ಮುಂಬೈ: ಫಾಫ್ ಡು ಪ್ಲೆಸಿಸ್ ಮತ್ತು ರವೀಂದ್ರ ಜಡೇಜಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಆರ್ಸಿಬಿಗೆ ಗೆಲ್ಲಲು 192 ರನ್ಗಳ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.
ಆರಂಭಿಕ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ 50, ಜಡೇಜಾ 62 ಮತ್ತು ಗಾಯಕ್ವಾಡ್ 33 ರನ್ಗಳಿಸಿ ಬೃಹತ್ ಮೊತ್ತದ ಗುರಿಗೆ ಕಾರಣರಾದರು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸಿಎಸ್ಕೆ ಆರಂಭದಲ್ಲೇ ಅಬ್ಬರದ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಗಾಯಕ್ವಾಡ್(33) ಮತ್ತು ಫಾಫ್ ಡು ಪ್ಲೆಸಿಸ್ 74 ರನ್ಗಳ ಜೊತೆಯಾಟ ನೀಡಿದರು.
-
6, 6, 6+Nb, 6, 2, 6, 4@imjadeja has hammered Harshal Patel for 36 runs. A joint record for most runs scored by a batsman in 1 over of #VIVOIPL ever! pic.twitter.com/1nmwp9uKc0
— IndianPremierLeague (@IPL) April 25, 2021 " class="align-text-top noRightClick twitterSection" data="
">6, 6, 6+Nb, 6, 2, 6, 4@imjadeja has hammered Harshal Patel for 36 runs. A joint record for most runs scored by a batsman in 1 over of #VIVOIPL ever! pic.twitter.com/1nmwp9uKc0
— IndianPremierLeague (@IPL) April 25, 20216, 6, 6+Nb, 6, 2, 6, 4@imjadeja has hammered Harshal Patel for 36 runs. A joint record for most runs scored by a batsman in 1 over of #VIVOIPL ever! pic.twitter.com/1nmwp9uKc0
— IndianPremierLeague (@IPL) April 25, 2021
ಅಪಾಯಕಾರಿಯಾಗಿ ಮುನ್ನಗ್ಗುತ್ತಿದ್ದ ಈ ಜೋಡಿಯನ್ನು ಚಹಾಲ್ ಬ್ರೇಕ್ ಮಾಡಿ ಆರ್ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟರು. ಗಾಯಕ್ವಾಡ್ 25 ಎಸೆತಗಳಲ್ಲಿ 33 ರನ್ಗಳಿಸಿದರು. ನಂತರ ಪ್ಲೆಸಿಸ್ ಜೊತೆಗೂಡಿ ರೈನಾ ಸ್ಫೋಟಕ ಬ್ಯಾಟಿಂಗ್ ನಡಸೆ ಕೇವಲ 18 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 24 ರನ್ಗಳಿಸಿದರು.
ಈ ಹಂತದಲ್ಲಿ ಬೌಲಿಂಗ್ ಇಳಿದ ವಿಕೆಟ್ ಬೇಟೆಗಾರ ಹರ್ಷಲ್ ಪಟೇಲ್ ಕಣಕ್ಕಿಳಿಸಿ ರೈನಾ ಮತ್ತು 41 ಎಸೆತಗಳಲ್ಲಿ 50 ರನ್ಗಳಿಸಿದ್ದ ಪ್ಲೆಸಿಸ್ರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ಗಟ್ಟಿದರು. ನಂತರ ಅಂಬಾಟಿ ರಾಯುಡು ಕೂಡ ಹರ್ಷೆಲ್ರ 3ನೇ ಓವರ್ನಲ್ಲಿ 14 ರನ್ಗಳಿಸಿ ಔಟಾದರು.
19 ಓವರ್ಗಳಲ್ಲಿ 154 ರನ್ಗಳಿಸಿದ್ದ ಸಿಎಸ್ಕೆ ಕೊನೆಯ ಓವರ್ನಲ್ಲಿ 37 ರನ್ ಸೂರೆಗೈದಿತು. ಹರ್ಷೆಲ್ ಪಟೇಲ್ ಎಸೆದ 20ನೇ ಓವರ್ನಲ್ಲಿ ಜಡೇಜಾ 5 ಸಿಕ್ಸರ್ ಮತ್ತು ಒಂದು ಬೌಂಡರಿ ನೆರೆವಿನಿಂದ 37 ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಒಟ್ಟಾರೆ ಜಡೇಜಾ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಬೌಂಡರಿ ಸಹಿತ ಅಜೇಯ 62 ರನ್ ಸಿಡಿಸಿದರು.
ಆರ್ಸಿಬಿ ಪರ ಹರ್ಷಲ್ ಪಟೇಲ್ 51 ರನ್ ನೀಡಿ 3 ವಿಕೆಟ್ ಪಡೆದರೆ,ಚಹಾಲ್ 24 ರನ್ ನೀಡಿ ಒಂದು ವಿಕೆಟ್ ಪಡೆದರು.