ಚೆನ್ನೈ: ಪಾಂಡಿಚೇರಿ ವಿರುದ್ಧ ನಡೆಯುತ್ತಿರುವ ಲೀಗ್ ಹಂತದ ಮೂರನೇ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಶತಕ ಸಿಡಿಸಿ ಅಬ್ಬರಿಸಿದರು. ಇದು ಅವರ ಮೊದಲ ಪ್ರಥಮ ದರ್ಜೆ ಶತಕವಾಗಿದೆ. ಈ ಹಿಂದೆ 99 ರನ್ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು.
ಕರ್ನಾಟಕ ತಂಡ 39 ರನ್ಗಳಿಗೆ ಸಮರ್ಥ್(11) ಮತ್ತು ಕರುಣ್ ನಾಯರ್(6) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಈ ಸಂದರ್ಭದಲ್ಲಿ ಅದ್ಭುತ ಲಯದಲ್ಲಿರುವ ಸಿದ್ಧಾರ್ಥ್ ಕೆ.ವಿ ಜೊತೆಗೂಡಿದ ಪಡಿಕ್ಕಲ್ 3ನೇ ವಿಕೆಟ್ಗೆ 150 ಕ್ಕೂ ಹೆಚ್ಚು ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಸುಸ್ಥಿತಿಗೆ ತಂದಿದ್ದಾರೆ.
ಪಡಿಕ್ಕಲ್ಗೆ ಸಾಥ್ ನೀಡುತ್ತಿರುವ ಸಿದ್ಧಾರ್ಥ್ 124 ಎಸೆತಗಳಲ್ಲಿ 10 ಬೌಂಡರಿ ಸಹಿತ ಅಜೇಯ 72 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಮನೀಶ್ ಪಾಂಡೆ ಪಡೆ 61 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 204 ರನ್ಗಳಿಸಿದೆ.
ಕರ್ನಾಟಕ ತಂಡ ಈಗಾಗಲೆ ರೈಲ್ವೇಸ್ ವಿರುದ್ಧ ಡ್ರಾ ಸಾಧಿಸಿದ್ದರೆ, 2ನೇ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯ ಗೆದ್ದು ಸ್ಮರಣೀಯವಾಗಿಸಲು ನಾಯಕ ರೋಹಿತ್ ಪಡೆ ರಣತಂತ್ರ..