ETV Bharat / sports

ಐಸಿಸಿ ಏಕದಿನ ಶ್ರೇಯಾಂಕ: ಅಯ್ಯರ್​, ಗಿಲ್​ಗೆ ಪ್ಲಸ್.. ವಿರಾಟ್​, ರೋಹಿತ್​ಗೆ ಮೈನಸ್​ - ಭಾರತದ ಶ್ರೇಯಸ್ ಅಯ್ಯರ್

ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿ ಸೋಲಿನ ಮಧ್ಯೆಯೂ ಭಾರತೀಯ ಬ್ಯಾಟರ್​ಗಳು ಶ್ರೇಯಾಂಕದಲ್ಲಿ ಏರಿಕೆ ದಾಖಲಿಸಿದ್ದಾರೆ. ವಿಶ್ರಾಂತಿಯಲ್ಲಿರುವ ವಿರಾಟ್​, ರೋಹಿತ್​ ಇಳಿಕೆ ಕಂಡಿದ್ದಾರೆ.

player-rankings
ಐಸಿಸಿ ಏಕದಿನ ಶ್ರೇಯಾಂಕ
author img

By

Published : Nov 30, 2022, 8:16 PM IST

ದುಬೈ: ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏರಿಕೆ ಕಂಡರೆ, ವಿಶ್ರಾಂತಿಯಲ್ಲಿರುವ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಒಂದು ಅಂಕ ಜಾರಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಬುಧವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಅಯ್ಯರ್ ಮತ್ತು ಗಿಲ್ ಸರಣಿಯಲ್ಲಿ ಅರ್ಧಶತಕ ದಾಖಲಿಸಿದ್ದು, ಕ್ರಮವಾಗಿ 6 ಮತ್ತು 3 ಸ್ಥಾನಗಳ ಜಿಗಿತ ಕಂಡು 27 ಮತ್ತು 34 ನೇ ಸ್ಥಾನಕ್ಕೆ ಲಗ್ಗೆ ಇಟ್ಟರು. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದಾಗ್ಯೂ ಶಿಖರ್ ಧವನ್ ಎರಡು ಸ್ಥಾನ ಕುಸಿದರು. ಇನ್ನು ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ತಲಾ 1 ಸ್ಥಾನ ಕುಸಿದು ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದ್ದಾರೆ.

ಕಿವೀಸ್​ ದಾಂಡಿಗರಿಗೆ ಪ್ಲಸ್​: ಸರಣಿಯಲ್ಲಿ ಶತಕ ಬಾರಿಸಿದ ನ್ಯೂಜಿಲ್ಯಾಂಡ್​ ಬ್ಯಾಟರ್​ ಟಾಮ್ ಲ್ಯಾಥಮ್ 10 ಸ್ಥಾನಗಳು ಏರಿ 18ಕ್ಕೆ ತಲುಪಿದ್ದಾರೆ. ಭರ್ಜರಿ ಇನಿಂಗ್ಸ್​ ಕಟ್ಟಿದ್ದ ನಾಯಕ ಕೇನ್​ ವಿಲಿಯಮ್ಸನ್​ ಅಗ್ರ 10 ರಲ್ಲಿ ಸ್ಥಾನ ಪಡೆದರು. ಬೌಲಿಂಗ್‌ನಲ್ಲಿ ಮ್ಯಾಟ್ ಹೆನ್ರಿ ಮೂರು ಸ್ಥಾನ ಜಿಗಿದು ನಂ.5 ಕ್ಕೆ ಬಂದರೆ, ಲೂಕಿ ಫರ್ಗುಸನ್ 32 ನೇ ಸ್ಥಾನ ಪಡೆದರು.

ಇನ್ನುಳಿದಂತೆ ಬ್ಯಾಟರ್​ಗಳಲ್ಲಿ ಪಾಕಿಸ್ತಾನದ ಬಾಬರ್​ ಅಜಂ ನಂ.1 ಸ್ಥಾನದಲ್ಲಿದ್ದರೆ, ಬೌಲಿಂಗ್​ನಲ್ಲಿ ನ್ಯೂಜಿಲ್ಯಾಂಡ್​ನ ಟ್ರೆಂಟ್​ ಬೌಲ್ಟ್​, ಆಲ್​ರೌಂಡರ್​ಗಳಲ್ಲಿ ಶಕೀಬ್​ ಅಲ್​ ಹಸನ್​ ಅಗ್ರಸ್ಥಾನದಲ್ಲಿದ್ದಾರೆ.

ಓದಿ: ಹಾಕಿ ಟೆಸ್ಟ್​ನಲ್ಲಿ ಭಾರತಕ್ಕೆ 4-3 ಗೋಲಿಂದ ಜಯ.. 13 ವರ್ಷದ ಬಳಿಕ ಆಸೀಸ್​ ವಿರುದ್ಧ ಮೊದಲ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.