ಮುಂಬೈ: ಗಾಯಗೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಬೆನ್ನುನೋವಿನಿಂದ ಅಕ್ಟೋಬರ್ 2022 ರಿಂದ ಹೊರಗುಳಿದಿರುವ ಸ್ಟಾರ್ ಇಂಡಿಯಾ ವೇಗದ ಬೌಲರ್ ಬುಮ್ರಾ ನ್ಯೂಜಿಲೆಂಡ್‌ನಲ್ಲಿ ತಮ್ಮ ಬೆನ್ನಿನ ಕೆಳಭಾಗದಲ್ಲಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಿಸಿಸಿಐ ನೀಡಿರುವ ಆರೋಗ್ಯ ವರದಿಯಂತೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ್ದು, ಅವರು ನೋವಿನಿಂದ ಮುಕ್ತರಾಗಿದ್ದಾರೆ" ಎಂದು ತಿಳಿಸಿದೆ.
ಬುಮ್ರಾ ಕೊನೆಯ ಬಾರಿಗೆ ಸೆಪ್ಟೆಂಬರ್ 2022ರಲ್ಲಿ ಭಾರತಕ್ಕಾಗಿ ಆಡಿದ್ದರು ಮತ್ತು ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್ 2022 ನಂತಹ ದೊಡ್ಡ ಪಂದ್ಯಾವಳಿಗಳಿಂದ ಹೊರಗುಳಿದಿದ್ದರು. ಈ ವರ್ಷದ ಆರಂಭದಲ್ಲಿ ಬೂಮ್ರಾ ತಂಡ ಸೇರುವ ನಿರೀಕ್ಷೆ ಇತ್ತು ಆದರೆ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆ ತಂಡದಿಂದ ಹೊರಗುಳಿಯ ಬೇಕಾಯಿತು.
ಶಸ್ತ್ರಚಿಕಿತ್ಸೆಯ ನಂತರ ಆರು ವಾರಗಳ ಪುನರ್ವಸತಿಯನ್ನು ಪ್ರಾರಂಭಿಸಲು ಬುಮ್ರಾ ಅವರಿಗೆ ಸಲಹೆ ನೀಡಲಾಯಿತು. ಅವರು ಏಪ್ರಿಲ್ 14 ರ ಶುಕ್ರವಾರದಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿಯಲ್ಲಿ ತೊಡಗಿದ್ದಾರೆ.
-
🚨 NEWS 🚨
— BCCI (@BCCI) April 15, 2023 " class="align-text-top noRightClick twitterSection" data="
Medical Update: Jasprit Bumrah and Shreyas Iyer
Details 🔽 #TeamIndiahttps://t.co/LKYAQi5SIn
">🚨 NEWS 🚨
— BCCI (@BCCI) April 15, 2023
Medical Update: Jasprit Bumrah and Shreyas Iyer
Details 🔽 #TeamIndiahttps://t.co/LKYAQi5SIn🚨 NEWS 🚨
— BCCI (@BCCI) April 15, 2023
Medical Update: Jasprit Bumrah and Shreyas Iyer
Details 🔽 #TeamIndiahttps://t.co/LKYAQi5SIn
ಭಾರತವು ಈ ವರ್ಷ ಎರಡು ದೊಡ್ಡ ಟ್ರೋಫಿಗಳ ನಿರೀಕ್ಷೆಯಲ್ಲಿದ್ದು ಇಬ್ಬರು ಆಟಗಾರರ ಪುನರಾಗಮದ ಬಗ್ಗೆ ಆರೋಗ್ಯ ವರದಿಯಿಂದ ವಿಶ್ವಾಸ ಹೆಚ್ಚಾಗಿದೆ. ಜೂನ್ 7ರಂದು ಓವೆಲ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತವು ಈ ವರ್ಷ ಆತಿಥ್ಯ ವಹಿಸುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಸಹ ನಡೆಯಲಿದೆ.
50 ಓವರ್‌ಗಳ ವಿಶ್ವಕಪ್‌ನ 2019 ರ ಆವೃತ್ತಿಯಲ್ಲಿ ಬುಮ್ರಾ ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು, ಒಂಬತ್ತು ಪಂದ್ಯಗಳಲ್ಲಿ 18 ಸ್ಕೇಲ್‌ಪ್‌ಗಳನ್ನು ಹೊಂದಿದ್ದಾರೆ.
ಮುಂದಿನ ವಾರ ಅಯ್ಯರ್ಗೆ ಶಸ್ತ್ರಚಿಕಿತ್ಸೆ: ಪುನರಾವರ್ತಿತ ಬೆನ್ನಿನ ಸಮಸ್ಯೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ನಡೆಯುತ್ತಿರುವ ಆವೃತ್ತಿಯಿಂದ ಹೊರಗುಳಿದ ಶ್ರೇಯಸ್ ಅಯ್ಯಗೆ ಮುಂದಿನ ವಾರ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. "ಅವರು ಎರಡು ವಾರಗಳ ಕಾಲ ಶಸ್ತ್ರಚಿಕಿತ್ಸಕರ ಆರೈಕೆಯಲ್ಲಿರುತ್ತಾರೆ ಮತ್ತು ನಂತರ ಪುನರ್ವಸತಿಗಾಗಿ ಎನ್‌ಸಿಎಗೆ ಹಿಂತಿರುಗುತ್ತಾರೆ" ಎಂದು ಬಿಸಿಸಿಐ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ಸರಣಿಯಿಂದ ಅಯ್ಯರ್ ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಂತರ ಅವರು ಶ್ರೀಲಂಕಾ ವಿರುದ್ಧದ ಸರಣಿ ಮತ್ತು ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದರು.
ಆಸ್ಟ್ರೇಲಿಯಾದ ಎರಡನೇ ಟೆಸ್ಟ್ನಲ್ಲಿ ಅಯ್ಯರ್ ತಂಡಕ್ಕೆ ಸೇರಿಕೊಂಡಿದ್ದರು. ಆದರೆ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಹೊರಗುಳಿದರು. ನಂತರ ನಡೆದ ಏಕದಿನ ಸರಣಿಯಲ್ಲೂ ಅಯ್ಯರ್ ಕಾಣಿಸಿಕೊಳ್ಳಲಿಲ್ಲ. ಟೆಸ್ಟ್ನಲ್ಲಿ ಗಾಯಗೊಂಡಿದ್ದ ಅವರನ್ನು ಸ್ಕ್ಯಾನಿಂಗ್ಗೆ ಕಳಿಸಲಾಗಿತ್ತು. ನಂತರ ಅವರು ಇಲ್ಲೇ ವೈದ್ಯಕೀಯ ಸಲಹೆಯಲ್ಲಿದ್ದರು. ನಂತರ ಅವರು ವಿದೇಶಕ್ಕೆ ಚಿಕಿತ್ಸೆಗಾಗಿ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ: RCB vs DC : ವಿರಾಟ್ ಅರ್ಧಶತಕ, ಡೆಲ್ಲಿಗೆ 175 ರನ್ನ ಸಾಧಾರಣ ಗುರಿ