ETV Bharat / sports

'ಕ್ರಿಕೆಟ್​ ಆಡ್ಬೇಡ ಓದಿಗೆ ಗಮನ ಕೊಡು ಎಂದಿದ್ದೆ, ಮಾತು ಕೇಳಿರಲಿಲ್ಲ': ಸಿಕ್ಸರ್ ಸಾಧಕನ ತಂದೆಯ ಮಾತು - ಮಗನ ಆಟದ ಬಗ್ಗೆ ರಿಂಕು ಸಿಂಗ್​ ತಂದೆ ಮಾತನಾಡಿದ್ದು

ಮಗನ ಆಟದ ಬಗ್ಗೆ ರಿಂಕು ಸಿಂಗ್​ ತಂದೆ ಮಾತನಾಡಿ, ಆತನಿಗೆ ಕ್ರಿಕೆಟ್​ ಬಿಟ್ಟು ಓದಲು ಹೇಳಿದ್ದೆ ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

rinku singh  father on his son cricket journey
ಅವನಿಗೆ ಕ್ರಿಕೆಟ್​ ಆಡಬೇಡ ಓದಿನಲ್ಲಿ ಗಮನ ಕೊಡು ಎಂದಿದ್ದೆ, ಮಾತು ಕೇಳಿರಲಿಲ್ಲ: ರಿಂಕು ತಂದೆ ಖಂಚಂದ್
author img

By

Published : Apr 10, 2023, 10:32 PM IST

Updated : Apr 10, 2023, 10:59 PM IST

ಅಲಿಗಢ (ಉತ್ತರ ಪ್ರದೇಶ): ಕೆಕೆಆರ್​ ನಿನ್ನೆ ಗುಜರಾತ್​ ಜೈಂಟ್ಸ್​ ವಿರುದ್ಧ ಕೊನೆಯ ಓವರ್​ನಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ಮುಖ್ಯ ರುವಾರಿ ರಿಂಕು ಸಿಂಗ್​​. ಪಂದ್ಯದ ಕೊನೆಯ ಓವರ್​ನಲ್ಲಿ ಯಶ್​ ದಯಾಳ್​ ಅವರ ಎಸೆತಗಳಿಗೆ ಚಚ್ಚಿದ ಐದು ಸಿಕ್ಸ್​ನ ಪರಿಣಾಮ ಪಂದ್ಯ ಕೆಕೆಆರ್​ ವಶವಾಗಿತ್ತು. ಟಿವಿ ಪರದೆಯಲ್ಲಿ ಮಗನ ಆಟ ಕಂಡ ರಿಂಕು ಸಿಂಗ್​ ತಂದೆ ಖಂಚಂದ್, "ಮಗ ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸಲಿ" ಎಂದು ಆಶಿಸಿದ್ದಾರೆ.

ರಿಂಕು ಸಿಂಗ್​ ನಿನ್ನೆ ರಾತ್ರಿ ಕ್ರಿಕೆಟ್​ ಜಗತ್ತಿನಲ್ಲಿ ತಮ್ಮ ಹೆಸರನ್ನು ಗುರುತು ಮಾಡಿದ್ದರು. ಆದರೆ ಇವರ ಹಿನ್ನೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಸಿಂಗ್​ ಉತ್ತರ ಪ್ರದೇಶದ ಅಲಿಗಢದಲ್ಲಿ 1997ರಲ್ಲಿ ಜನಿಸಿದರು. ಇವರ ತಂದೆ ಮನೆಮನೆಗೆ ತೆರಳಿ ಗ್ಯಾಸ್‌ ಸಿಲಿಂಡರ್‌​​​ಗಳನ್ನು ಹಂಚುತ್ತಿದ್ದರು. ಅಣ್ಣ ಆಟೋ ಡ್ರೈವರ್​. ಕ್ರಿಕೆಟ್​ನಲ್ಲಿ ಮಗನಿಗೆ ಆಸೆ ಇತ್ತಾದರೂ ತಂದೆ ವಿರೋಧ ವ್ಯಕ್ತಪಡಿಸಿದ್ದರಂತೆ. ನಂತರ ಆತನ ಆಟದ ಬಗ್ಗೆ ಜನರು ಮಾತನಾಡುವುದನ್ನು ಕೇಳಿ ಕ್ರಿಕೆಟ್​ಗೆ ಒಪ್ಪಿಗೆ ಕೊಟ್ಟಿದ್ದರಂತೆ.

ಈ ಬಗ್ಗೆ ಖಂಚಂದ್ ಮಾತನಾಡಿದ್ದು,"ನಾನು ಕ್ರಿಕೆಟ್​​ಗೆಂದು ಅವನಿಗೆ ಯಾವುದೇ ಸಹಕಾರ ನೀಡಲಿಲ್ಲ. ಕ್ರಿಕೆಟ್‌ಗೆ​ ಬೇಕಾದ ಎಲ್ಲವನ್ನೂ ಅವನೇ ಮಾಡಿಕೊಂಡ. ಬ್ಯಾಟ್ ಅಥವಾ ಬೇರೇನನ್ನೂ ಖರೀದಿಸಲಿಲ್ಲ. ಕ್ರಿಕೆಟ್​ ಆಡುತ್ತಿರುವುದರ ಬಗ್ಗೆ ನನಗೆ ತಿಳಿದಾಗ ಅವನಿಗೆ ಓದಿನಲ್ಲಿ ಗಮನಕೊಡುವಂತೆ ಹೇಳಿದ್ದೆ. ಆದರೆ ನನ್ನ ಸಲಹೆಯನ್ನು ಆತ ಗಂಭೀರವಾಗಿ ಪರಿಗಣಿಸಲಿಲ್ಲ. ರಿಂಕು ತುಂಬಾ ಚೆನ್ನಾಗಿ ಆಡುತ್ತಾನೆ ಎಂದು ಎಲ್ಲರೂ ಹೇಳುತ್ತಿದ್ದರು. ಇದನ್ನು ಕೇಳಿ ಅವನಿಗೆ ಕ್ರಿಕೆಟ್​ ಆಡುವ ಇಚ್ಛೆ ಇದ್ದರೆ ಅದರಲ್ಲೇ ಮುಂದುವರೆಯುವಂತೆ ಸಲಹೆ ನೀಡಿದ್ದೆ" ಹೇಳಿಕೊಂಡಿದ್ದಾರೆ. "ನಿನ್ನೆ ಪಂದ್ಯವನ್ನು ಅವನು ಗೆಲ್ಲಿಸಿದ ರೀತಿಗೆ ನನಗೆ ಸಂತೋಷ ತಂದಿದೆ. ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡಬೇಕೆಂದು ನಾನು ಬಯಸುತ್ತೇನೆ" ಎಂದು ಖಂಚಂದ್ ತಮ್ಮ ಮನದಾಳ ತಿಳಿಸಿದರು.

ಯಶ್​ ದಯಾಳ್​ ಮೆಚ್ಚುಗೆ: ಪಂದ್ಯದ ಗೆಲುವಿನ ನಂತರ ರಿಂಕು ಸಿಂಗ್​ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಸ್ಮರಣೀಯ ಗೆಲುವು ಎಂದು ಬರೆದುಕೊಂಡಿದ್ದರು. ಇದಕ್ಕೆ ಯಶ್​ ದಯಾಳ್​ ಕಾಮೆಂಟ್​ ಮಾಡಿದ್ದು, ಬೆಂಕಿ ಮತ್ತು ಎರಡು ಕೆಂಪು ಹೃದಯದ ಜೊತೆ, "ಬಿಗ್​ ಪ್ಲೇಯರ್​ ಭಾಯಿ" ಎಂದು ಬರೆದಿದ್ದಾರೆ. ಯಶ್ ಅವರ ಮುಂದಿನ ಪಂದ್ಯಕ್ಕೆ ಶುಭ ಹಾರೈಸುತ್ತಾ, ಕೆಕೆಆರ್ ಬರೆದುಕೊಂಡಿದೆ. "ಕ್ರಿಕೆಟ್‌ನ ಅತ್ಯುತ್ತಮ ಆಟದಲ್ಲಿ ಕಠಿಣ ದಿನ ಸಂಭವಿಸುತ್ತದೆ. ನೀವು ಚಾಂಪಿಯನ್ ಆಗಿದ್ದೀರಿ. ನಿಮ್ಮ ಆಟದ ಅದ್ಭುತ ಪ್ರದರ್ಶನ ಮುಂದೆ ಬರಲಿದೆ" ಎಂದು ಕೆಕೆಆರ್​ ತನ್ನ ಇನ್​ಸ್ಟಾಗ್ರಾಂನಲ್ಲಿ ಬರೆದಿದೆ. ಈ ಮೂಲಕ ಇಬ್ಬರು ಕ್ರೀಡಾ ಸ್ಫೂರ್ತಿ ತೋರಿದ್ದಾರೆ.

ಇದನ್ನೂ ಓದಿ: IPL: 5 ಎಸೆತಗಳಿಗೆ 5 ಸಿಕ್ಸರ್‌ ಬಾರಿಸಿದವರು; ಒಂದೇ ಓವರ್‌ನಲ್ಲಿ ಹೆಚ್ಚು ರನ್‌ ನೀಡಿದ ಬೌಲರ್‌ಗಳಿವರು..

Last Updated : Apr 10, 2023, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.