ನಾಟಿಂಗ್ಹ್ಯಾಮ್: ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 22 ರನ್ಗಳಿಸಿದ್ದ ವೇಳೆ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರು ಮಾದರಿಯಿಂದ ಹೆಚ್ಚು ರನ್ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಜೋ ರೂಟ್ ಮಾಜಿ ನಾಯಕ ಅಲಸ್ಟೈರ್ ಕುಕ್ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
-
Congratulations to @root66 on becoming England's leading run-scorer in international cricket 👏#ENGvIND | #WTC23 pic.twitter.com/kprJ1wUzhf
— ICC (@ICC) August 4, 2021 " class="align-text-top noRightClick twitterSection" data="
">Congratulations to @root66 on becoming England's leading run-scorer in international cricket 👏#ENGvIND | #WTC23 pic.twitter.com/kprJ1wUzhf
— ICC (@ICC) August 4, 2021Congratulations to @root66 on becoming England's leading run-scorer in international cricket 👏#ENGvIND | #WTC23 pic.twitter.com/kprJ1wUzhf
— ICC (@ICC) August 4, 2021
ಜೋ ರೂಟ್ ಮೂರು ಮಾದರಿಯಿಂದ 366 ಇನ್ನಿಂಗ್ಸ್ಗಳಲ್ಲಿ 15,738* ರನ್ಗಳಿಸಿದ್ದಾರೆ. ಕುಕ್ 387 ಇನ್ನಿಂಗ್ಸ್ಗಳಲ್ಲಿ 15,737 ರನ್ಗಳಿಸಿದ್ದಾರೆ. ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ 8,749, ಏಕದಿನ ಕ್ರಿಕೆಟ್ನಲ್ಲಿ 6,109 ಮತ್ತು ಟಿ-20 ಯಲ್ಲಿ 893 ರನ್ಗಳಿಸಿದ್ದಾರೆ.
ಇಂಗ್ಲೆಂಡ್ ಪರ ಹೆಚ್ಚು ಅಂತಾರಾಷ್ಟ್ರೀಯ ರನ್ಗಳಿಸಿದವರು
- ಜೋ ರೂಟ್ -15,738
- ಅಲಸ್ಟೈರ್ ಕುಕ್-15,737
- ಕೆವಿನ ಪೀಟರ್ಸನ್- 13,937
- ಇಯಾನ್ ಬೆಲ್- 13,331
- ಗ್ರಹಾಂ ಗೂಚ್-13,190
- ಅಲೆಕ್ ಜೇಮ್ಸ್ ಸ್ಟೆವರ್ಟ್- 13,140
ಇದನ್ನು ಓದಿ: ಕ್ರಿಕೆಟ್ ಟಿ20 ವಿಶ್ವಕಪ್: ಅಕ್ಟೋಬರ್ 24ಕ್ಕೆ ಭಾರತ ಪಾಕ್ ಹಣಾಹಣಿ