ಲಂಡನ್ : ಜೋಫ್ರಾ ಆರ್ಚರ್ ಅವರಿಗೆ ನಿರಂತರವಾಗಿ ಮರುಕಳಿಸುತ್ತಿರುವ ಗಾಯದ ಸಮಸ್ಯೆ ತಂಡಕ್ಕೆ ಆತಂಕ ತಂದಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಮತ್ತು ಆ್ಯಷಸ್ ಸರಣಿಗೆ ಅವರ ಅಗತ್ಯ ಖಂಡಿತಾ ಇಂಗ್ಲೆಂಡ್ ತಂಡಕ್ಕಿದೆ ಎಂದು ಅವರು ತಿಳಿಸಿದ್ದಾರೆ.
"ಯಾವುದೇ ಕ್ರಿಕೆಟಿಗನಿಗೆ ಇದು ತುಂಬಾ ಚಿಂತೆಯನ್ನುಂಟು ಮಾಡುತ್ತದೆ. ಗಾಯದ ಪುನರಾವರ್ತನೆಯಾಗಿ ಕಾಣಿಸಿಕೊಳ್ಳುವುದನ್ನು ನೀವು ಬಯಸುವುದಿಲ್ಲ, ವಿಶೇಷವಾಗಿ ಬೌಲರ್ಗಳು ಮತ್ತು ಅದರಲ್ಲೂ ಈ ಹುಡುಗ(ಆರ್ಚರ್).
ಏಕೆಂದರೆ, ಆತ ಅಂತಹ ಅಪರೂಪದ ಪ್ರತಿಭೆ. ಕಳೆದ ವಾರ ಕೌಂಟಿ ಕ್ರಿಕೆಟ್‌ನಲ್ಲಿಯೂ ಸಹ ನಾವು ಕಳೆದ ವಾರ ಸಸೆಕ್ಸ್ ಪರ ಅವರು ಕ್ರಾಲೆ ವಿಕೆಟ್ ಪಡೆದಿದ್ದು ಅದ್ಭುತವಾಗಿದೆ" ಎಂದು ಹುಸೇನ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ನಂತರ ಆ್ಯಷಸ್ನಲ್ಲಿ ಅವರನ್ನು ತಂಡದಲ್ಲಿ ಪಡೆಯಲು ಹತಾಶಾವಾಗಿ ಎದುರು ನೋಡುತ್ತಿದೆ. ಅವರು ಬೇರೆ ಬೌಲರ್ಗಳಿಗೆ ಮಾಡಲಾಗದ ಕೆಲಸವನ್ನು ಮಾಡಲು ಸಮರ್ಥರಾಗಿದ್ದಾರೆ. ಅದಕ್ಕಾಗಿ ಆತ ಎಷ್ಟು ದೂರ ಸಾಗಬೇಕೆಂದಿದ್ದಾನೋ, ಅಷ್ಟು ಫಿಟ್ನೆಸ್ ಹೊಂದಿರಬೇಕು ಎಂದು ಹುಸೇನ್ ತಿಳಿಸಿದ್ದಾರೆ.
ಭಾರತದ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದ ಆರ್ಚರ್ ಕೊನೆ 2 ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿದ್ದರು. ನಂತರ ಶಸ್ತ್ರಚಿಕಿತ್ಸೆಗೂ ಒಳಗಾಗಿ ಐಪಿಎಲ್ನಿಂದ ಹೊರಗಿದ್ದ ಅವರು, ಕಳೆದ ವಾರವಷ್ಟೇ ಸಸೆಕ್ಸ್ ಪರ ಕಣಕ್ಕಿಳಿದಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದಿದ್ದ ಅವರು ಕೊನೆಯ ಎರಡು ದಿನ ಮೊಣಕೈ ನೋವಿನಿಂದ ಬೌಲಿಂಗ್ ಮಾಡಿರಲಿಲ್ಲ.
ಇದನ್ನು ಓದಿ: ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಲಿದೆ : ವಾನ್ ಭವಿಷ್ಯ!