ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿ ದ್ವಿತೀಯಾರ್ಧದ ಇಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿದ್ದು, ಶಾರ್ಜಾ ಮೈದಾನದಲ್ಲಿ ಮ್ಯಾಚ್ ನಡೆಯುತ್ತಿದೆ.
ಕೋಲ್ಕತ್ತಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆಗೊಳಗಾಗಿರುವ ಆರ್ಸಿಬಿ, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಮೈದಾನಕ್ಕಿಳಿದಿದ್ದು, ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ಸಿಂಗಪೂರ್ ದೇಶದ ಪ್ಲೇಯರ್ಗೆ ಅವಕಾಶ
ಬ್ಯಾಟರ್ ಸಚಿನ್ ಬೇಬಿ ಸ್ಥಾನಕ್ಕೆ ಆರ್ಸಿಬಿ ಟಿಮ್ ಡೇವಿಡ್ಗೆ ಅವಕಾಶ ನೀಡಿದೆ. ಐಪಿಎಲ್ನಲ್ಲಿ ಆಡುತ್ತಿರುವ ಮೊದಲ ಸಿಂಗಾಪೂರ್ ಪ್ಲೇಯರ್ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಕೇವಲ 1 ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು.
ಬಿಬಿಎಲ್, ಪಿಎಸ್ಎಲ್, ಟಿ-20 ಬ್ಲಾಸ್ಟ್ ಮತ್ತು ಸಿಪಿಎಲ್ನಲ್ಲಿ ಆಡಿದ ಅನುಭವ ಹೊಂದಿರುವ 25 ವರ್ಷದ ಯುವ ಆಟಗಾರ, ಸಿಂಗಾಪುರ್ ತಂಡದ ಪರ 14 ಟಿ20 ಪಂದ್ಯಗಳನ್ನು ಆಡಿದ್ದಾರೆ. 4 ಅರ್ಧಶತಕಸಹಿತ 558 ರನ್ ಸಿಡಿಸಿದ್ದಾರೆ. ಇದೀಗ ವಿಶ್ವದ ಶ್ರೀಮಂತ ಟಿ-20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಹಂತದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ 50 ಪಂದ್ಯಗಳನ್ನಾಡಿದ್ದು, 6 ಅರ್ಧಶತಕಗಳ ಸಹಿತ 155.84ರ ಸ್ಟ್ರೈಕ್ರೇಟ್ನಲ್ಲಿ 1186 ರನ್ಗಳಿಸಿದ್ದಾರೆ.