ಬಾರ್ಬಡೋಸ್(ವೆಸ್ಟ್ ಇಂಡೀಸ್): ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್ ಹ್ಯಾಟ್ರಿಕ್ ಸಹಿತ ಮಾರಕ ಬೌಲಿಂಗ್ (27ಕ್ಕೆ 5) ನೆರವಿನಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧ 5ನೇ ಟಿ-20 ಪಂದ್ಯದಲ್ಲಿ 17 ರನ್‌ಗಳ ಅಂತರದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆರಿಬಿಯನ್ನರು ಆಂಗ್ಲರ ವಿರುದ್ಧ 3-2 ಅಂತರದಲ್ಲಿ ಸರಣಿ ಗೆದ್ದಿದ್ದಾರೆ.
ಪಂದ್ಯದ ಅಂತಿಮ ಓವರ್ ಎಸೆದ ಜೇಸನ್ ಹೋಲ್ಡರ್ ನಾಲ್ಕು ವಿಕೆಟ್ ಕಬಳಿಸಿದರು. ಆಗ ಇಂಗ್ಲೆಂಡ್ ಗೆಲುವಿಗೆ 20 ರನ್ ಅಗತ್ಯವಿತ್ತು. ಜೋರ್ಡನ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್(41) ಕ್ರೀಸ್ನಲ್ಲಿದ್ದರು. ಆದರೆ ಮೊದಲ ಎಸೆತ ನೋಬಾಲ್, ನಂತರದ ಎಸೆತದಲ್ಲಿ ಒಂದೂ ರನ್ ನೀಡದ ಹೋಲ್ಡರ್, ಬಳಿಕ ನಾಲ್ಕು ಎಸೆತಗಳಲ್ಲಿ 4 ಹುದ್ದರಿ ಪಡೆದು ಮಿಂಚಿದರು. ಇದು ವಿಂಡೀಸ್ ಪರ ಟಿ-20 ಕ್ರಿಕೆಟ್ನಲ್ಲಿ ಚೊಚ್ಚಲ ಹ್ಯಾಟ್ರಿಕ್ ಸಾಧನೆಯಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ಸಾಧನೆಗೈದ ನಾಲ್ಕನೇ ಬೌಲರ್ ಆಗಿದ್ದಾರೆ.
-
2nb . W W W W
— ICC (@ICC) January 31, 2022 " class="align-text-top noRightClick twitterSection" data="
What a final over by Jason Holder 🔥
He becomes the first West Indies men's bowler to take a T20I hat-trick 👏#WIvENG pic.twitter.com/nDJpXEGGFD
">2nb . W W W W
— ICC (@ICC) January 31, 2022
What a final over by Jason Holder 🔥
He becomes the first West Indies men's bowler to take a T20I hat-trick 👏#WIvENG pic.twitter.com/nDJpXEGGFD2nb . W W W W
— ICC (@ICC) January 31, 2022
What a final over by Jason Holder 🔥
He becomes the first West Indies men's bowler to take a T20I hat-trick 👏#WIvENG pic.twitter.com/nDJpXEGGFD
ವಿಂಡೀಸ್ ನೀಡಿದ 180 ರನ್ ಗುರಿ ಬೆನ್ನಟ್ಟಿದ ಆಂಗ್ಲರು 19.5 ಓವರ್ಗಳಲ್ಲಿ 162 ರನ್ಗೆ ಆಲೌಟ್ ಆದರು. ತಂಡದ ಪರ ಜೇಮ್ಸ್ ವಿನ್ಸ್ ಅರ್ಧಶತಕ (55) ಬಾರಿಸಿದರೆ, ಬಳಿಕ ಬಿಲ್ಲಿಂಗ್ಸ್ 41 ರನ್ ಗಳಿಸಿ ಗೆಲುವಿಗೆ ಹೋರಾಡಿದರು. ನಾಯಕ ಮೋಯಿನ್ ಅಲಿ 14, ಜಾಸನ್ ರಾಯ್ 8, ಬ್ಯಾಂಟನ್ 16 ರನ್ ಬಾರಿಸಿದ್ದು, ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ತಲುಪಲಿಲ್ಲ. ವಿಂಡೀಸ್ ಪರ ಹೋಲ್ಡರ್ ಹ್ಯಾಟ್ರಿಕ್ ಸಹಿತ 27 ರನ್ಗೆ 5 ಹಾಗೂ ಅಕೀಲ್ ಹೊಸೆನ್ 30ಕ್ಕೆ 4 ವಿಕೆಟ್ ಕಬಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ, ಉತ್ತಮ ಆಟದಿಂದ 4 ವಿಕೆಟ್ಗೆ 179 ರನ್ ಪೇರಿಸಿತು. ಆರಂಭಿಕ ಆಟಗಾರರಾದ ಬ್ರಾಂಡನ್ ಕಿಂಗ್ 34 ಹಾಗೂ ಕೆ ಮೆಯರ್ಸ್ 31 ರನ್ ಬಾರಿಸಿ ಮೊದಲ ವಿಕೆಟ್ 59 ರನ್‌ಗಳ ಜೊತೆಯಾಟವಾಡಿದರು. ನಂತರ ವಿಕೆಟ್ ಕೀಪರ್ ಪೂರನ್ 21, ನಾಯಕ ಪೊಲಾರ್ಡ್ ಅಜೇಯ 41 ಹಾಗೂ ಪೊವೆಲ್ರ ಅಜೇಯ 35 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಇವರಿಬ್ಬರು ಕೊನೆಯ 24 ಎಸೆತಗಳಲ್ಲಿ 66 ರನ್ ಚಚ್ಚಿದರು.
ಇಂಗ್ಲೆಂಡ್ ಪರ ಆದಿಲ್ ರಶಿದ್ ಹಾಗೂ ಲಿವಿಂಗ್ಸ್ಟನ್ ತಲಾ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ವಿಂಡೀಸ್ ಟಿ-20 ಸರಣಿಯನ್ನು 3-2ರ ಅಂತರದಲ್ಲಿ ಗೆದ್ದುಕೊಂಡಿದೆ.
ಇದನ್ನೂ ಓದಿ: ಫೆಡರರ್, ಜೊಕೊವಿಕ್ ದಾಖಲೆ ಮುರಿದ ರಾಫೆಲ್: 21ನೇ ಗ್ರ್ಯಾಂಡ್ ಸ್ಲ್ಯಾಮ್ಗೆ ಮುತ್ತಿಕ್ಕಿದ ನಡಾಲ್