ಲಂಡನ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ನಾಯಕ ಜೋ ರೂಟ್ ಆಕರ್ಷಕ ಶತಕ ಸಿಡಿಸಿದ್ದಲ್ಲದೆ, ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
3ನೇ ದಿನ 85.2ನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 9,000 ಮೈಲುಗಲ್ಲನ್ನು ದಾಟಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ 9 ಸಾವಿರ ರನ್ ಗಡಿ ದಾಟಿದ 2ನೇ ಬ್ಯಾಟ್ಸ್ಮನ್ ಎನಿಸಿದರು. ಆಲಿಸ್ಟೈರ್ ಕುಕ್ ಟೆಸ್ಟ್ ಕ್ರಿಕೆಟ್ನಲ್ಲಿ 12, 472 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
-
Yet another milestone for Joe Root 👏
— ICC (@ICC) August 14, 2021 " class="align-text-top noRightClick twitterSection" data="
He becomes the second England player to score 9000 runs in Test cricket.#WTC23 | #ENGvIND | https://t.co/rhWT865o91 pic.twitter.com/tYLmvi5Nt8
">Yet another milestone for Joe Root 👏
— ICC (@ICC) August 14, 2021
He becomes the second England player to score 9000 runs in Test cricket.#WTC23 | #ENGvIND | https://t.co/rhWT865o91 pic.twitter.com/tYLmvi5Nt8Yet another milestone for Joe Root 👏
— ICC (@ICC) August 14, 2021
He becomes the second England player to score 9000 runs in Test cricket.#WTC23 | #ENGvIND | https://t.co/rhWT865o91 pic.twitter.com/tYLmvi5Nt8
9000 ಸಾವಿರ ರನ್ ಪೂರೈಸಿದ 2ನೇ ಕಿರಿಯ ಬ್ಯಾಟ್ಸ್ಮನ್
ರೂಟ್ 9000 ರನ್ಗಳನ್ನು ಪೂರೈಸಿದ ವಿಶ್ವದ 2ನೇ ಕಿರಿಯ ಬ್ಯಾಟ್ಸ್ಮನ್ ಎನಿಸಿದರು. ರೂಟ್ 30 ವರ್ಷ 227 ದಿನಗಳಲ್ಲಿ ಈ ಸಾಧನೆ ಮಾಡಿದರೆ, ಕುಕ್ 30 ವರ್ಷ 159 ದಿನಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. 3ನೇ ಸ್ಥಾನದಲ್ಲಿರುವ ಸಚಿನ್ 30 ವರ್ಷ 253 ದಿನ ತೆಗೆದುಕೊಂಡಿದ್ದರು.
ಜೋ ರೂಟ್ ವಿಶೇಷ ಮೈಲುಗಲ್ಲುಗಳು
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16,000 ರನ್ ಪೂರೈಸಿದ ಮೊದಲ ಇಂಗ್ಲಿಷ್ ಬ್ಯಾಟ್ಸ್ಮನ್
- ಟೆಸ್ಟ್ ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ 2ನೇ ಇಂಗ್ಲೆಂಡ್ ಕ್ರಿಕೆಟರ್
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 38ನೇ ಶತಕ
- ಟೆಸ್ಟ್ ಕ್ರಿಕೆಟ್ನಲ್ಲಿ 22ನೇ ಶತಕ
- 2021ರಲ್ಲಿ ಜೋ ರೂಟ್ ಬ್ಯಾಟ್ನಿಂದ ಬಂದ 5ನೇ ಶತಕ
- ಭಾರತದ ವಿರುದ್ಧ 10ನೇ ಅಂತಾರಾಷ್ಟ್ರೀಯ ಶತಕ
ಇದನ್ನು ಓದಿ : ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್ ರಾಹುಲ್ ಭರ್ಜರಿ ಕಮ್ಬ್ಯಾಕ್