ಮಗ ತನ್ನ ಕಣ್ಣೆದುರಿಗೆ ಸಾಧನೆ ಮಾಡುತ್ತಿದ್ದರೆ ಎಂಥ ತಂದೆಗೂ ಅದು ಹೆಮ್ಮೆಯೇ. ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿನ್ನೆ ಐಪಿಎಲ್ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮರಿ ತೆಂಡೂಲ್ಕರ್ ಕ್ರಿಕೆಟ್ನಲ್ಲಿ ಭವಿಷ್ಯದ ಹುಡುಕಾಟಕ್ಕೆ ನಾಂದಿ ಹಾಡಿದರು.
-
Arjun, today you have taken another important step in your journey as a cricketer. As your father, someone who loves you and is passionate about the game, I know you will continue to give the game the respect it deserves and the game will love you back. (1/2) pic.twitter.com/a0SVVW7EhT
— Sachin Tendulkar (@sachin_rt) April 16, 2023 " class="align-text-top noRightClick twitterSection" data="
">Arjun, today you have taken another important step in your journey as a cricketer. As your father, someone who loves you and is passionate about the game, I know you will continue to give the game the respect it deserves and the game will love you back. (1/2) pic.twitter.com/a0SVVW7EhT
— Sachin Tendulkar (@sachin_rt) April 16, 2023Arjun, today you have taken another important step in your journey as a cricketer. As your father, someone who loves you and is passionate about the game, I know you will continue to give the game the respect it deserves and the game will love you back. (1/2) pic.twitter.com/a0SVVW7EhT
— Sachin Tendulkar (@sachin_rt) April 16, 2023
ಪುತ್ರನ ಐಪಿಎಲ್ ಎಂಟ್ರಿಯಿಂದ ಪುಳಕಿತರಾಗಿರುವ ಸಚಿನ್ ಭಾವನಾತ್ಮಕ ಸಂದೇಶದ ಜೊತೆಗೆ ತಮ್ಮೊಂದಿಗೆ ಪುತ್ರನಿರುವ ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. "ಅರ್ಜುನ್, ಇಂದು ನೀವು ಕ್ರಿಕೆಟ್ ಪ್ರಯಾಣದಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದೀರಿ. ನಿನ್ನನ್ನು ಪ್ರೀತಿಸುವ ಮತ್ತು ಕ್ರೀಡೆಯ ಬಗ್ಗೆ ಒಲವು ಹೊಂದಿರುವ ನಿನ್ನ ತಂದೆಯಾಗಿ, ನೀವು ಕ್ರೀಡೆಗೆ ಅರ್ಹವಾದ ಗೌರವ ಕೊಡುತ್ತೀರಿ ಎಂದು ಭಾವಿಸಿದ್ದೇನೆ. ಕ್ರೀಡೆಯನ್ನು ಪ್ರೀತಿಸಿ ಅದು ನಿಮ್ಮನ್ನು ಮರಳಿ ಪ್ರೀತಿಸುತ್ತದೆ.
-
You have worked very hard to reach here, and I am sure you will continue to do so. This is the start of a beautiful journey. All the best! 👍💙 (2/2)
— Sachin Tendulkar (@sachin_rt) April 16, 2023 " class="align-text-top noRightClick twitterSection" data="
">You have worked very hard to reach here, and I am sure you will continue to do so. This is the start of a beautiful journey. All the best! 👍💙 (2/2)
— Sachin Tendulkar (@sachin_rt) April 16, 2023You have worked very hard to reach here, and I am sure you will continue to do so. This is the start of a beautiful journey. All the best! 👍💙 (2/2)
— Sachin Tendulkar (@sachin_rt) April 16, 2023
ನೀವು ಇಲ್ಲಿಗೆ ತಲುಪಲು ತುಂಬಾ ಕಷ್ಟಪಟ್ಟಿದ್ದೀರಿ ಎಂದು ನನಗೆ ಗೊತ್ತಿದೆ. ಕ್ರಿಕೆಟ್ನಲ್ಲಿ ನೀವು ಮುಂದುವರಿಸುತ್ತೀರಿ ಎಂಬ ಖಾತ್ರಿ ನನಗಿದೆ. ಇದೊಂದು ಸುಂದರ ಪ್ರಯಾಣದ ಆರಂಭ. ಒಳ್ಳೆಯದಾಗಲಿ" ಎಂದು ಹರಸಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ.
23 ವರ್ಷದ ಅರ್ಜುನ್ ತೆಂಡೂಲ್ಕರ್ ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ಅವರು 2021 ರಲ್ಲಿ ತಂಡಕ್ಕೆ ಹರಾಜಿನಲ್ಲಿ ಆಯ್ಕೆಯಾದರು. ಆದರೆ, ಗಾಯದಿಂದಾಗಿ ಆ ಸೀಸನ್ನಿಂದ ಹಿಂದೆ ಸರಿಯಬೇಕಾಯಿತು. 2022 ರ ಹರಾಜಿನಲ್ಲಿ ಮರಳಿ ಮುಂಬೈಗೆ ಆಯ್ಕೆಯಾದರು. ತಂಡ ಕಠಿಣ ಸವಾಲು ಎದುರಿಸಿದ ಕಾರಣ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಡಗೌಟ್ನಲ್ಲಿ ತಂಡ ಮತ್ತು ಮಾರ್ಗದರ್ಶಕರಾದ ಸಚಿನ್ ಜೊತೆಗೆ ಕಾಣಿಸಿಕೊಂಡಿದ್ದರು.
-
Father and Son turning out for the same franchise 10 years on. A historic first in the IPL. Good luck Arjun Tendulkar.
— Irfan Pathan (@IrfanPathan) April 16, 2023 " class="align-text-top noRightClick twitterSection" data="
">Father and Son turning out for the same franchise 10 years on. A historic first in the IPL. Good luck Arjun Tendulkar.
— Irfan Pathan (@IrfanPathan) April 16, 2023Father and Son turning out for the same franchise 10 years on. A historic first in the IPL. Good luck Arjun Tendulkar.
— Irfan Pathan (@IrfanPathan) April 16, 2023
16 ನೇ ಆವೃತ್ತಿಯ ಐಪಿಎಲ್ನಲ್ಲಿ ಮರಿ ತೆಂಡೂಲ್ಕರ್ಗೆ ತಂಡ ಅವಕಾಶ ಮಾಡಿಕೊಟ್ಟಿದೆ. ನಿನ್ನೆಯ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಸಿದ್ದು, ನಾಯಕ ರೋಹಿತ್ ಶರ್ಮಾ ಮೊದಲ ಓವರ್ ಮಾಡಲು ಚೆಂಡು ಕೈಗಿತ್ತರು. ಇನಿಂಗ್ಸ್ನ ಮೊದಲ ಓವರ್ ಎಸೆದ ಅರ್ಜುನ್ ಐದು ರನ್ ನೀಡಿದರು. ಉತ್ತಮ ಸ್ವಿಂಗ್ಗಳನ್ನು ಎಸೆದ ಎಡಗೈ ವೇಗಿ ಒಂದು ಎಲ್ಬಿ ಮನವಿಯನ್ನೂ ಮಾಡಿದರು. 2ನೇ ಓವರ್ನಲ್ಲಿ ವೆಂಕಟೇಶ್ ಅಯ್ಯರ್ ಬೌಂಡರಿ, ಸಿಕ್ಸರ್ ಬಾರಿಸಿದರು. ಇದರಿಂದ 2 ಓವರ್ಗಳಲ್ಲಿ 17 ರನ್ ನೀಡಿದರು.
ಒಂದೇ ತಂಡದಲ್ಲಿ ತಂದೆ - ಮಗ: ಇನ್ನು ಅರ್ಜುನ್ ತೆಂಡೂಲ್ಕರ್ ಮುಂಬೈ ಪರ ಆಡುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದರು. ಈ ಮೊದಲು ಸಚಿನ್ ತೆಂಡೂಲ್ಕರ್ ಮುಂಬೈ ಪರವಾಗಿ ಐಪಿಎಲ್ನಲ್ಲಿ ಆಡಿದ್ದರು. ಇದೀಗ ಪುತ್ರ ಕೂಡ ಇದೇ ತಂಡದಿಂದ ಆಡಿದರು. ಹೀಗಾಗಿ ಒಂದೇ ಫ್ರಾಂಚೈಸಿ ಪರ ಆಡಿದ ತಂದೆ- ಮಗ ಎನಿಸಿಕೊಂಡರು.
ಇನ್ನೂ, ಅರ್ಜುನ್ ಪದಾರ್ಪಣೆಗೆ ಹಾಲಿ, ಮಾಜಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ "ತಂದೆ- ಮಗ ಇಬ್ಬರೂ ಒಂದೇ ಫ್ರಾಂಚೈಸಿ ಪರ ಆಡಿದ್ದು ವಿಶೇಷ. ಇದು ಐಪಿಎಲ್ ಇತಿಹಾಸದಲ್ಲೇ ಮೊದಲನೆಯ ಘಟನೆಯಾಗಿದೆ. ಶುಭವಾಗಲಿ ಅರ್ಜುನ್ ತೆಂಡೂಲ್ಕರ್" ಎಂದು ಹೇಳಿದ್ದಾರೆ.
ಓದಿ: ಸ್ಯಾಮ್ಸನ್ - ಶಿಮ್ರಾನ್ ಅಬ್ಬರದ ಬ್ಯಾಟಿಂಗ್: ಟೈಟಾನ್ಸ್ ವಿರುದ್ಧ 'ರಾಯಲ್' ಆದ ರಾಜಸ್ಥಾನ