ಮುಂಬೈ: 2021ನೇ ಸಾಲಿಗೋಸ್ಕರ ಪಂಜಾಬ್ ಕಿಂಗ್ಸ್ ತಯಾರು ಮಾಡಿರುವ ಜರ್ಸಿ ಈಗಾಗಲೇ ನೆಟ್ಟಿಗರಿಂದ ಟ್ರೋಲ್ಗೊಳಗಾಗಿದ್ದು, ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯರ್ ಕೂಡ ರಾಹುಲ್ ಪಡೆಯ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಜರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದ ಟ್ವೀಟ್ ಮಾಡಿರುವ ಯಜುವೇಂದ್ರ ಚಹಾಲ್, ವೆಲ್ಕಮ್ ಟು ಆರ್ಸಿಬಿ ಬಾಯ್ಸ್ ಎಂದು ಟ್ವೀಟ್ ಮಾಡಿ, ತಂಡದ ಕಾಲೆಳೆದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಪಂಜಾಬ್ ಹಾಕಿಕೊಂಡಿರುವ ಜರ್ಸಿ.
-
Welcome to @RCBTweets boys 🤣🤣 @henrygayle @klrahul11 pic.twitter.com/1TQ65VzScR
— Yuzvendra Chahal (@yuzi_chahal) April 12, 2021 " class="align-text-top noRightClick twitterSection" data="
">Welcome to @RCBTweets boys 🤣🤣 @henrygayle @klrahul11 pic.twitter.com/1TQ65VzScR
— Yuzvendra Chahal (@yuzi_chahal) April 12, 2021Welcome to @RCBTweets boys 🤣🤣 @henrygayle @klrahul11 pic.twitter.com/1TQ65VzScR
— Yuzvendra Chahal (@yuzi_chahal) April 12, 2021
ಇದನ್ನೂ ಓದಿ: ಚೊಚ್ಚಲ IPL ಪಂದ್ಯದಲ್ಲೇ 3 ವಿಕೆಟ್,ಅದ್ಭುತ ಕ್ಯಾಚ್: ಗಮನ ಸೆಳೆದ ಟೆಂಪೋ ಡ್ರೈವರ್ ಮಗ ಸಕಾರಿಯಾ!
ಕಳೆದ ಕೆಲ ದಿನಗಳ ಹಿಂದೆ 14ನೇ ಆವೃತ್ತಿಗಾಗಿ ನೂತನ ಜರ್ಸಿ ಬಿಡುಗಡೆ ಮಾಡಿದ್ದ ಪಂಜಾಬ್ ಕಿಂಗ್ಸ್ ಪಡೆಯನ್ನ ನೆಟ್ಟಿಗರು ಟ್ರೋಲ್ ಮಾಡಿದ್ದರು. 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಂದಿದ್ದ ಜರ್ಸಿಯನ್ನೇ ಪಂಜಾಬ್ ಇದೀಗ ತಯಾರು ಮಾಡಿದೆ ಎಂದು ಅನೇಕರು ಟ್ರೋಲ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇದು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್ ಆಗಿದ್ದು, ಕನ್ನಡಿಗನಾದ ಕೆ.ಎಲ್ ರಾಹುಲ್ ಕ್ಯಾಪ್ಟನ್ ಆಗಿದ್ದಾರೆ.