ETV Bharat / sports

ಕ್ರೀಡಾಭಿಮಾನಿ ಬೋಳು ತಲೆಗೆ ಅಪ್ಪಳಿಸಿದ RCB ಬ್ಯಾಟರ್ ಬಾರಿಸಿದ ಸಿಕ್ಸರ್​​​..! - ರಜತ್ ಪಟಿದಾರ್ ಸಿಕ್ಸರ್

ರಜತ್ ಪಾಟಿದಾರ್ ಬಾರಿಸಿದ ಸಿಕ್ಸರ್​​ವೊಂದು ನೇರವಾಗಿ ಕ್ರೀಡಾಭಿಮಾನಿ ತಲೆಗೆ ಅಪ್ಪಳಿಸಿದ್ದು, ಅದರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಲು ಶುರುವಾಗಿದೆ.

Rajat patidar six lands on old fan head
Rajat patidar six lands on old fan head
author img

By

Published : May 14, 2022, 5:24 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ನಿನ್ನೆಯ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಹಾಗೂ ಪಂಜಾಬ್ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟರ್​ ರಜತ್ ಪಾಟಿದಾರ್​ ಬಾರಿಸಿರುವ ಸಿಕ್ಸರ್​​ವೊಂದು ಸ್ಟ್ಯಾಂಡ್​​ನಲ್ಲಿ ಕುಳಿತುಕೊಂಡಿದ್ದ ವೃದ್ಧ ಕ್ರೀಡಾಭಿಮಾನಿ ತಲೆಗೆ ಅಪ್ಪಳಿಸಿದ್ದು, ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗ್ತಿದೆ.

ಬ್ರೆಬೋರ್ನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್‌ ರಜತ್ ಪಾಟೀದಾರ್ ಬಾರಿಸಿದ ಸಿಕ್ಸರ್‌, ಮೈದಾನದಲ್ಲಿದ್ದ ವೃದ್ದ ಅಭಿಮಾನಿ ತಲೆಗೆ ಅಪ್ಪಳಿಸಿದ್ದು ವಿಡಿಯೋ ವೈರಲ್‌ ಆಗಿದೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಪಂಜಾಬ್ ತಂಡ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 209ರನ್​ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ ಅರ್​ಸಿಬಿ ಕೇವಲ 155ರನ್​​ಗಳಿಕೆ ಮಾಡಲು ಶಕ್ತವಾಗಿದ್ದು, 54ರನ್​​ಗಳ ಅಂತರದಿಂದ ಸೋಲು ಕಂಡಿತು.

ಇದನ್ನೂ ಓದಿ: IPLಗೆ ಗುಡ್​ಬೈ ಹೇಳಿ, ಕ್ಷಣಾರ್ಧದಲ್ಲೇ ಮನಸ್ಸು ಬದಲಾಯಿಸಿದ ರಾಯುಡು!

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಕಣಕ್ಕಿಳಿದ ರಜತ್ ಪಾಟಿದಾರ್​​ ಹರ್​ಪ್ರೀತ್​ ಬ್ರಾರ್​ ಎಸೆದ ಓವರ್​​ನಲ್ಲಿ ದಾಖಲೆ 102 ಮೀಟರ್ ಉದ್ದದ ಸಿಕ್ಸರ್​ ಬಾರಿಸಿದರು. ಅದು ನೇರವಾಗಿ ಸ್ಟ್ಯಾಂಡ್​ನಲ್ಲಿ ಕುಳಿತುಕೊಂಡಿದ್ದ ವೃದ್ಧ ಅಭಿಮಾನಿಯ ತಲೆಗೆ ಬಿದ್ದಿದೆ. ರಭಸವಾಗಿ ಚೆಂಡು ಬಿದ್ದಿರುವ ಕಾರಣ ಆತ ನೋವಿನಿಂದ ಕೂಗಿಕೊಂಡಿದ್ದಾನೆ.

ಈ ಹಿಂದಿನ ಅನೇಕ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದು, ಕ್ರಿಸ್ ಗೇಲ್ ಬಾರಿಸಿದ್ದ ಚೆಂಡವೊಂದು ನೇರವಾಗಿ ಕ್ರೀಡಾಭಿಮಾನಿಗೆ ಬಿದ್ದು, ಗಾಯಗೊಂಡಿದ್ದನು. ಪಂದ್ಯ ಮುಕ್ತಾಯದ ಬಳಿಕ ಗೇಲ್​ ನೇರವಾಗಿ ಆತನ ಬಳಿ ಹೋಗಿ, ಆರೋಗ್ಯ ವಿಚಾರಣೆ ಮಾಡಿರುವ ಘಟನೆ ಸಹ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.