ETV Bharat / sports

ಸ್ಟೀವ್‌ ಹೆಸರಿಂದ ಕರೆದಿದ್ದಕ್ಕೆ ಪೂಜಾರಗೆ ಕ್ಷಮೆಯಾಚಿಸಿದ ಇಂಗ್ಲೆಂಡ್​ ಬೌಲರ್​

ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ ಅವರನ್ನು ಸ್ಟೀವ್​ ಎಂಬ ಅಡ್ಡ ಹೆಸರಿನಿಂದ ಕರೆದಿದ್ದಕ್ಕೆ ಇಂಗ್ಲೆಂಡ್ ಕೌಂಟಿ ಕ್ಲಬ್​ ಸಮರ್​ಸೆಟ್​ ಬೌಲರ್​ ಜಾಕ್ ಬ್ರೂಕ್ಸ್​ ಕ್ಷಮೆಯಾಚಿಸಿದ್ದಾರೆ.

Jack Brooks apologises to Pujara for 'Steve' nickname during Yorkshire stint
ಈ ಹೆಸರಿನಿಂದ ಕರೆದಿದ್ದಕ್ಕೆ ಪೂಜಾರರನ್ನು ಕ್ಷಮೆಯಾಚಿಸಿದ ಇಂಗ್ಲೆಂಡ್​ ಬೌಲರ್​
author img

By

Published : Nov 19, 2021, 4:09 AM IST

ಲಂಡನ್: ಭಾರತ ತಂಡದ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ ಅವರನ್ನು ಸ್ಟೀವ್​ ಎಂದು ಅಡ್ಡ ಹೆಸರಿನಿಂದ ಕರೆದಿದ್ದಕ್ಕೆ ಇಂಗ್ಲೆಂಡ್ ಕೌಂಟಿ ಕ್ಲಬ್​ ಸಮರ್​ಸೆಟ್​ ಬೌಲರ್​ ಜಾಕ್ ಬ್ರೂಕ್ಸ್​ ಕ್ಷಮೆಯಾಚಿಸಿದ್ದಾರೆ. 2012ರಲ್ಲಿ ತಾವೂ ಮಾಡಿರುವ ಜನಾಂಗೀಯ ನಿಂದನೆ ಎಂದು ಬಿಂಬಿಸುವ ಟ್ವೀಟ್​ಗಳಿಗೂ ಕ್ಷಮೆಯಾಚಿಸಿದ್ದಾರೆ.

ಪೂಜಾರ ಅವರು ಯಾರ್ಕ್​ಶೈರ್​ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಬ್ರೂಕ್ಸ್​ ಭಾರತೀಯ ಕ್ರಿಕೆಟಿಗನ ಹೆಸರನ್ನು ಕರೆಯಲು ಕಷ್ಟ ಎಂದು ಸ್ಟೀವ್​ ಎಂದು ಕರೆಯುತ್ತಿದ್ದರು. ಕಳೆದ ವರ್ಷ ವರ್ಣಬೇಧ ನೀತಿ ವಿರುದ್ಧ ಸಿಡಿದೆದ್ದು ಯಾರ್ಕ್​ಶೈರ್‌ ಕ್ಲಬ್​ನಿಂದ ಹೊರಬಂದಿದ್ದ ಅಜೀಮ್ ರಫೀಕ್​ ಕ್ಲಬ್​ನಲ್ಲಿ ತಮ್ಮನ್ನಲ್ಲದೆ ಪೂಜಾರ ಅವರನ್ನು ಕೂಡ ಜನಾಂಗೀಯವಾಗಿ ನಿಂದಿಸಿದ್ದರು ಎಂದು ಆರೋಪಿಸಿದ್ದರು.

ಅಲ್ಲದೆ ತಾವೂ ಕ್ಲಬ್​ನಲ್ಲಿನ ಇಂಗ್ಲಿಷ್​ ಕ್ರಿಕೆಟಿಗರ ನಿಂದನೆಯಿಂದ ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಹೇಳಿದ್ದರು. ಇದೀಗ ವರ್ಣಬೇಧ ನೀತಿ ವಿವಾದ ಕಳೆದೊಂದು ವಾರದಿಂದ ಇಂಗ್ಲೆಂಡ್​ ಕ್ರಿಕೆಟ್​ನಲ್ಲಿ ಬಿರುಗಾಳಿ ಎಬ್ಬಿದ್ದು, ತನಿಖೆ ನಡೆಯುತ್ತಿದೆ.

ಉಚ್ಚರಿಸಲು ಕಷ್ಟಪಡುವವರ ಹೆಸರಿನ ಬದಲಿಗೆ ನಾವು 'ಸ್ಟೀವ್' ಎಂದು ಕರೆಯುತ್ತಿದ್ದೆವು. ಪೂಜಾರ ಅವರನ್ನು ಹಾಗೆಯೇ ಕರೆಯಲಾಗಿತ್ತು. ಹಾಗೆ ಮಾಡಿರುವುದು ಅಗೌರವ. ನಮ್ಮಿಂದ ತಪ್ಪಾಗಿದೆ. ಈಗ ನಾನು ಈ ವಿಷಯಕ್ಕಾಗಿ ಪೂಜಾರ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಬ್ರೂಕ್ಸ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.