ನವದೆಹಲಿ: ರಾಷ್ಟ್ರೀಯ ಫೆಡರೇಶನ್ ಅಧ್ಯಕ್ಷ (ಡಬ್ಲ್ಯೂಎಫ್ಐ) ಬಿಜ್ ಭೂಷಣ್ ವಿರುದ್ಧ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಸ್ಟಾರ್ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದು, ಈ ಸಂಬಂಧ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಪಿಟಿ ಉಷಾ ಅವರಿಗೆ ದೂರು ಸಲ್ಲಿಸಿದ್ದಾರೆ. ಡಬ್ಲ್ಯೂಎಫ್ಐ ಮುಖ್ಯಸ್ಥ ಸೇರಿದಂತೆ ಅನೇಕ ಕೋಚ್ಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
-
Khiladi hone ke nate main bhi kal jantar mantar protest mein shamil rahuga 🇮🇳 #BoycottWrestlingPresident
— Vijender Singh (@boxervijender) January 19, 2023 " class="align-text-top noRightClick twitterSection" data="
">Khiladi hone ke nate main bhi kal jantar mantar protest mein shamil rahuga 🇮🇳 #BoycottWrestlingPresident
— Vijender Singh (@boxervijender) January 19, 2023Khiladi hone ke nate main bhi kal jantar mantar protest mein shamil rahuga 🇮🇳 #BoycottWrestlingPresident
— Vijender Singh (@boxervijender) January 19, 2023
ಪಿಟಿ ಉಷಾ ಅವರಿಗೆ ಸಲ್ಲಿರುವ ದೂರಿನ ಪ್ರತಿಯನ್ನು ಒಲಂಪಿಕ್ ವಿಜೇತ ವಿಘ್ನೇಶ್ ಪೋಗಟ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ. ದೂರಿನಲ್ಲಿ ಅವರು ಪ್ರಕರಣದ ಗಂಭೀರತೆ ಕುರಿತು ತಿಳಿಸಿದ್ದು, ದೌರ್ಜನ್ಯದ ಕುರಿತು ಹಲವಾರು ಯುವ ಕುಸ್ತಿಪಟುಗಳು ಕೂಡ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಪತ್ರಕ್ಕೆ ಟೊಕಿಯೋ ಒಲಂಪಿಕ್ ಪದಕ ವಿಜೇತರಾದ ರವಿ ದಹಿಹಾ ಮತ್ತು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಕಂಚಿನ ಪದಕ ವಿಜೇತ ರಿಯೋ ಗಣೇಶ್ ಮತ್ತು ವರ್ಲ್ಡ್ ಚಾಂಪಿಯನ್ಶಿಪ್ ಪದಕ ವಿಜೇತರಾಗಿರುವ ವಿಘ್ನೇಶ್ ಪೋಗಟ್ ಮತ್ತು ದೀಪಕ್ ಪುನಿಯಾ ಸಹಿ ಹಾಕಿದ್ದಾರೆ.
ಪತ್ರದಲ್ಲಿ ಇದೇ ವೇಳೆ ಕುಸ್ತಿಪಟುಗಳ ಫೆಡರೇಶನ್ನಲ್ಲಿ ನಡೆಯುತ್ತಿರುವ ಹಣಕಾಸಿನ ಅವ್ಯವಹಾರದ ಆರೋಪದ ಕುರಿತು ಕೂಡ ತಿಳಿಸಲಾಗಿದೆ. ಟಾಟಾ ಮೋಟರ್ಸ್ನಿಂದ ಕಳೆದ ಕೆಲವು ವರ್ಷಗಳಿಂದ ಹಲವು ಹಿರಿಯ ಕುಸ್ತಿಪಟುಗಳು ಸ್ಪಾನ್ಸರ್ಶಿಪ್ ಅಡಿ ಕಂಟ್ರಾಕ್ಟ್ ಪೇಮೆಂಟ್ಗೆ ಅನುಮತಿ ನೀಡಲಾಗಿದೆ. ಆದರೆ, ಈ ಹಣ ಪಾವತಿಯಲ್ಲಿ ಒಂದಿಷ್ಟು ಭಾಗವನ್ನು ಮಾತ್ರ ಡಬ್ಲ್ಯೂಎಫ್ಐ ಮಾಡುತ್ತಿದೆ ಎಂದು ಕೂಡ ತಿಳಿಸಲಾಗಿದೆ.
ಮಾನಸಿಕ ದೌರ್ಜನ್ಯದ ಆರೋಪ: ಟೋಕಿಯೋದಲ್ಲಿ ಒಲಂಪಿಕ್ ಪದಕ ಕೈ ತಪ್ಪಿದ ಹಿನ್ನಲೆ ಡಬ್ಲ್ಯೂಎಫ್ಐ ಅಧ್ಯಕ್ಷರು ತಮ್ಮನ್ನು ಮಾನಸಿಕವಾಗಿ ದೌರ್ಜನ್ಯ ನಡೆಸಿದರು ಎಂದು ವಿನೇಶ್ ಪೋಗಟ್ ತಿಳಿಸಿದ್ದಾರೆ. ಅವರ ದೌರ್ಜನ್ಯದಿಂದ ಕಡೆಗೆ ಆತ್ಮಹತ್ಯೆ ಯತ್ನವನ್ನು ನಡೆಸಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋಚ್ಗಳು ಮತ್ತು ಕ್ರೀಡಾ ವಿಜ್ಞಾನ ಸಿಬ್ಬಂದಿಗಳು, ಡಬ್ಲ್ಯೂಎಫ್ಐ ಅಧ್ಯಕ್ಷರು ಮೆರಿಟ್ ಬದಲು ಯೋಗ್ಯವಲ್ಲದವರಿಗೆ ರಾಷ್ಟ್ರೀಯ ಕ್ಯಾಪ್ ನಡೆಸಿದ್ದಾರೆ. ನ್ಯಾಷನಲ್ ಕ್ಯಾಪ್ನಲ್ಲಿ ಕೆಟ್ಟ ಪರಿಸ್ಥಿತಿ ಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಭಾರತೀಯ ಒಲಂಪಿಕ್ ಅಸೋಸಿಯೇಷನ್ ತಕ್ಷಣವೇ ಸಮಿತಿಯನ್ನು ರಚಿಸಿ, ಲೈಂಗಿಕ ದೌರ್ಜನ್ಯದ ದೂರಿನ ಆಧಾರದ ಅನುಸಾರ ತನಿಖೆಗೆ ಮುಂದಾಗಬೇಕು. ಡಬ್ಲ್ಯೂಎಫ್ಐ ಅಧ್ಯಕ್ಷರು ತಕ್ಷಣವೇ ರಾಜೀನಾಮೆ ನೀಡಬೇಕು. ಕುಸ್ತಿಪಟು ಫೆಡರೇಷನ್ ಅನ್ನು ರದ್ದುಗೊಳಿಸಿ, ಕುಸಿಪಟುಗಳ ಜೊತೆಗೆ ಡಬ್ಲ್ಯೂಎಫ್ ಸಮಾಲೋಚನೆಗೆ ಹೊಸ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಣ್ಣೀರು ಹಾಕಿದ ಪ್ರತಿಭಟನಾಕಾರರು: ಡಬ್ಲ್ಯೂಎಫ್ಐ ಅಧ್ಯಕ್ಷರ ವಿರುದ್ಧ ಕುಸ್ತಿಪಟುಗಳು ಎಲ್ಲಾ ಒಟ್ಟಾಗಿ ಈ ರೀತಿ ಪ್ರತಿಭಟನೆ ನಡೆಸಬೇಕು ಎಂದರೆ ಸಾಕಷ್ಟು ಧೈರ್ಯ ಬೇಕು. ನಾವು ಈಗ ಜೀವ ಭಯದಲ್ಲಿ ಬದುಕುತ್ತಿದ್ದೇವೆ. ಅವರನ್ನು ಈ ಸ್ಥಾನದಿಂದ ಕಿತ್ತೊಗೆಯದಿದ್ದರೆ, ನಮ್ಮ ಜೊತೆ ಪ್ರತಿಭಟನೆಗೆ ಕುಳಿತ ಯುವ ಕುಸ್ತಿಪಟುಗಳ ವೃತ್ತಿ ನಾಶವಾಗತ್ತದೆ ಎಂದು ಕಣ್ಣೀರಾಗಿ ಸಹಾಯವನ್ನು ಯಾಚಿಸಿದ್ದಾರೆ.
ಪ್ರಾಕ್ಟಿಸ್ ಬಿಟ್ಟು ಈ ರೀತಿ ಪ್ರತಿಭಟನೆ ನಡೆಸುವುದು ನಿಜಕ್ಕೂ ದುರದೃಷ್ಟಕರವಾಗಿದೆ. ನಮ್ಮ ಹೋರಾಟ ಕೇವಲ ಭಾರತೀಯ ಕುಸ್ತಿಪಟು ಫೆಡರೇಷನ್ ವಿರುದ್ಧ. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೇ, ಪ್ರಧಾನಿಗಳು, ಗೃಹಸಚಿವರು ಮತ್ತು ಕೇಂದ್ರ ಕ್ರೀಡಾ ಸಚಿವರು ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಬಜರಂಗ್ ಪುನಿಯಾ ತಿಳಿಸಿದ್ದಾರೆ.
ಹರಿಯಾಣ ಸಚಿವರಿಂದ ಹಿಡಿದು ಡಬ್ಲ್ಯುಎಫ್‌ಐ ಅಧ್ಯಕ್ಷರವರೆಗೆ ಎಲ್ಲರೂ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಆದರೆ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳಾ ಆಟಗಾರರನ್ನು ರಕ್ಷಿಸುವುದರ ಬದಲಾಗಿ ಈ ಸರ್ಕಾರ ಮತ್ತು ಪಕ್ಷ ತಮ್ಮ ನಾಯಕರ ರಕ್ಷಣೆಗೆ ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಮಧ್ಯ ಕೆಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಶುಕ್ರವಾರ ಕುಸ್ತಿಪಟಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಗುರುವಾರ ರಾತ್ರ ನಡೆದ ಮಾತುಕತೆಯಲ್ಲಿ ಕುಸ್ತಿಪಟುಗಳು ಯಾವುದೇ ರಾಜಿಗೆ ಬಾರದೆ ಅವರು ಡಬ್ಲ್ಯೂ ಎಫ್ಐ ಮುಖ್ಯಸ್ಥರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.
ಇದನ್ನೂ ಓದಿ: WFI ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: 72 ಗಂಟೆಯೊಳಗೆ ವಿವರಣೆ ನೀಡಲು SAI ಸೂಚನೆ