ಮುಂಬೈ: ಸ್ಯಾಮ್ ಕರ್ರಾನ್ ಅರ್ಧಶತಕ ಮತ್ತು ಹರ್‌ಪ್ರೀತ್ ಸಿಂಗ್ ಭಾಟಿಯಾ ಅವರು ಅಮೂಲ್ಯ 41 ರನ್ನ ಕೊಡುಗೆಯ ಜೊತೆಗೆ ಇತರೆ ಬ್ಯಾಟರ್ಗಳ ರನ್ ಸಹಾಯದಿಂದ ಪಂಜಾಬ್ ಕಿಂಗ್ಸ್ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟದಿಂದ 214 ರನ್ ಗಳಿಸಿದ್ದಾರೆ. ಮುಂಬೈ ಬೌಲರ್ಗಳ ಮೇಲೆ ಸವಾರಿ ಮಾಡುತ್ತಾ ಬಂದ ಪಂಜಾಬ್ ಹುಡುಗರು ರೋಹಿತ್ ಬಳಗಕ್ಕೆ 215 ರನ್ ಬೃಹತ್ ಗುರಿಯನ್ನು ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಪಂಜಾಬ್ಗೆ ಕ್ಯಾಮೆರಾನ್ ಗ್ರೀನ್ ಆರಂಭಿಕ ಆಘಾತ ಕೊಟ್ಟರು. 11 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಅಥರ್ವ ಟೈಡೆ ತಂಡ ಮೊತ್ತಕ್ಕೆ 40+ ರನ್ ಕೊಡುಗೆ ನೀಡಿದರು. ಪ್ರಭ್‌ಸಿಮ್ರಾನ್ ಸಿಂಗ್ 26 ರನ್ ಗಳಿಸಿ ಔಟ್ ಆದರೆ, ಅಥರ್ವ ಟೈಡೆ 29ಕ್ಕೆ ವಿಕೆಟ್ ಒಪ್ಪಿಸಿದರು.
ಕಳೆದ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ (10) ಮತ್ತೆ ವೈಫಲ್ಯ ಕಂಡರು. ಆದರೆ ನಂತರ ಬಂದ ಸ್ಯಾಮ್ ಕರ್ರಾನ್ ಮತ್ತು ಹರ್‌ಪ್ರೀತ್ ಸಿಂಗ್ ಭಾಟಿಯಾ ತಂಡಕ್ಕೆ ಆಸರೆಯಾದರು. ಇಬ್ಬರು 80 + ರನ್ನ ಬಿರುಸಿನ ಜೊತೆಯಾಟ ಮಾಡಿದರು. 28 ಬಾಲ್ ಎದುರಿಸಿದ ಹರ್‌ಪ್ರೀತ್ ಸಿಂಗ್ ಭಾಟಿಯಾ ಎರಡು ಸಿಕ್ಸ್ ಮತ್ತು 4 ಬೌಂಡರಿಯಿಂದ 41 ರನ್ ಗಳಿಸಿ ಗ್ರೀನ್ಗೆ ವಿಕೆಟ್ ಕೊಟ್ಟರು. ನಾಯಕ ಸ್ಯಾಮ್ 29 ಬಾಲ್ನಲ್ಲಿ 4 ಸಿಕ್ಸ್ ಮತ್ತು 5 ಬೌಂಡರಿಯಿಂದ 55 ರನ್ ಗಳಿಸಿದರು. ಸ್ಯಾಮ್ ಕರ್ರಾನ್ ಐಪಿಎಲ್ನ 3 ಅರ್ಧಶತಕ ದಾಖಲು ಮಾಡಿದರು.
-
Innings break!@PunjabKingsIPL post a mighty first-innings total of 214/8 🔥🔥
— IndianPremierLeague (@IPL) April 22, 2023 " class="align-text-top noRightClick twitterSection" data="
A huge chase coming up for @mipaltan! Can they emerge victorious tonight? We will find out soon 🙌
Scorecard ▶️ https://t.co/FfkwVPpj3s #TATAIPL | #MIvPBKS pic.twitter.com/F5WBsvURgC
">Innings break!@PunjabKingsIPL post a mighty first-innings total of 214/8 🔥🔥
— IndianPremierLeague (@IPL) April 22, 2023
A huge chase coming up for @mipaltan! Can they emerge victorious tonight? We will find out soon 🙌
Scorecard ▶️ https://t.co/FfkwVPpj3s #TATAIPL | #MIvPBKS pic.twitter.com/F5WBsvURgCInnings break!@PunjabKingsIPL post a mighty first-innings total of 214/8 🔥🔥
— IndianPremierLeague (@IPL) April 22, 2023
A huge chase coming up for @mipaltan! Can they emerge victorious tonight? We will find out soon 🙌
Scorecard ▶️ https://t.co/FfkwVPpj3s #TATAIPL | #MIvPBKS pic.twitter.com/F5WBsvURgC
ನಂತರ ಬಂದ ಜಿತೇಶ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡಿದರು. 7 ಬಾಲ್ ಫೇಸ್ ಮಾಡಿದ ಅವರು 4 ಸಿಕ್ಸ್ನಿಂದ 25 ರನ್ ಗಳಿಸಿ ಔಟ್ ಆದರು. ಅವರ ಈ ರನ್ನ ನೆರವಿನಿಂದ ತಂಡ 200 ರನ್ನ ಗಡಿ ದಾಟಿತು. ಮುಂಬೈ ಪರ ಕ್ಯಾಮೆರಾನ್ ಗ್ರೀನ್ ಮತ್ತು ಪಿಯೂಷ್ ಚಾವ್ಲಾ ತಲಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಅರ್ಜುನ್ ತೆಂಡೂಲ್ಕರ್ ತಲಾ ಒಂದು ವಿಕೆಟ್ ಉರುಳಿಸಿದರು.
ತಂಡಗಳು ಇಂತಿವೆ..: ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಹರ್‌ಪ್ರೀತ್ ಸಿಂಗ್ ಭಾಟಿಯಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್
ಇದನ್ನೂ ಓದಿ: LSG vs GT: ಲಕ್ನೋಗೆ 136 ರನ್ನ ಸಾಧಾರಣ ಗುರಿ ನೀಡಿದ ಗುಜರಾತ್