ಹೈದರಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಒಡತಿ, ಬಾಲಿವುಡ್ ನಟಿ ಜೂಹಿ ಚಾವ್ಲಾ ತಮ್ಮ ಮಗಳು ಜಾಹ್ನವಿಯು ಕ್ರಿಕೆಟ್ ಪಟುಗಳ ಬಗ್ಗೆ ಎಷ್ಟರ ಮಟ್ಟಿಗೆ ಆಸಕ್ತಿ ಹೊಂದಿದ್ದಾಳೆ ಅನ್ನೋದನ್ನು ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಜಾಹ್ನವಿಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಕ್ರಿಕೆಟ್ ಬಗ್ಗೆ ಹೇಳಿದರೆ ಅವಳ ಮುಖ ಅರಳುತ್ತದೆ.
- " class="align-text-top noRightClick twitterSection" data="
">
ಜಾಹ್ನವಿ ಚಿಕ್ಕಂದಿನಿಂದಲೂ ಕ್ರಿಕೆಟ್ ನೋಡಿಕೊಂಡೇ ಬೆಳೆದ ಹುಡುಗಿ. ನಿರೂಪಕರ ಮಾತುಗಳನ್ನು ಆಲಿಸಿ ಆಟದ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಅವಳು 12 ವರ್ಷದವಳಿದ್ದಾಗ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದೆವು. ಹೋಟೆಲ್ವೊಂದರಲ್ಲಿ ಟೇಬಲ್ ಮೇಲೆ ವಿಶ್ವದ ಎಲ್ಲ ಕ್ರಿಕೆಟಿಗರ ಜೀವನ ಕಥೆ, ಯಶಸ್ಸು ಮತ್ತು ದಾಖಲೆಗಳನ್ನು ಒಳಗೊಂಡಿರುವ ಮ್ಯಾಗಜೀನ್ ಇತ್ತು.
ನಾವು ಹೋಟೆಲ್‌ನಲ್ಲಿ ಉಳಿದುಕೊಂಡ ಕೆಲವೇ ದಿನಗಳಲ್ಲಿ ಅವಳು ಆ ಇಡೀ ಪುಸ್ತಕವನ್ನು ಓದಿದ್ದಳು. ಆ ವಯಸ್ಸಿನ ಬಾಲಕಿಯೊಬ್ಬಳು ಹಾಗೆ ಮಾಡಿದಾಗ ನನಗೆ ಅಚ್ಚರಿಯಾಯಿತು. ಕಾಲಕ್ರಮೇಣ ಅವಳಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಯುತ್ತಲೇ ಬಂತು. ಓರ್ವ ತಾಯಿಯಾಗಿ ತನ್ನ ಪುತ್ರಿ ವಹಿಸಿಕೊಂಡ ಜವಾಬ್ದಾರಿ ನೋಡಿ ನನಗೆ ಖುಷಿ ಆಗುತ್ತಿದೆ ಎಂದಿದ್ದಾರೆ.
-
❤️❤️❤️@jahnavimehta @KKRiders @VenkyMysore #IPLAuction2022 #ipl #kkr pic.twitter.com/pOUA8pA8ac
— Juhi Chawla (@iam_juhi) February 17, 2022 " class="align-text-top noRightClick twitterSection" data="
">❤️❤️❤️@jahnavimehta @KKRiders @VenkyMysore #IPLAuction2022 #ipl #kkr pic.twitter.com/pOUA8pA8ac
— Juhi Chawla (@iam_juhi) February 17, 2022❤️❤️❤️@jahnavimehta @KKRiders @VenkyMysore #IPLAuction2022 #ipl #kkr pic.twitter.com/pOUA8pA8ac
— Juhi Chawla (@iam_juhi) February 17, 2022
ಜಾಹ್ನವಿ ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ ಮೂಲಕ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಳು. ಆಗ ಆಕೆಗೆ 17 ವರ್ಷ. ಇನ್ನು ಕಳೆದ ಬಾರಿ ಕಾಣಿಸಿಕೊಂಡಂತೆ ಈ ಬಾರಿಯೂ ಶಾರುಖ್ ಪುತ್ರ ಆರ್ಯನ್ ಸಹೋದರಿ ಸುಹಾನಾ ಅವರೊಂದಿಗೆ ಕಾಣಿಸಿಕೊಂಡರು. ಸುಹಾನಾ ಇದೇ ಮೊದಲ ಬಾರಿಗೆ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದರು.
ಬಾಲಿವುಡ್ನ ಸ್ಟಾರ್ ಸೆಲೆಬ್ರಿಟಿಗಳ ಕುಡಿಗಳು ಈ ಸಾರಿಯ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಕ್ಯಾಮರದ ಕಣ್ಣು ಹೆಚ್ಚಾಗಿ ಅವರ ಮೇಲೆಯೇ ಬೀಳುತ್ತಿತ್ತು. ಸಹಜವಾಗಿ ಜಾಲತಾಣದಲ್ಲಿ ಈ ಸುದ್ದಿ ಭಾರಿ ಸದ್ದು ಮಾಡಿತ್ತು. ಮಕ್ಕಳ ಬೆಳವಣಿಗೆ ಕಂಡು ಜೂಹಿ ಚಾವ್ಲಾ, ಇನ್ನೂ ಬಹಳ ದೂರ ಸಾಗಬೇಕಿದೆ. ದೇವರ ದಯೆಯಿಂದ ಅವಳು ಬಯಸಿದ ರೀತಿಯಲ್ಲಿ ನಡೆಸುತ್ತಿದ್ದಾನೆ ಎಂದಿದ್ದಾರೆ.
-
Welcoming our KKR players, Shreyas Iyer, Pat Cummins, Nitish Rana & our bunch of young owners Aryan, Suhana and Jahnavi ..!!! Thank you Venky and allllll our KKR staff 🌟🌟🌟🌟💜💜💜💜 .Super grateful 🙏🙏🙏and Super happy 😇😇😇…!!🙏🙏#AryanKhan #SuhanaKhan #JahnaviMehta pic.twitter.com/Fh81zRnrdP
— Juhi Chawla (@iam_juhi) February 12, 2022 " class="align-text-top noRightClick twitterSection" data="
">Welcoming our KKR players, Shreyas Iyer, Pat Cummins, Nitish Rana & our bunch of young owners Aryan, Suhana and Jahnavi ..!!! Thank you Venky and allllll our KKR staff 🌟🌟🌟🌟💜💜💜💜 .Super grateful 🙏🙏🙏and Super happy 😇😇😇…!!🙏🙏#AryanKhan #SuhanaKhan #JahnaviMehta pic.twitter.com/Fh81zRnrdP
— Juhi Chawla (@iam_juhi) February 12, 2022Welcoming our KKR players, Shreyas Iyer, Pat Cummins, Nitish Rana & our bunch of young owners Aryan, Suhana and Jahnavi ..!!! Thank you Venky and allllll our KKR staff 🌟🌟🌟🌟💜💜💜💜 .Super grateful 🙏🙏🙏and Super happy 😇😇😇…!!🙏🙏#AryanKhan #SuhanaKhan #JahnaviMehta pic.twitter.com/Fh81zRnrdP
— Juhi Chawla (@iam_juhi) February 12, 2022
ಇದನ್ನೂ ಓದಿ: 92ರ ಅಜ್ಜ ಲಾಲಾ ಸಾಹೇಬ್ ಬಾಬರ್‌ಗೆ ಪಿಹೆಚ್‌ಡಿ ಪದವಿ.. ಹತ್ತಾರು ವೈಶಿಷ್ಟ್ಯವಿರುವ ಈ ಜೀವ ಎಲ್ರಿಗೂ ಪ್ರೇರಣೆ..
ಹರಾಜು ಪ್ರಕ್ರಿಯೆ ನಡೆಯುತ್ತಿದ್ದಂತೆ ತಂಡಕ್ಕೆ ಸೇರ್ಪಡೆಯಾಗಿರುವ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಪ್ಯಾಟ್ ಕಮಿನ್ಸ್, ನಿತೀಶ್ ರಾಣಾ ಅವರನ್ನು ಸ್ವಾಗತ ಮಾಡುವವ ನಟಿಯು ಪೋಸ್ಟ್ ಹಾಕಿದ್ದರು. ಇದರ ಜೊತೆಗೆ ತಮ್ಮ ಪುತ್ರಿ ಜಾಹ್ನವಿ, ಹಾಗೂ ಶಾರುಖ್ ಮಕ್ಕಳಾದ ಸುಹಾನ ಹಾಗೂ ಆರ್ಯನ್ ಫೋಟೋ ಹಂಚಿಕೊಳ್ಳುವ ಮೂಲಕ ಕೆಕೆಆರ್ ತಂಡಕ್ಕೆ ನಿಮಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.