ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್: ಆಸಿಸ್​ ತಂಡದಿಂದ ಜೋಶ್ ಹ್ಯಾಜಲ್‌ವುಡ್ ಹೊರಕ್ಕೆ

ಕಾಂಗರೂ ಪಡೆಯ ಅನುಭವಿ ಬೌಲರ್​ ಜೋಶ್ ಹ್ಯಾಜಲ್‌ವುಡ್ 7 ರಿಂದ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಸಿಸ್​ ತಂಡದಲ್ಲಿ ಆಡುತ್ತಿಲ್ಲ ಅವರ ಬದಲಿ ಆಟಗಾರರನ್ನು ತಂಡ ಪ್ರಕಟಿಸಿದೆ.

Josh Hazlewood
ಜೋಶ್ ಹ್ಯಾಜಲ್‌ವುಡ್
author img

By

Published : Jun 4, 2023, 5:58 PM IST

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಇನ್ನು ಮೂರು ದಿನ ಬಾಕಿ ಇದೆ. ಈ ನಡುವೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. 15 ಜನರ ತಂಡದಲ್ಲಿದ್ದ ಅನುಭವಿ ಬೌಲರ್​ನ್ನು ಹೊರಗಿಟ್ಟು ಅವರ ಜಾಗಕ್ಕೆ ಹೊಸ ಫೇಸರ್​ನ್ನು ಆಡಿಸಲಾಗುತ್ತಿದೆ. ಗಾಯದ ಕಾರಣ ಸೀಮರ್ ಜೋಶ್ ಹ್ಯಾಜಲ್‌ವುಡ್ ಅವರನ್ನು ಕ್ರಿಕೆಟ್​ ಆಸ್ಟ್ರೇಲಿಯಾ ತಂಡದಿಂದ ಹೊರಗಿಟ್ಟಿದೆ. ಅವರು ಇನ್ನೂ ಅಕಿಲ್ಸ್ ಮತ್ತು ಸೈಡ್ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಜೋಶ್ ಹ್ಯಾಜಲ್‌ವುಡ್ ಈ ವರ್ಷ ಗಾಯದಿಂದ ಬಳಲುತ್ತಿದ್ದರು. ಅವರು ಕೇವಲ ಮೂರು ಪಂದ್ಯದಲ್ಲಿ ಆರ್​ಸಿಬಿಯನ್ನು ಈ ವರ್ಷ ಪ್ರತಿನಿಧಿಸಿದ್ದಾರೆ. ಆದರೆ ನಂತರ ಮತ್ತೆ ಗಾಯದ ಸಮಸ್ಯೆಯಿಂದ ತವರಿಗೆ ಮರಳಿದ್ದರು ನಂತರ ಅವರು ಚೇತರಿಸಿಕೊಂಡು ಟೆಸ್ಟ್​ ತಂಡವನ್ನು ಸೇರಿಕೊಂಡಿದ್ದರು. ಅವರು ಚೇತರಿಸಿಕೊಂಡಿದ್ದಾರೆ, ಟೆಸ್ಟ್​ ಚಾಂಪಿಯನ್​ಶಿಪ್​ ಆಡಲಿದ್ದಾರೆ ಎನ್ನಲಾಗಿತ್ತು.

ಫಿಟ್​ ಆಗಿದ್ದ ಜೋಶ್ ಹ್ಯಾಜಲ್‌ವುಡ್ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಫೋಟೋಗಳು ಹರಿದಾಡಿದ್ದವು. ಆದರೆ ಕ್ರಿಕೆಟ್​ ಆಸ್ಟ್ರೇಲಿಯಾ ದಿಢೀರ್​ ಬದಲಾವಣೆಯನ್ನು ಪಂದ್ಯಕ್ಕೆ ಮೂರು ದಿನ ಮುಂಚಿತವಾಗಿ ತೆಗೆದುಕೊಂಡಿದ್ದು, ಬಲಗೈ ಬೌಲರ್​ಗೆ ಹೆಚ್ಚಿನ ಒತ್ತಡ ನೀಡದೇ ಸಂಪೂರ್ಣ ಚೇತರಿಕೆಗೆ ಅವಕಾಶ ನೀಡುವಂತೆ ಕಾಣುತ್ತಿದೆ.

ಇನ್-ಫಾರ್ಮ್ ಆಲ್-ರೌಂಡರ್ ಮೈಕೆಲ್ ನೆಸರ್ ದಕ್ಷಿಣ ಲಂಡನ್‌ನಲ್ಲಿ ನಡೆಯಲಿರುವ ಒಂದು ಟೆಸ್ಟ್‌ಗಾಗಿ ಆಸ್ಟ್ರೇಲಿಯಾದ 15 ಆಟಗಾರರ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರ ಸೇರ್ಪಡೆಯನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಈವೆಂಟ್ ತಾಂತ್ರಿಕ ಸಮಿತಿಯು ಅನುಮೋದಿಸಿದೆ. ನೆಸರ್ ಇತ್ತೀಚೆಗೆ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗಾನ್‌ಗಾಗಿ ಅತ್ಯುತ್ತಮ ಸಂಪರ್ಕದಲ್ಲಿದ್ದಾರೆ. 33 ವರ್ಷ ವಯಸ್ಸಿನವರು ಐದು ಪಂದ್ಯಗಳಿಂದ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

  • 🚨 JUST IN: Setback for Australia as star quick is ruled out of #WTC23 Final against India!

    Details 👇

    — ICC (@ICC) June 4, 2023 " class="align-text-top noRightClick twitterSection" data=" ">

ಬೌಲಿಂಗ್ ಆಲ್​ರೌಂಡರ್​ ಆಗಿ ತಂಡದಲ್ಲಿ ಆಡಬಲ್ಲ ಮೈಕೆಲ್ ನೆಸರ್ ಹನ್ನೊಂದರ ಬಳಗದಲ್ಲಿ ಸೇರಲಿದ್ದಾರಾ ಎಂಬುದು ಪ್ರಶ್ನೆಯಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ವೇಗದ ವಿಭಾಗದಲ್ಲಿ ಪ್ರಭಾವಿಗಳಾಗಿದ್ದು, ಈ ನಡುವೆ ಮೂರನೇ ಬೌಲರ್​ ಆಯ್ಕೆ ಕಸರತ್ತಿನಲ್ಲಿ ನೆಸರ್​ಗೆ ಬಾರಿ ಪ್ರತಿಸ್ಪರ್ಧೆ ಇದೆ.

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ಆಶಸ್​ ಸರಣಿಯಲ್ಲಿ ಇಂಗ್ಲೆಂಡ್​ನ್ನು ಎದುರಿಸಲಿದೆ. ಈ ಪಂದ್ಯಗಳ ಜೂನ್ 16 ರಿಂದ ಆರಂಭವಾಗಲಿದೆ. ಇದರ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಮೊದಲ ಆಶಸ್ ಟೆಸ್ಟ್‌ಗೆ ಹ್ಯಾಜಲ್‌ವುಡ್ ಲಭ್ಯರಾಗುತ್ತಾರೆ ಎಂದು ಹೇಳಲಾಗಿದೆ. ಆಶಸ್​ ಸರಣಿಯ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಆಸ್ಟ್ರೇಲಿಯಾ ಪ್ರಕಟಿಸಿಲ್ಲ.

ನವೀಕರಿಸಿದ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್​), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್

ಸ್ಟ್ಯಾಂಡ್‌ಬೈ ಆಟಗಾರರು: ಮಿಚ್ ಮಾರ್ಷ್, ಮ್ಯಾಥ್ಯೂ ರೆನ್‌ಶಾ

ಇದನ್ನೂ ಓದಿ: WTC Final 2023: ಟೆಸ್ಟ್​ನಲ್ಲಿ ದಾಖಲೆಗಳನ್ನು ಹೊಂದಿರುವ ಈ ಐವರು ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.