ETV Bharat / sports

ರಿಟೈನ್​ ವೇಳೆ ಹಿಂಬಡ್ತಿ: ಫ್ರಾಂಚೈಸಿಯನ್ನೇ ತೊರೆದ ಕಮ್ರಾನ್ ಅಕ್ಮಲ್!

ಪಾಕಿಸ್ತಾನ ಸೂಪರ್​ ಲೀಗ್​ 2022ರ ಆವೃತ್ತಿಗೂ ಮುನ್ನ ನಡೆದ ಡ್ರಾಪ್​ ವೇಳೆ ಅಕ್ಮಲ್​ ಅವರನ್ನು ಗೋಲ್ಡ್ ಕೆಟಗರಿಯ ಬದಲಿಗೆ ಸಿಲ್ವರ್​ ಕೆಟಗರಿಗೆ ಹಿಂಬಡ್ತಿ ನೀಡಿದ್ದರು. ಈ ಕಾರಣಕ್ಕೆ ಅಕ್ಮಲ್​ ಬೇಸರ ವ್ಯಕ್ತಪಡಿಸಿದ್ದು, ತಾವೂ ಸಿಲ್ವರ್​ ಕೆಟಗರಿಯಲ್ಲಿ ಆಡುವುದಕ್ಕೆ ಇಷ್ಟವಿಲ್ಲ ಎಂದು ತಿಳಿಸಿ ಟ್ವೀಟ್​ ಮೂಲಿಕ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

Kamran Akmal
ಕಮ್ರಾನ್ ಅಕ್ಮಲ್​
author img

By

Published : Dec 13, 2021, 10:56 PM IST

ಲಾಹೋರ್: ಪಾಕಿಸ್ತಾನ ಹಿರಿಯ ಬ್ಯಾಟರ್​ ಕಮ್ರಾನ್ ಅಕ್ಮಲ್​ ಕೆಳಗಿನ ವರ್ಗಕ್ಕೆ ಹಿಂಬಡ್ತಿ ನೀಡಿದ ಕಾರಣ ಮುಂಬರುವ ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲಿ ಪೇಜಾವರ್ ಜಾಲ್ಮಿಯ ಪರ ಆಡದಿರುವ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ ಸೂಪರ್​ ಲೀಗ್​ 2022ರ ಆವೃತ್ತಿಗೂ ಮುನ್ನ ನಡೆದ ಡ್ರಾಪ್​ ವೇಳೆ ಅಕ್ಮಲ್​ರನ್ನು ಗೋಲ್ಡ್ ಕೆಟಗರಿಯ ಬದಲಿಗೆ ಸಿಲ್ವರ್​ ಕೆಟಗರಿಗೆ ಹಿಂಬಡ್ತಿ ನೀಡಿದ್ದರು. ಈ ಕಾರಣಕ್ಕೆ ಅಕ್ಮಲ್​ ಬೇಸರ ವ್ಯಕ್ತಪಡಿಸಿದ್ದು, ತಾವೂ ಸಿಲ್ವರ್​ ಕೆಟಗರಿಯಲ್ಲಿ ಆಡುವುದಕ್ಕೆ ಇಷ್ಟವಿಲ್ಲ ಎಂದು ತಿಳಿಸಿ ಟ್ವೀಟ್​ ಮೂಲಿಕ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

  • Last 6 seasons it was a great journey..Thank you for supporting me through thick and thin M.Akram bhai @JAfridi10 @darensammy88 @WahabViki ..I think i don’t deserve to play in this category…Thank you once again..@PeshawarZalmi Best of luck..Thank You all the fans for supporting

    — Kamran Akmal (@KamiAkmal23) December 12, 2021 " class="align-text-top noRightClick twitterSection" data=" ">

ಪಿಎಸ್​ಎಲ್​ನಲ್ಲಿ ಒಟ್ಟು 18 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿತ್ತು. ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್​ ವರ್ಗದಲ್ಲಿ ತಲಾ ಮೂರು ಆಟಗಾರರು, ಸಿಲ್ವರ್​ ವಿಭಾಗಕ್ಕೆ 5 ಹಾಗೂ ಇಬ್ಬರು ಎಮರ್ಜಿಂಗ್ ಹಾಗೂ ಇಬ್ಬರು ಸಪ್ಲೆಮೆಂಟರಿ ವರ್ಗದಲ್ಲಿ ಆಯ್ಕೆ ಮಾಡಿಕೊಳ್ಳಬಹುದಿತ್ತು.

ಪಿಸಿಬಿ ಪಿಎಸ್​ಎಲ್​ ಡ್ರಾಫ್ಟ್​ಗೂ ಮುನ್ನ ಭಾನುವಾರ ಆಟಗಾರರ ಕೆಟಗರಿ ಬಿಡುಗಡೆ ಮಾಡಿದ್ದು, ಅಕ್ಮಲ್​ರನ್ನು ಡೈಮಂಡ್​ ಕೆಟಗರಿಯಿಂದ ಗೋಲ್ಡನ್​ ಕೆಟಗರಿಗೆ ವರ್ಗಾಯಿಸಿತ್ತು. ಆದರೆ, ಡ್ರಾಪ್ಟ್​​ನಲ್ಲಿ ಅಕ್ಮಲ್​ರನ್ನು ಗೋಲ್ಡನ್ ಕೆಟಗರಿಯ ಆಯ್ಕೆಯ ವೇಳೆ ಯಾವುದೇ ಫ್ರಾಂಚೈಸಿ ಆಯ್ಕೆ ಮಾಡಲಿಲ್ಲ. ಕೊನೆಗೆ ಸಿಲ್ವರ್​ ಕೆಟಗರಿಯ ಡ್ರಾಫ್ಟ್​ ವೇಳೆ ಪೇಜಾವರ್​ ಜಾಲ್ಮಿ ಖರೀದಿಸಿತ್ತು. ಆದರೆ, 2016ರಿಂದ ಫ್ರಾಂಚೈಸಿಯಲ್ಲಿ ಆಡಿದರೂ ತಮ್ಮನ್ನು ಕಡೆಗಣಿಸಿ ಸಿಲ್ವರ್ ಕೆಟಗರಿಯಲ್ಲಿ ಖರೀದಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಫ್ರಾಂಚೈಸಿ ಪರ ಆಡದಿರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಭಾರತ ತಂಡಕ್ಕೆ ಹೇಳಿ ಮಾಡಿಸಿದ ಪ್ಲೇಯರ್.. ಹಾರ್ದಿಕ್ ಪಾಂಡ್ಯಗೆ ಭೀತಿ ತಂದ 'ಆಲ್​ರೌಂಡರ್'ನ ಆಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.