ETV Bharat / sports

ಬೂಮ್​.. ಬೂಮ್​.. ಬುಮ್ರಾಗೆ ಬ್ರಿಯಾನ್​ ಲಾರಾ ಮೆಚ್ಚುಗೆ - Brian Lara tweet about Jasprit Bumrah

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತದ ಚುಕ್ಕಾಣಿ ಹಿಡಿದಿರುವ ಜಸ್ಪ್ರೀತ್​ ಬುಮ್ರಾ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ ದಾಖಲೆ ಮಾಡಿದ್ದು ಗೊತ್ತೇ ಇದೆ. ಇದಕ್ಕೀಗ ಕ್ರಿಕೆಟ್​ ದಿಗ್ಗಜ ಬ್ರಿಯಾನ್ ಲಾರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಮ್ರಾಗೆ ಬ್ರಿಯಾನ್​ ಲಾರಾ ಶಹಬ್ಬಾಸ್
ಬುಮ್ರಾಗೆ ಬ್ರಿಯಾನ್​ ಲಾರಾ ಶಹಬ್ಬಾಸ್
author img

By

Published : Jul 3, 2022, 11:09 AM IST

ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬುಮ್ರಾ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಒಂದೇ ಓವರ್​ನಲ್ಲಿ 35 ರನ್​ ಗಳಿಸಿ ಕ್ರಿಕೆಟ್​ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ. ಈ ಮೂಲಕ ವೆಸ್ಟ್​ ಇಂಡೀಸ್​ ಕ್ರಿಕೆಟ್​ ದಿಗ್ಗಜ ಬ್ರಿಯಾನ್​ ಲಾರಾರ ದಾಖಲೆಯನ್ನು ಉಡೀಸ್​ ಮಾಡಿದ್ದರು. ಬುಮ್ರಾರ ಸಾಧನೆಯನ್ನು ಸ್ವತಃ ಲಾರಾ ಅವರೇ ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ.

'ಟೆಸ್ಟ್​ ಕ್ರಿಕೆಟ್​ನ ಒಂದೇ ಓವರ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ನನ್ನ ದಾಖಲೆಯನ್ನು ಪುಡಿ ಮಾಡಿದ ಜಸ್ಪ್ರೀತ್​ ಬುಮ್ರಾಗೆ ಅಭಿನಂದನೆ. ವೆಲ್​ಡನ್' ​ಎಂದು ಬೆನ್ನು ತಟ್ಟಿ ಟ್ವೀಟ್​ ಮಾಡಿದ್ದಾರೆ.

ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಬುಮ್ರಾ 9 ನೇ ಆಟಗಾರನಾಗಿ ಕಣಕ್ಕಿಳಿದು ಸ್ಟುವರ್ಟ್​ ಬ್ರಾಡ್​ ಎಸೆದ ಓವರ್​ನಲ್ಲಿ 2 ಸಿಕ್ಸರ್​ 5 ಬೌಂಡರಿ ಮತ್ತು ಸಿಂಗಲ್​ (2 ಎಕ್ಸಟ್ರಾ) ಸಮೇತ 35 ರನ್​ ಬಾರಿಸಿದರು.

ಈ ಹಿಂದೆ ಹಿಂದೆ 2003ರಲ್ಲಿ ಬ್ರಿಯಾನ್​ ಲಾರಾ ಒಂದೇ ಓವರ್​ನಲ್ಲಿ 28 ರನ್​​ಗಳಿಕೆ ಮಾಡಿದ್ದರು. ಇದರ ಜೊತೆಗೆ 2013 ರಲ್ಲಿ ಜಾರ್ಜ್​ ಬೈಲಿ ಹಾಗೂ 2020ರಲ್ಲಿ ಕೇಶವ್​ ಮಹಾರಾಜ್​ ಒಂದೇ ಓವರ್​ನಲ್ಲಿ 28ರನ್​​ಗಳಿಕೆ ಮಾಡಿದವರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಯಾರ್ಕರ್​ ಕಿಂಗ್​​ ವಿಶ್ವ ದಾಖಲೆ: ಟೆಸ್ಟ್​​ನ ಒಂದೇ ಓವರ್​ನಲ್ಲಿ 35ರನ್​​ ಸಿಡಿಸಿ ಲಾರಾ ದಾಖಲೆ ಮುರಿದ ಬುಮ್ರಾ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.