ETV Bharat / sports

SRH vs DC: ಗೆಲುವಿನ ಲಯ ಮುಂದುವರೆಸುತ್ತಾ ಡೆಲ್ಲಿ?: ಉಭಯ ತಂಡಗಳಿಗೆ ಜಯ ಅನಿವಾರ್ಯ

author img

By

Published : Apr 24, 2023, 4:08 PM IST

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ಸನ್​ ರೈಸರ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದ್ದು, ಭರ್ಜರಿ ಫೈಟ್​ ಏರ್ಪಡುವ ಸಾಧ್ಯತೆ ಇದೆ.

Sunrisers Hyderabad vs Delhi Capitals 34th Match preview
SRH vs DC: ಗೆಲುವಿನ ಲಯ ಮುಂದುವರೆಸುತ್ತಾ ಡೆಲ್ಲಿ?, ಉಭಯ ತಂಡಗಳಿಗೆ ಗೆಲುವಿನ ಅನಿವಾರ್ಯ

ಹೈದರಾಬಾದ್ (ತೆಲಂಗಾಣ): ಐಪಿಎಲ್ 2023ರ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಎರಡೂ ತಂಡಗಳು ಇಂದು ಮುಖಾಮುಖಿಯಾಗಲಿವೆ. ಸನ್‌ರೈಸರ್ಸ್ ಹೈದರಾಬಾದ್ ಆಡಿರುವ ಆರರಲ್ಲಿ ಎರಡನ್ನು ಮಾತ್ರ ಗೆದ್ದು ಕೊಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್​ ಕೊನೆಯ ಪಂದ್ಯದಲ್ಲಿ ಕೆಕೆಆರ್​ ಮಣಿಸಿ ಮೊದಲ ಜಯ ದಾಖಲಿಸಿದೆ. ಈ ಆವೃತ್ತಿಯಲ್ಲಿ ಕ್ವಾಲಿಫೈ ಆಗಲು ಎರಡೂ ತಂಡಕ್ಕೆ ಮುಂದಿನ ಎಲ್ಲ ಪಂದ್ಯಗಳ ಗೆಲುವು ಅನಿವಾರ್ಯವಾಗಿದೆ. ಡೆಲ್ಲಿ ಕಳೆದ ಪಂದ್ಯದ ಗೆಲುವಿನ ಲಯ ಮುಂದುವರೆಸಲು ನೋಡುತ್ತಿದ್ದರೆ, ಸನ್​ ರೈಸರ್ಸ್​ ಹ್ಯಾಟ್ರಿಕ್​ ಸೋಲಿನಿಂದ ತಪ್ಪಿಸಿಕೊಳ್ಳಲು ಚಿಂತಿಸುತ್ತಿದೆ.

  • POV: It's the early 2000s and you're back from school, turning on your PC, and playing your heart out with Gungly, Lawrence and Murgalidoron 🥺#SRHvDC pic.twitter.com/Gl6U8DZOhX

    — Delhi Capitals (@DelhiCapitals) April 23, 2023 " class="align-text-top noRightClick twitterSection" data=" ">

ಮೊದಲ ಪಂದ್ಯದಿಂದಲೂ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸುತ್ತಾ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ರನ್​ ಕಲೆ ಹಾಕುವುದೇ ದೊಡ್ಡ ಸವಾಲಾಗಿದೆ. ತಂಡ ರನ್​ ಗಳಿಸುವಲ್ಲಿ ಕೇವಲ ಡೇವಿಡ್​ ವಾರ್ನರ್​ ಮತ್ತು ಅಕ್ಷರ್​ ಪಟೇಲ್​ ಮಾತ್ರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಮಿಕ್ಕಿ ಬ್ಯಾಟರ್​ಗಳು ಲಯಕ್ಕೆ ಮರಳುತ್ತಿಲ್ಲ. ಪಂತ್​​ ಇಲ್ಲದ ತಂಡ ವೀಕ್​ ಆಗಿ ಕಂಡು ಬರುತ್ತಿದೆ. ಬೌಲಿಂಗ್ ಉತ್ತಮ ನಿರ್ವಹಣೆ ಕಂಡರೂ ರನ್​ ಗಳಿಸಲು ಪರದಾಡುತ್ತಿರುವುದು ತಂಡಕ್ಕೆ ಗೆಲುವು ದೂರವಾಗಿದೆ.

Prince of Calcutta 🤝 Prince of Port of Spain

A Royal meeting 😍 pic.twitter.com/JQstTLyqF8

— SunRisers Hyderabad (@SunRisers) April 23, 2023

ಪವರ್ - ಪ್ಲೇಯಲ್ಲೇ ವಿಕೆಟ್​ ಕಳೆದುಕೊಳ್ಳುತ್ತಿರುವುದರಿಂದ ಡೆಲ್ಲಿಗೆ ಬೃಹತ್​ ರನ್​ ಕಲೆಹಾಕಲಾಗುತ್ತಿಲ್ಲ. ಆರಂಭಿಕ ಬ್ಯಾಟರ್​ ಪೃಥ್ವಿ ಶಾ ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು, ಆದರೆ, ಐಪಿಎಲ್​ನಲ್ಲಿ ರನ್​ಗಳಿಸಲು ಕಷ್ಟಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಶಾ ಆರು ಇನ್ನಿಂಗ್ಸ್‌ಗಳಲ್ಲಿ 7.83 ಸರಾಸರಿಯಲ್ಲಿ 47 ರನ್‌ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್ ನಾಲ್ಕು ಪಂದ್ಯಗಳಲ್ಲಿ ಆರು ರನ್, ರೋವ್‌ಮನ್ ಪೊವೆಲ್ ಮೂರರಲ್ಲಿ ಏಳು, ರೈಲಿ ರೊಸೊವ್ ಮೂರರಲ್ಲಿ 44 ಮತ್ತು ಕಳೆದ ಪಂದ್ಯದಲ್ಲಿ ಬಂದ ಫಿಲ್ ಸಾಲ್ಟ್ ಕೇವಲ ಐದು ರನ್ ಗಳಿಸಿದರು.

ಸನ್​ ರೈಸರ್ಸ್​ ತಂಡವೂ ಸಹ ಬ್ಯಾಟಿಂಗ್​ ವೈಫಲ್ಯ ಎದುರಿಸುತ್ತಿದೆ. ಹ್ಯಾರಿ ಬ್ರೂಕ್​ ಒಂದು ಪಂದ್ಯದಲ್ಲಿ ಅಬ್ಬರಿಸಿ ಶತಕ ಗಳಿಸಿದರು. ಮತ್ತೆ ಅವರ ಬ್ಯಾಟ್​ನಿಂದ ಹೇಳುವಂತಹ ಪ್ರದರ್ಶನ ಕಂಡು ಬರಲಿಲ್ಲ. ನಾಯಕ ಐಡೆನ್ ಮಾರ್ಕ್ರಾಮ್ ಸಹ ರನ್​ ಗಳಿಸುತ್ತಿಲ್ಲ. ಇನ್ನು ದೇಶೀಯ ಆಟಗಾರರಾದ ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ ಮತ್ತು ವಾಷಿಂಗ್ಟನ್ ಸುಂದರ್ ಸಹ ಮಂಕಾಗಿದ್ದಾರೆ.

ಸಂಭಾವ್ಯ ತಂಡಗಳು ಇಂತಿವೆ..: ಸನ್​ ರೈಸರ್ಸ್​ ಹೈದರಾಬಾದ್​: ಹ್ಯಾರಿ ಬ್ರೂಕ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್(ವಿಕೆಟ್​ ಕೀಪರ್​), ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಖಂಡೆ, ಉಮ್ರಾನ್ ಮಲಿಕ್

ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್​ ಕೀಪರ್​), ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್ / ಪೃಥ್ವಿ ಶಾ, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಲಲಿತ್ ಯಾದವ್, ಅಮನ್ ಖಾನ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ

ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಿಂದ ಸಂಜೆ 7:30ಕ್ಕೆ ಸ್ಟಾರ್​ ಸ್ಪೋರ್ಟ್ಸ್​ ಮತ್ತು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ: ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಧೋನಿ ಪಡೆ.. ಪಾಯಿಂಟ್​ ಪಟ್ಟಿಯಲ್ಲಿ ಸಿಎಸ್​​ಕೆ ನಂಬರ್​ ಒನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.