ಭಾರತದ ಪ್ರಸಿದ್ಧ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 2023 ಕೊನೆಯ ಹಂತ ತಲುಪಿದೆ. ಲೀಗ್ನ 70 ಪಂದ್ಯಗಳಲ್ಲಿ ಈಗಾಗಲೇ 61 ಪಂದ್ಯಗಳು ಮುಗಿದಿವೆ. ಭಾನುವಾರ (ನಿನ್ನೆ) 61ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಿತು. ಸಿಎಸ್ಕೆ ನೀಡಿದ 145 ರನ್‌ಗಳ ಗುರಿ ಬೆನ್ನಟ್ಟಿದ್ದ ಕೆಕೆಆರ್ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳಿಂದ ಗೆಲುವು ದಾಖಲಿಸಿತು.
ತವರಿನಲ್ಲಿ ಧೋನಿ ಅವರಿಗಿದು ಕೊನೆಯ ಪಂದ್ಯ ಎನ್ನಲಾಗುತ್ತಿದೆ. ಆದರೆ ಈ ಪಂದ್ಯದಲ್ಲಿ ಧೋನಿ ಸಾರಥ್ಯದ ಸಿಎಸ್ಕೆ ಸೋಲು ಅನುಭವಿಸಿತು. ಆದರೂ ಮಾಹಿ ಚೆಪಾಕ್ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು. ಪಂದ್ಯ ಮುಗಿದ ನಂತರ ಧೋನಿ ಮೈದಾನದ ಸುತ್ತ ತೆರಳಿ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳತ್ತ ಉಡುಗೊರೆಗಳನ್ನು ಎಸೆದು ಧನ್ಯವಾದ ಅರ್ಪಿಸಿದರು. ಚೆನ್ನೈನ ಕೆಲವು ಅಭಿಮಾನಿಗಳಿಗೆ ಆಟೋಗ್ರಾಫ್ ಕೂಡಾ ನೀಡಿದರು.
-
𝙔𝙚𝙡𝙡𝙤𝙫𝙚! 💛
— IndianPremierLeague (@IPL) May 14, 2023 " class="align-text-top noRightClick twitterSection" data="
A special lap of honour filled with memorable moments ft. @msdhoni & Co. and the ever-so-energetic Chepauk crowd 🤗#TATAIPL | #CSKvKKR | @ChennaiIPL pic.twitter.com/yHntEpuHNg
">𝙔𝙚𝙡𝙡𝙤𝙫𝙚! 💛
— IndianPremierLeague (@IPL) May 14, 2023
A special lap of honour filled with memorable moments ft. @msdhoni & Co. and the ever-so-energetic Chepauk crowd 🤗#TATAIPL | #CSKvKKR | @ChennaiIPL pic.twitter.com/yHntEpuHNg𝙔𝙚𝙡𝙡𝙤𝙫𝙚! 💛
— IndianPremierLeague (@IPL) May 14, 2023
A special lap of honour filled with memorable moments ft. @msdhoni & Co. and the ever-so-energetic Chepauk crowd 🤗#TATAIPL | #CSKvKKR | @ChennaiIPL pic.twitter.com/yHntEpuHNg
ಇದೇ ವೇಳೆ ಭಾರತದ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಕೂಡ ಧೋನಿ ಅವರ ಬಳಿ ಆಗಮಿಸಿ ತಮ್ಮ ಶರ್ಟ್ ಮೇಲೆ ಆಟೋಗ್ರಾಫ್ ಪಡೆದುಕೊಂಡರು. ಈ ಅಪರೂಪದ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುನಿಲ್ ಗವಾಸ್ಕರ್ ಪ್ರಸ್ತುತ ಐಪಿಎಲ್ 2023ರ ಕಾಮೆಂಟರಿ ತಂಡದ ಭಾಗವಾಗಿದ್ದಾರೆ.
ಅಭಿಮಾನಿಗಳ ಧೋನಿ.. ಧೋನಿ.. ಎಂಬ ಕೂಗು ಇಡೀ ಮೈದಾನ ಆವರಿಸಿದ್ದು ಒಂದೆಡೆಯಾದರೆ, ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಧೋನಿಯಿಂದ ಆಟೋಗ್ರಾಫ್ ಪಡೆದಿರುವುದು ವಿಶೇಷವಾಗಿತ್ತು.
ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ಧೋನಿ, ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ನಮ್ಮ ತಂಡಕ್ಕೆ 180 ರನ್‌ಗಳ ಅವಶ್ಯಕತೆಯಿತ್ತು. ಈ ಪಿಚ್‌ನಲ್ಲಿ ನಾವು 180 ಗಳಿಸುವ ಯಾವ ಮಾರ್ಗವೂ ಇರಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ವಾತಾವರಣವಿದ್ದು ಬೌಲರ್ಗಳು ಪಂದ್ಯದಲ್ಲಿ ಹಿಡಿತ ಸಾಧಿಸಲಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಯಾವುದೇ ಬೌಲರ್‌ಗಳನ್ನು ದೂಷಿಸಲು ಸಾಧ್ಯವಿಲ್ಲ ಎಂದರು. ಶಿವಂ ದುಬೆ ಬಗ್ಗೆ ಮಾತನಾಡಿದ ಅವರು, ಶಿವಂ ಉತ್ತಮ ಬ್ಯಾಟಿಂಗ್ ಸಂತೋಷ ತಂದಿದೆ. ಮುಖ್ಯವಾದ ವಿಷಯವೆಂದರೆ ಅವರು ತಮ್ಮ ಇಂದಿನ ಪಂದ್ಯದ ಬಗ್ಗೆ ತೃಪ್ತಿ ಹೊಂದಿಲ್ಲ ಎಂದು ಹೇಳಿದರು. ಕೆಕೆಆರ್ ತಂಡದ ನಾಯಕ ನಿತೇಶ್ ರಾಣ ಮಾತನಾಡಿ, "ಎರಡನೇ ಇನ್ನಿಂಗ್ಸ್ ವೇಳೆ ಚೆಂಡು ಹೆಚ್ಚಾಗಿ ಸ್ವಿಂಗ್ ಆಗಲಿಲ್ಲ ಎಂದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೂ 13 ಪಂದ್ಯಗಳನ್ನು ಆಡಿದೆ. ಈ ಪೈಕಿ 7ರಲ್ಲಿ ಗೆದ್ದು, 5ರಲ್ಲಿ ಸೋಲು ಕಂಡಿದೆ. 1 ಪಂದ್ಯ ಡ್ರಾದಲ್ಲಿ ಮುಗಿದಿದೆ. 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳನ್ನು ಆಡಿದ್ದು, 6ರಲ್ಲಿ ಗೆಲುವು 7ರಲ್ಲಿ ಸೋಲು ಕಂಡಿದ್ದು 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: IPL Playoff Race: ಉಳಿದೆರಡು ಪಂದ್ಯ ಗೆದ್ರೆ RCB ಪ್ಲೇಆಫ್ಗೆ, 7 ತಂಡಗಳ ನಡುವೆ ರೋಚಕ ಫೈಟ್!