ಮುಂಬೈ: ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ವೇಗದ ಬೌಲಿಂಗ್ನ ಪ್ರಮುಖ ಶಕ್ತಿಯಾಗಿದ್ದಾರೆ. ಅವರು ಭಾರತ ತಂಡದಲ್ಲಿ ಮೂರು ಫಾರ್ಮೇಟ್ಗಳಲ್ಲೂ ಅದ್ಭುತವಾದ ಪ್ರದರ್ಶನ ತೋರಿದ್ದಾರೆ. ಅಲ್ಲದೇ 5 ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ನಂಬರ್ 1 ಬೌಲರ್ಗಳಲ್ಲಿ ಒಬ್ಬರಾಗಿರುವ ಜಸ್ಪ್ರೀತ್ ಬುಮ್ರಾ 2013ರಲ್ಲಿ ತಾವೂ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಹೇಗೆ ಅವಕಾಶ ಪಡೆದುಕೊಂಡೆ ಎನ್ನುವುದನ್ನು ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಸಂವಾದದ ವೇಳೆ ಬಹಿರಂಗ ಪಡಿಸಿದ್ದಾರೆ.
ಬೆಂಗಳೂರಿನ್ಲಲಿ 2013ರ ವೇಳೆ ಗ್ರೀನ್ ಫಿಚ್ನಲ್ಲಿ ನಾವು ಅಭ್ಯಾಸ ಮಾಡುತ್ತಿದ್ದೆವು. ಆ ವೇಳೆ, ಬಿಳಿ ಚೆಂಡನ್ನು ಸ್ವಿಂಗ್ ಮಾಡಲು ಹೆಚ್ಚು ಬಳಸಲಾಗುತ್ತಿತ್ತು. ನಾನು ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ನೆಟ್ಸ್ನಲ್ಲಿ ರಿಕಿ ಪಾಂಟಿಂಗ್ಗೆ ದೊಡ್ಡ ಇನ್ಸ್ವಿಂಗರ್ಗಳನ್ನು ಹಾಕುತ್ತಿದ್ದೆ. ಆಗ ಎಲ್ಲರಿಗೂ ನಾನು ಸಮಸ್ಯೆ ತಂದೊಡ್ಡುತ್ತಿದ್ದೆ. ಪಾಂಟಿಂಗ್ರನ್ನು 2-3 ಬಾರಿ ಬೌಲ್ಡ್ ಮಾಡಿದ್ದೆ. ಹಾಗಾಗಿ ಮ್ಯಾನೇಜ್ಮೆಂಟ್ ನನ್ನ ಬಗ್ಗೆ ಚರ್ಚೆ ಮಾಡಿ, ಈ ಹುಡುಗ ಸ್ವಲ್ಪ ವಿಭಿನ್ನವಾಗಿದ್ದಾನೆ, ಅವನನ್ನು ಆಡಿಸೋಣ ಎಂದು ನಿರ್ಧರಿಸಿದರು ಎಂದು ತಮ್ಮ ಆಯ್ಕೆಯ ಸ್ವಾರಸ್ಯವನ್ನು ಹೊರ ಹಾಕಿದ್ದಾರೆ.
2013ರಲ್ಲಿ ಮುಂಬೈ ಇಂಡಿಯನ್ಸ್ಗೆ ಪದಾರ್ಪಣೆ ಮಾಡಿದ ನಂತರ ಬುಮ್ರಾ 2022ರವರೆಗೂ ಮುಂಬೈ ತಂಡದಲ್ಲೇ ಆಡುತ್ತಿದ್ದಾರೆ. 15ನೇ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಜೊತೆಗೆ 12 ಕೋಟಿ ರೂಪಾಯಿಗಳಿಗೆ ರಿಟೈನ್ ಮಾಡಿಕೊಂಡಿದೆ. ಯಾರ್ಕರ್ ಸ್ಪೆಷಲಿಸ್ಟ್ 106 ಪಂದ್ಯಗಳಿಂದ 130 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!