ETV Bharat / sports

ನಾವು ವಿಶೇಷ ಬೌಲರ್​​ಗಳನ್ನು ಹೊಂದಿದ್ದೇವೆ ಎಂಬ ಅರಿವು ನಮಗಿತ್ತು: ಸ್ಯಾಮ್ಸನ್

author img

By

Published : Sep 22, 2021, 8:31 AM IST

ಪಂದ್ಯವನ್ನು ಗೆಲ್ಲಲು ಬೇಕಾದ ಉತ್ತಮ ಬೌಲರ್​ಗಳು ನಮ್ಮ ಬಳಿ ಇದ್ದರು. ನಾವು ತಂಡದಲ್ಲಿ ವಿಶೇಷ ಬೌಲರ್​​ಗಳನ್ನು ಹೊಂದಿದ್ದೇವೆ ಎಂಬ ಅರಿವು ನಮಗೆ ಇತ್ತು ಎಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಆರ್​ ತಂಡ ಭರ್ಜರಿ ಗೆಲುವು ಸಾಧಿಸಿದ ಬಳಿಕ ತಂಡದ ನಾಯಕ ಸಂಜು ಸ್ಯಾಮ್ಸನ್​​ ಹೇಳಿಕೊಂಡಿದ್ದಾರೆ.

Rajasthan Royals
ಆರ್​ಆರ್​ ತಂಡ

ದುಬೈ: ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಆರ್​ಆರ್​ ತಂಡದ ನಾಯಕ ಸಂಜು ಸ್ಯಾಮ್ಸನ್​​ ಸಂತಸ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ನಾವು ತಂಡದಲ್ಲಿ ವಿಶೇಷ ಬೌಲರ್​​ಗಳನ್ನು ಹೊಂದಿದ್ದೇವೆ ಎಂಬ ಅರಿವು ನಮಗೆ ಇತ್ತು ಎಂದು ಹೇಳಿಕೊಂಡಿದ್ದಾರೆ.

ಪಂದ್ಯವನ್ನು ಗೆಲ್ಲಲು ಬೇಕಾದ ಉತ್ತಮ ಬೌಲರ್​ಗಳು ನಮ್ಮ ಬಳಿ ಇದ್ದರು. ಮುಸ್ತಾಫಿಜುರ್​ ಅವರ ಬೌಲಿಂಗ್​​ ಅನ್ನು ಕೊನೆವರೆಗೂ ಉಳಿಸಿಕೊಂಡಿದ್ದು, ಮತ್ತು ತ್ಯಾಗಿ ಯಾರ್ಕರ್​​ ಬೌಲಿಂಗ್​ ಮಾಡಿ ಪಂದ್ಯದ ಜಯ ಆರ್​​ಆರ್​ ಪರ ಬರುವಂತೆ ಮಾಡಿದರು ಎಂದು ಸ್ಯಾಮ್ಸನ್​​ ಹೇಳಿದರು.

ಇದನ್ನೂ ಓದಿ: Ipl 2021 : ರಾಜಸ್ಥಾನ ರಾಯಲ್ಸ್​​ಗೆ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು

ಹೊಸ ಬ್ಯಾಟ್ಸ್​​​ಮನ್​ಗಳ ವಿರುದ್ಧ ಬೌಲರ್​ಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದೇವೆ. ಅಷ್ಟೇ ಅಲ್ಲ ಉತ್ತಮ ಫೀಲ್ಡಿಂಗ್​ ಯೋಜನೆಯನ್ನು ಕೂಡಾ ಹೊಂದಿದ್ದೆವು. ನಮಗೆ ಆ ಸ್ಕೋರ್​​ ಸಂತೋಷ ತಂದಿದೆ. ಆರಂಭದಲ್ಲಿ ಕೆಲ ಡ್ರಾಪ್​ ಮಾಡದಿದ್ದರೆ ಇನ್ನೂ ಮೊದಲೇ ಗೆಲ್ಲುತ್ತಿದ್ದೆವು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮ್ಯಾನ್​ ಆಫ್​ ದಿ ಮ್ಯಾಚ್​ ಆಗಿರುವ ತ್ಯಾಗಿ ಮಾತನಾಡಿ, ಗೆದ್ದಿರುವುದು ಸಂತಸ ತಂದಿದೆ. ಐಪಿಎಲ್​ ಆರಂಭವಾದಾಗ ಗಾಯಗೊಂಡಿದ್ದೆ, ಆ ಬಳಿಕ ಬೇಗ ಚೇತರಿಸಿಕೊಂಡೆ. ಅಷ್ಟರಲ್ಲೇ ಟೂರ್ನಿ ರದ್ದಾಯಿತು ಎಂದು ನೆನಪಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.