ETV Bharat / sports

ನೋಡಿ: ಜಾನ್ಸೆನ್‌ ಬೌನ್ಸರ್‌ಗೆ​ ತಾಳ್ಮೆ ಕಳೆದುಕೊಂಡ ಬುಮ್ರಾ - ಬುಮ್ರಾ ಬ್ಯಾಟಿಂಗ್​ ವೇಳೆ ಬೌನ್ಸರ್​ ಎಸೆದ ಜಾನ್ಸೆನ್

ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡಿದ್ದು ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸೆನ್​ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

Jasprit Bumrah loses calm
Jasprit Bumrah loses calm
author img

By

Published : Jan 5, 2022, 7:36 PM IST

Updated : Jan 5, 2022, 7:45 PM IST

ಜೋಹಾನ್ಸ್​ಬರ್ಗ್​: ಇಲ್ಲಿನ ವಾಂಡರರ್ಸ್​​​​ ಕ್ರೀಡಾಂಗಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್​​ ಪಂದ್ಯ ನಡೆಯುತ್ತಿದ್ದು, ಹರಿಣಗಳ ಗೆಲುವಿಗೆ ರಾಹುಲ್​ ಪಡೆ 240ರನ್​ಗಳ ಟಾರ್ಗೆಟ್​ ನೀಡಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾದ ಬೌಲರ್​ ಬುಮ್ರಾ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಎದುರಾಳಿ ತಂಡದ ಬೌಲರ್ ಜಾನ್ಸೆನ್​​​ ಜೊತೆ ಮಾತಿನ ಸಮರ ನಡೆಸಿದರು.

ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್​ ಎಸೆದ 54ನೇ ಓವರ್​​ನಲ್ಲಿ ಈ ಘಟನೆ ನಡೆದಿದೆ. ಬುಮ್ರಾ ಬ್ಯಾಟಿಂಗ್​ ಮಾಡ್ತಿದ್ದಾಗ ಜಾನ್ಸೆನ್ ಎಸೆದ ಬೌನ್ಸರ್ ಜಸ್ಪ್ರೀತ್​​ ಎದೆಯ ಭಾಗಕ್ಕೆ ಬಿದ್ದಿದ್ದು ಅವರು ಕೋಪಗೊಂಡರು. ಈ ವೇಳೆ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ: IND vs SA 2nd Test: ದಕ್ಷಿಣ ಆಫ್ರಿಕಾ ಗೆಲುವಿಗೆ 240 ರನ್ ಗುರಿ ನೀಡಿದ ಭಾರತ

ಸ್ಲೆಡ್ಜಿಂಗ್​ ಬಲೆಗೆ ಬಿದ್ದ ರಿಷಭ್​

ರಹಾನೆ ವಿಕೆಟ್ ಪತನಗೊಳ್ತಿದ್ದಂತೆ ಮೈದಾನಕ್ಕೆ ಬಂದ ರಿಷಭ್​ ಪಂತ್​ ದಕ್ಷಿಣ ಆಫ್ರಿಕಾ ಆಟಗಾರರ ಸ್ಲೆಡ್ಜಿಂಗ್​ ಬಲೆಗೆ ಬಿದ್ದು ವಿಕೆಟ್​ ಒಪ್ಪಿಸಿದರು. ಪಂತ್​ ಮೈದಾನಕ್ಕೆ ಬರುತ್ತಿದ್ದಂತೆ ಹರಿಣಗಳ ತಂಡದ ಡುಸ್ಸೆನ್​ ಕೆಣಕಲು ಶುರು ಮಾಡಿದರು. ಈ ವೇಳೆ ದೊಡ್ಡ ಹೊಡೆತಕ್ಕೆ ಮುಂದಾದ ಪಂತ್​​​ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

Last Updated : Jan 5, 2022, 7:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.