ETV Bharat / sports

ಬ್ಯಾಟರ್​​​ಗಳಿಂದ ರನ್​ ಬರದಿದ್ದರೆ ಪಂದ್ಯ ಗೆಲ್ಲುವುದು ತುಂಬಾ ಕಷ್ಟ : ರೋಹಿತ್ ಶರ್ಮಾ ಬೇಸರ - ಮುಂಬೈ ವಿರುದ್ದ ಡೆಲ್ಲಿಗೆ ಗೆಲುವು

ಮುಂಬೈ ಇಂಡಿಯನ್ಸ್ ಈ ಸೋಲಿನೊಂದಿಗೆ 12 ಪಂದ್ಯಗಳಿಂದ 10 ಅಂಕಗಳಿಸಿ 6ನೇ ಸ್ಥಾನದಲ್ಲಿದೆ. ಇದೀಗ ಪ್ಲೇ ಆಫ್​ ಪ್ರವೇಶಿಸಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದರ ಜತೆಗೆ ತಮ್ಮ ಪ್ರತಿಸ್ಪರ್ಧಿಗಳಾದ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಸೋಲಲಿ ಎಂದು ಕೋರಿಕೊಳ್ಳಬೇಕಾಗಿದೆ..

Rohit Sharma
ರೋಹಿತ್ ಶರ್ಮಾ
author img

By

Published : Oct 2, 2021, 9:28 PM IST

ಶಾರ್ಜಾ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ತಂಡದ ಬ್ಯಾಟ್ಸ್​ಮನ್​ಗಳು ತಮ್ಮ ಸಾಮರ್ಥ್ಯಕ್ಕ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರೆಂದು ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಕೇವಲ 129 ರನ್​ ಗಳಿಸಿತ್ತು. ಸೂರ್ಯಕುಮಾರ್​ ಯಾದವ್​ 33 ರನ್​ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್​ 20ರ ಗಡಿದಾಟಲಿಲ್ಲ. ಆದರೂ ಬೌಲರ್​ಗಳ ಪ್ರದರ್ಶನದಿಂದ ಮುಂಬೈ ಕೊನೆಯ ಓವರ್​ವರೆಗೂ ಪೈಪೋಟಿ ನೀಡಿತು.

ಮುಂಬೈ ಇಂಡಿಯನ್ಸ್ ಈ ಸೋಲಿನೊಂದಿಗೆ 12 ಪಂದ್ಯಗಳಿಂದ 10 ಅಂಕಗಳಿಸಿ 6ನೇ ಸ್ಥಾನದಲ್ಲಿದೆ. ಇದೀಗ ಪ್ಲೇ ಆಫ್​ ಪ್ರವೇಶಿಸಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದರ ಜತೆಗೆ ತಮ್ಮ ಪ್ರತಿಸ್ಪರ್ಧಿಗಳಾದ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಸೋಲಲಿ ಎಂದು ಕೋರಿಕೊಳ್ಳಬೇಕಾಗಿದೆ.

"ನಿಮ್ಮ ಬ್ಯಾಟರ್ಸ್​ ಬೋರ್ಡ್​ನಲ್ಲಿ ಉತ್ತಮ ರನ್​ ಕಲೆಯಾಗದಿದ್ದರೆ, ಪಂದ್ಯಗಳನ್ನು ಗೆಲ್ಲುವುದು ಕಷ್ಟವಾಗುತ್ತದೆ. ನಾನು ಅದನ್ನು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆ. ನಮ್ಮ ಮಧ್ಯಮ ಕ್ರಮಾಂಕದ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಫಲರಾದೆವು, ಇದು ನಮಗೆ ನಿರಾಶೆ ತಂದಿದೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ, ಆಶಾದಾಯಕವಾಗಿ ಮುಂದಿನ ಎರಡು ಪಂದ್ಯದಲ್ಲಿ ನಮ್ಮ ನೈಜ ಆಟ ಆಡುತ್ತೇವೆ " ಎಂದು ರೋಹಿತ್ ಪಂದ್ಯದ ನಂತರ ಹೇಳಿದ್ದಾರೆ.

ಈ ಮೈದಾನದಲ್ಲಿ ನಡೆದಿರುವ ಪಂದ್ಯಗಳನ್ನು ಸಾಕಷ್ಟು ನೋಡಿದ್ದೇವೆ. ಈ ವಿಕೆಟ್​ನಲ್ಲಿ 170-180 ರನ್​ಗಳಿಸುವುದಕ್ಕೆ ಅಸಾಧ್ಯವೆಂದು ನಮಗೆ ತಿಳಿದಿತ್ತು. ಅದಕ್ಕಾಗಿ ನಾವು 140ರನ್​ ಇಲ್ಲಿ ಉತ್ತಮ ಸ್ಕೋರ್​ ಎಂದು ಭಾವಿಸಿದ್ದೆವು. ಆದರೆ, ಜೊತೆಯಾಟಗಳು ನಾವು ಅಂದುಕೊಂಡಂತೆ ಮೂಡಿ ಬರಲಿಲ್ಲ ಎಂದು ಮುಂಬೈ ನಾಯಕ ಹೇಳಿದ್ದಾರೆ.

ಇದನ್ನು ಓದಿ:ಶೀಘ್ರದಲ್ಲಿ ಬೌಲಿಂಗ್​ಗೆ ಮರಳಲಿದ್ದೇನೆ : ವಿಶ್ವಕಪ್​ಗೂ ಮುನ್ನ ಗುಡ್​ ನ್ಯೂಸ್​ ನೀಡಿದ ಪಾಂಡ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.