ಕರ್ನಾಟಕ ಇಂದಿನ ಆಟ ಆರಂಭಿಸುವ ಮುನ್ನ ಏಳು ವಿಕೆಟ್ ಕಬಳಿಸುವ ಗುರಿಯೊಂದಿಗೆ ಕಣಕ್ಕಿಳಿದಿತ್ತು. ಅದರಂತೆ ಮಾರಕ ದಾಳಿ ಮಾಡಿದ ಅನುಭವಿ ಶ್ರೇಯಸ್ ಗೋಪಾಲ್ ಮತ್ತು ವಿಜಯ್‌ಕುಮಾರ್ ವೈಶಾಕ್ ತಲಾ 3 ವಿಕೆಟ್ ಗಳಿಸಿದರು. ವಿದ್ವತ್ ಕಾವೇರಪ್ಪ ಮತ್ತು ಚೊಚ್ಚಲ ಪಂದ್ಯ ಆಡುತ್ತಿರುವ ಮುರಳೀಧರ ವೆಂಕಟೇಶ್ ತಲಾ ಎರಡು ವಿಕೆಟ್ ಪಡೆದು ಕರ್ನಾಟಕಕ್ಕೆ 281 ರನ್ಗಳ ಗೆಲುವಿಗೆ ಕಾರಣರಾದರು.
ಜನವರಿ 31 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಉತ್ತರಾಖಂಡದ ವಿರುದ್ಧ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಉತ್ತರಾಖಂಡ 116ಕ್ಕೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮುರಳೀಧರ ವೆಂಕಟೇಶ್ ಐದು ವಿಕೆಟ್ ಗಳಿಸಿ ಮಿಂಚಿದರು. ಕುನಾಲ್ ಚಂಡೇಲಾ 31, ಅವನೀಶ್ ಸುಧಾ 17, ಆದಿತ್ಯ ತಾರೆ 14 ಮತ್ತು ಅಖಿಲ್ ರಾವತ್ 14 ರನ್ ಗಳಿಸಿದ್ದು ಬಿಟ್ಟರೆ ಬೇರೆ ಎಲ್ಲರೂ ಒಂದಂಕಿಗೆ ವಿಕೆಟ್ ಚೆಲ್ಲಿದರು.
-
Karnataka Won by an innings and 281 Run(s) (Qualified) #KARvCAU #RanjiTrophy #QF3 Scorecard:https://t.co/Ygx67JDemv
— BCCI Domestic (@BCCIdomestic) February 3, 2023 " class="align-text-top noRightClick twitterSection" data="
">Karnataka Won by an innings and 281 Run(s) (Qualified) #KARvCAU #RanjiTrophy #QF3 Scorecard:https://t.co/Ygx67JDemv
— BCCI Domestic (@BCCIdomestic) February 3, 2023Karnataka Won by an innings and 281 Run(s) (Qualified) #KARvCAU #RanjiTrophy #QF3 Scorecard:https://t.co/Ygx67JDemv
— BCCI Domestic (@BCCIdomestic) February 3, 2023
ಶ್ರೇಯಸ್ ಗೋಪಾಲ್ ಶತಕ: ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ 606 ರನ್ ಗಳಿಸಿ ಆಲ್ ಔಟ್ ಆಯಿತು. ಈ ಮೂಲಕ ಕನ್ನಡಿಗರು 490 ರನ್ಗಳ ಮುನ್ನಡೆ ಪಡೆದರು. ಆರಂಭಿಕರಾದ ಸಮರ್ಥ (82) ಮತ್ತು ಅಗರ್ವಾಲ್ (83) 159 ರನ್ಗಳ ಜೊತೆಯಾಟ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಪಡಿಕ್ಕಲ್ (69) ಮತ್ತು ನಿಕಿನ್ (62) ತಲಾ ಅರ್ಧ ಶತಕ ಗಳಿಸಿದರು. ಆರನೇ ವಿಕೆಟ್ ಆಗಿ ಬಂದ ಶ್ರೇಯಸ್ ಗೋಪಾಲ್ ಅಜೇಯರಾಗಿ ಐದನೇ ಪ್ರಥಮ ದರ್ಜೆ ಶತಕ (161) ಗಳಿಸಿ ಅವರ ವೈಯುಕ್ತಿಕ ಶ್ರೇಷ್ಠ ರನ್ ಸಾಧನೆ ಮಾಡಿದರು. ಕರ್ನಾಟಕ ಬೃಹತ್ ಮೊತ್ತ ಗಳಿಸಲು ಉತ್ತಮ ಕೊಡುಗೆ ನೀಡಿದರು. ಮನೀಶ್ ಪಾಂಡೆ 39 ರನ್ಗೆ ಸುಸ್ತಾದರು. ಶರತ್ ಬಿಆರ್ (33), ಕೆ ಗೌತಮ್ (39) ಸಾಧಾರಣ ಮೊತ್ತ ಗಳಿಸಿ ಗೋಪಾಲ್ ಜೊತೆ ಆಟ ಕಟ್ಟಿದರು. ವೆಂಕಟೇಶ್ ಚೊಚ್ಚಲ ಪಂದ್ಯದಲ್ಲಿ 15 ರನ್ಗಳಿಸಿದರು.
ಕಾಡಿದ ಗೋಪಾಲ್, ವೆಂಕಟೇಶ್: ಮೂರನೇ ದಿನ ಕರ್ನಾಟಕ 606ಕ್ಕೆ ಆಲೌಟ್ ಆಗಿತ್ತು. 490 ರನ್ಗಳ ಹಿಂದಿದ್ದ ಉತ್ತರಾಖಂಡಕ್ಕೆ ಒಂದು ಅರ್ಧ ದಿನ ಮಾತ್ರ ಬಾಕಿಯಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ 41 ಓವರ್ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 106 ರನ್ಗಳಿಸಿತ್ತು. 7 ವಿಕೆಟ್ಗಳನ್ನು ಕೈಯಲ್ಲಿಟ್ಟುಕೊಂಡಿದ್ದ ಉತ್ತರಾಖಂಡಕ್ಕೆ ಶತಕ ಗಳಿಸಿದ್ದ ಗೋಪಾಲ್ ಮೂರು ವಿಕೆಟ್ ಕಬಳಿಸಿ ಮಾರಕ ಆದರು. ಸ್ವಪ್ನಿಲ್ ಸಿಂಗ್ ಅರ್ಧ ಶತಕ ಗಳಿಸಿದ್ದು ಬಿಟ್ಟರೆ ಮತ್ತಾರೂ 30 ಗಡಿ ತಲುಪಲಿಲ್ಲ. ಕರ್ನಾಟಕಕ್ಕೆ ಕೊನೆಯ ದಿನ ಉತ್ತರಾಖಂಡ ಸುಲಭ ತುತ್ತಾಯಿತು.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ: ನಾಗ್ಪುರ ತಲುಪಿದ ವಿರಾಟ್, ರಾಹುಲ್..