ETV Bharat / sports

ಗಿಲ್​ ಪವರ್​ ಪ್ಲೇ ಸೂಕ್ತವಾಗಿ ಬಳಸಿಕೊಂಡು ರನ್​ ಕಲೆಹಾಕುತ್ತಾರೆ: ವಿಜಯ ಶಂಕರ್​​ - ETV Bharath Kannada news

ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಗಿಲ್​ ಶತಕ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ ಹೆಚ್ಚು ರನ್​ ಗಳಿಸಿದವರಾದರು. ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಅವರನ್ನು ಹಿಂದಿಕ್ಕಿದ ಅವರು 851 ರನ್​ನಿಂದ "ಆರೆಂಜ್​ ಕ್ಯಾಪ್"​ ತಮ್ಮದಾಗಿಸಿಕೊಂಡರು.

Shubman Gill's work ethics makes him one of the best cricketers right now, says Vijay Shankar
ಗಿಲ್​ ಪವರ್​ ಪ್ಲೇಯನ್ನು ಸೂಕ್ತವಾಗಿ ಬಳಸಿಕೊಂಡು ರನ್​ ಕಲೆಹಾಕುತ್ತಾರೆ: ವಿಜಯ ಶಂಕರ್​​
author img

By

Published : May 27, 2023, 6:34 PM IST

ಅಹಮದಾಬಾದ್ (ಗುಜರಾತ್​): ಶುಭ್‌ಮನ್ ಗಿಲ್ ಅವರ ಎಥಿಕ್ಸ್​ ಮೇಲೆ ಕೆಲಸ ಮಾಡುತ್ತಾರೆ. ಗಿಲ್​ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಎಂದು ಅವರ ಸಹ ಆಟಗಾರ ಮತ್ತು ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ವಿಜಯ್ ಶಂಕರ್ ಹೇಳಿದ್ದಾರೆ. ಶಮಕರ್​ ಪವರ್‌ಪ್ಲೇಯಲ್ಲಿ ಅಂತರವನ್ನು ಕಂಡುಕೊಳ್ಳುವ ಆರಂಭಿಕರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಭಾರತ ಮತ್ತು ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಐಪಿಎಲ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ ಈ ಋತುವಿನಲ್ಲಿ 851 ರನ್‌ಗಳೊಂದಿಗೆ 'ಆರೆಂಜ್ ಕ್ಯಾಪ್' ಪಡೆದುಕೊಂಡಿದ್ದಾರೆ.

ಗಿಲ್ 60 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 129 ರನ್ ಗಳಿಸಿ ಈ ಐಪಿಎಲ್‌ನ ಅತ್ಯಧಿಕ ಸ್ಕೋರ್ ಗಳಿಸಿದವರಾದರು. ಗಿಲ್​ ಅವರ ಅಬ್ಬರದ ಶತಕದ ಬ್ಯಾಟಿಂಗ್​ ನೆರವಿನಿಂದ ಗುಜರಾತ್​ ಟೈಟಾನ್ಸ್​ ಮಳೆಯಿಂದ ತಡವಾಗಿ ಆಂಭವಾದ ಪಂದ್ಯದಲ್ಲಿ 234 ರನ್​ ಬೃಹತ್​ ಗುರಿಯನ್ನು ಮುಂಬೈ ಇಂಡಿಯನ್ಸ್​ಗೆ ನೀಡಿದರು.

ಈ ಗುರಿಯನ್ನು ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್​ಗೆ ಒಂದೆಡೆ ಇಂಜುರಿ ಕಾಡಿದರೆ, ಮತ್ತೊಂದೆಡೆ ಮೋಹಿತ್​ ಶರ್ಮಾ ಬೌಲಿಂಗ್​ ದಾಳಿ ದೊಡ್ಡ ಹೊಡೆತವನ್ನೇ ಉಂಟುಮಾಡಿತು. ಸೂರ್ಯ ಕುಮಾರ್​ ಯಾದವ್​ ತಿಲಕ್​ ವರ್ಮಾ ಮತ್ತು ಗ್ರೀನ್​ ಬಿಟ್ಟರೆ ಮತ್ತಾವ ಬ್ಯಾಟರ್​ ಎರಡಂಕಿಯ ರನ್​ ಮಾಡಲಿಲ್ಲ. ಮೋಹಿತ್​ ಶರ್ಮಾ 5 ವಿಕೆಟ್​ ಪಡೆದ ಕಾರಣ ಎಂಐ 18.2 ಓವರ್​ಗೆ 171 ಕ್ಕೆ ಸರ್ವ ಪತನ ಕಂಡಿತು. ಇದರಿಂದ ನಾಳೆ ನಡೆಯಲಿರುವ ಫೈನಲ್​ಗೆ ಗುಜರಾತ್​ ಪ್ರವೇಶ ಪಡೆದುಕೊಂಡಿತು.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ ಶಂಕರ್​,"ಗಿಲ್​ ಅದ್ಭುತವಾದ ಬ್ಯಾಟಿಂಗ್​ ಕೌಶಲ್ಯವನ್ನು ಹೊಂದಿದ್ದಾರೆ. ಅಕ್ಕಾಗಿಯೇ ಅವರು ಇದೀಗ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಗಿಲ್​ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ರೀತಿಯಲ್ಲೇ ಆಡಿ ಸಿಕ್ಸರ್​ಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಅಭ್ಯಾಸ ನಡೆಸುತ್ತಾರೆ. ಇದು ಅವರ ಯಶಸ್ಸಿನ ಗುಟ್ಟು, ಅಲ್ಲದೇ ಅವರು ಸಿಕ್ಸ್​​ಗಾಗಿ ಕನೆಕ್ಟ್​ ಮಾಡಿದಾಗ ಅದನ್ನು ನೋಡಲು ಸಂತೋಷವಾಗುತ್ತದೆ" ಎಂದಿದ್ದಾರೆ.

ಈ ಆವೃತ್ತಿಯಲ್ಲಿ ಗಿಲ್​ 33 ಸಿಕ್ಸ್​ಗಳಿಸಿದ್ದು, ಅತಿ ಹೆಚ್ಚು ಸಿಕ್ಸ್​ ಗಳಿಸಿದವರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಒಂದೇ ಆವೃತ್ತಿಯಲ್ಲಿ 3ನೇ ಶತಕ ಗಳಿಸಿದರು. ವಿರಾಟ್​ ಮತ್ತು ಬಟ್ಲರ್​ ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿ ಮೊದಲ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಶಂಕರ್​ ಗಿಲ್​ ಅವರ ಪವರ್​ ಪ್ಲೇಯನ್ನು ಬಳಸಿಕೊಳ್ಳುವ ವಿಧಾನವನ್ನು ಶ್ಲಾಘಿಸಿದ್ದಾರೆ. ಗಿಲ್​ ಆಟಗಾರರ ನಡುವಿನ ಅಂತರ ಗಮನಿಸಿ ಬೌಂಡರಿಗಳನ್ನು ಪಡೆಯುವುದು ಗೊತ್ತು ಹಾಗೇ ಚೆಂಡನ್ನು ತೇಲಿಸಿ ಸಿಕ್ಸ್​ಗೆ ಅಟ್ಟುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಪವರ್​ ಪ್ಲೇಯಲ್ಲಿ 30 ಯಾರ್ಡ್​ ಒಳಗೆ ಆಟಗಾರು ಇರುವುದನ್ನು ಸೂಕ್ತವಾಗಿ ಬಳಸಿಕೊಳ್ಳುವ ಅವರು ಹೆಚ್ಚು ರನ್​ ಕದಿಯುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: IPL 2023 Qualifier 2: ಮೂರನೇ ಶತಕ ಗಳಿಸಿದ ಶುಭಮನ್​ ಗಿಲ್​: ಮುಂಬೈಗೆ 234 ರನ್​​ಗಳ ಬೃಹತ್​ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.