ನವದೆಹಲಿ: ಸಚಿನ್ ತೆಂಡೂಲ್ಕರ್ ತಮ್ಮ 50ನೇ ಹುಟ್ಟುಹಬ್ಬಕ್ಕೂ ಮುನ್ನ ವಿಶೇಷ ಹಾರೈಕೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಸಮಾನ ಅವಕಾಶಗಳನ್ನು ಪಡೆಯಬೇಕು ಎಂದು ಸಚಿನ್ ಬಯಸುತ್ತಾರೆ. ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಮಾಡಲು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿಯಮಗಳನ್ನು ಬದಲಾಯಿಸುವ ಬಗ್ಗೆಯೂ ಸಚಿನ್ ಮಾತನಾಡಿದ್ದಾರೆ. ನಿಯಮ ಬದಲಾವಣೆ ಆಟವನ್ನು ಇನ್ನಷ್ಟು ರೋಮಾಂಚನಗೊಳಿಸಬಹುದು. ಕ್ರಿಕೆಟ್ ಬ್ಯಾಟರ್ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಬೌಲರ್‌ಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
-
This is wonderful par mujhe kab khila rahe ho?🎂 https://t.co/Lj0EdysWiX
— Sachin Tendulkar (@sachin_rt) April 21, 2023 " class="align-text-top noRightClick twitterSection" data="
">This is wonderful par mujhe kab khila rahe ho?🎂 https://t.co/Lj0EdysWiX
— Sachin Tendulkar (@sachin_rt) April 21, 2023This is wonderful par mujhe kab khila rahe ho?🎂 https://t.co/Lj0EdysWiX
— Sachin Tendulkar (@sachin_rt) April 21, 2023
ತನ್ನ 50 ನೇ ಹುಟ್ಟುಹಬ್ಬದ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಲಿಟಲ್ ಮಾಸ್ಟರ್, ಎರಡು ಹೊಸ ಚೆಂಡುಗಳ ಬಳಕೆಯು ಕ್ರಿಕೆಟ್ ಆಟದಲ್ಲಿ ರಿವರ್ಸ್ ಸ್ವಿಂಗ್ ಇಲ್ಲದಂತೆ ಮಾಡಿದೆ. ಚೆಂಡುಗಳು ಮೃದುವಾಗುವುದನ್ನು ಅಥವಾ ಬಣ್ಣ ಕಳೆದುಕೊಳ್ಳುವುದನ್ನು ತಡೆಯಲಾಗುತ್ತಿದೆ. ಪವರ್ ಪ್ಲೇಯಲ್ಲಿ ಬ್ಯಾಟರ್ ಪರ ಫೀಲ್ಡಿಂಗ್ ಸೆಟ್ ಮಾಡಲಾಗುತ್ತದೆ. ಅದೇ ರೀತಿ ಬೌಲರ್ ಸಹಕಾರಿ ಕ್ಷೇತ್ರ ರಕ್ಷಣೆ ನಿಯಮ ಬರಬೇಕು. ಐವರು ಫೀಲ್ಡರ್‌ಗಳು 30 ಯಾರ್ಡ್ ವೃತ್ತದಲ್ಲಿ ಉಳಿದುಕೊಂಡರೂ, ಸ್ಪಿನ್ ಬೌಲರ್‌ಗಳು ರಿವರ್ಸ್ ಸ್ವಿಂಗ್ ಬೌಲಿಂಗ್ ಮಾಡಲು ಒತ್ತಾಯಿಸುತ್ತಾರೆ ಎಂದಿದ್ದಾರೆ.
-
#WATCH | Mumbai: Sachin Tendulkar cuts a cake ahead of his 50th birthday, at an event on the 25 years of his historic 'Desert Storm' innings in Sharjah against Australia.
— ANI (@ANI) April 22, 2023 " class="align-text-top noRightClick twitterSection" data="
He will celebrate his 50th birthday on 24th April. pic.twitter.com/gh6BJ1qxXd
">#WATCH | Mumbai: Sachin Tendulkar cuts a cake ahead of his 50th birthday, at an event on the 25 years of his historic 'Desert Storm' innings in Sharjah against Australia.
— ANI (@ANI) April 22, 2023
He will celebrate his 50th birthday on 24th April. pic.twitter.com/gh6BJ1qxXd#WATCH | Mumbai: Sachin Tendulkar cuts a cake ahead of his 50th birthday, at an event on the 25 years of his historic 'Desert Storm' innings in Sharjah against Australia.
— ANI (@ANI) April 22, 2023
He will celebrate his 50th birthday on 24th April. pic.twitter.com/gh6BJ1qxXd
ಕ್ರೀಡಾ ವೆಬ್‌ಸೈಟ್‌ನೊಂದಿಗಿನ ಸಂಭಾಷಣೆ ಸಂದರ್ಭದಲ್ಲಿ ಸಚಿನ್, ಏಕದಿನ ಪಂದ್ಯಗಳಲ್ಲಿ ಟಾಸ್‌ನ ಅನುಕೂಲ ಮತ್ತು ಇಬ್ಬನಿ ಅಂಶವು ಆಟದ ಮೇಲೆ ಪರಿಣಾಮ ಬೀರುತ್ತದೆ. ಟಾಸ್ನಿಂದ ಆಟದ ಸೋಲು ಗೆಲುವು ನಿರ್ಣಯ ಮಾಡುವಂತಾಗುವುದು ಸರಿಯಲ್ಲ. ಈ ಬಗ್ಗೆಯೂ ಕೆಲ ನಿಯಮಗಳು ಬದಲಾವಣೆ ಆಗುವ ಅಗತ್ಯವಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಇದಕ್ಕಾಗಿ, ತೆಂಡೂಲ್ಕರ್ ಏಕದಿನ ಪಂದ್ಯಗಳನ್ನು 25-25 ಓವರ್‌ಗಳಿಗೆ ಮಾಡಲು ಪ್ರಸ್ತಾಪಿಸಿದ್ದಾರೆ. ಟೆಸ್ಟ್ ರೀತಿಯ ನಾಲ್ಕು ಇನ್ನಿಂಗ್ಸ್ಗಳನ್ನು ಏಕದಿನದಲ್ಲಿ ತರಬೇಕು ಎಂದು ಹೇಳಿದ್ದಾರೆ. ಅಂದರೆ ಟಾಸ್ ನಂತರ 25 ಓವರ್ ಆಡಿ ಬ್ಯಾಟಿಂಗ್ ಮಾಡಿದ ತಂಡ ಮುಂದಿನ 25 ಓವರ್ ಬೌಲಿಂಗ್ ಮಾಡಬೇಕು. ನಂತರ 25 ಓವರ್ ಮುಂದುವರಿಸಬೇಕು. ಹೀಗೆ ನಾಲ್ಕು ಇನ್ನಿಂಗ್ಸ್ ಮಾದರಿ ತರಬೇಕು ಆಗ ಎರಡೂ ತಂಡ ಶುಷ್ಕ ಮತ್ತು ಆರ್ದ್ರ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶವನ್ನು ಪಡೆಯುತ್ತದೆ. ಇದು ನಿಜವಾದ ಪರೀಕ್ಷೆಯಾಗಿರಲಿದೆ. ಇದರಿಂದ ಟಾಸ್ ಗೆದ್ದ ತಂಡದ ಅನುಕೂಲವೂ ಕಡಿಮೆಯಾಗುತ್ತದೆ ಎಂದಿದ್ದಾರೆ.
ಇಂದಿನ ಪಂದ್ಯದಲ್ಲಿ ಸಚಿನ್ ಬರ್ತ್-ಡೇ ಸ್ಪೆಷಲ್: ಸಚಿನ್ ತೆಂಡೂಲ್ಕರ್ ಹುಟ್ಟು ಹಬ್ಬಕ್ಕೆ ಎರಡು ದಿನ ಬಾಕಿ ಇರುವಂತೆ ಸಂಭ್ರಮಾಚರಣೆ ಕಳೆಕಟ್ಟುವಂತೆ ಮಾಡಿದೆ. ಕ್ರಿಕೆಟ್ ದೇವರು 50ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಲುವಾಗಿ ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಏಪ್ರಿಲ್ 22 ರಂದು ವಾಂಖೆಡೆಯಲ್ಲಿ ಉಪಸ್ಥಿತರಿರುವ 33000 ಅಭಿಮಾನಿಗಳಿಗೆ ತೆಂಡೂಲ್ಕರ್ ಮುಖವಾಡಗಳನ್ನು ನೀಡಲಾಗುತ್ತದೆ. " 33000 ಪ್ರೇಕ್ಷಕರು, 33000 ತೆಂಡೂಲ್ಕರ್ ಮುಖದ ಗುರುತುಗಳು. ಮೈದಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹೆಮ್ಮೆಯಿಂದ ಸಚಿನ್ ಅವರ ಮುಖವಾಡ ಧರಿಸಲಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: LSG vs GT: ಲಕ್ನೋಗೆ 136 ರನ್ನ ಸಾಧಾರಣ ಗುರಿ ನೀಡಿದ ಗುಜರಾತ್