ETV Bharat / sports

ಬೆಂಗಳೂರಿಗನಾಗಿ ಆರ್​ಸಿಬಿಗೆ ಆಡುವುದು ನನ್ನ ಕನಸು, ಸಿರಾಜ್​ ಸಲಹೆ ನೆರವಾಯ್ತು: ವೈಶಾಕ್ - ETV Bharath Kannada news

ರಜತ್​ ಪಾಟೀದಾರ್​ ಬದಲಾಗಿ ಆರ್​ಸಿಬಿ ಸೇರಿದ ವೈಶಾಕ್ ವಿಜಯ್​ ಕುಮಾರ್,​ ಡೆಲ್ಲಿ ವಿರುದ್ಧದ ಚೊಚ್ಚಲ ಪಂದ್ಯದ ಅನುಭವ ಹಂಚಿಕೊಂಡಿದ್ದಾರೆ.

ಬೆಂಗಳೂರಿಗನಾಗಿ ಆರ್​ಸಿಬಿಗೆ ಆಡುವುದು ನನ್ನ ಕನಸಾಗಿತ್ತು, ಸಿರಾಜ್​ ಸಲಹೆ ಪಂದ್ಯದಲ್ಲಿ ನೆರವಾಯಿತು: ವೈಶಾಕ್
RCB Bowler Vijaykumar Vaishak Inspired by Mohammad Siraj IPL 2023 24th match RCB vs CSK
author img

By

Published : Apr 17, 2023, 5:03 PM IST

ಬೆಂಗಳೂರು: ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಆರ್​ಸಿಬಿ ಪರ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 40,000 ಅಭಿಮಾನಿಗಳ ಮುಂದೆ ಬೌಲಿಂಗ್ ಮಾಡುವಾಗ ಮೊಹಮ್ಮದ್ ಸಿರಾಜ್ ನೀಡಿದ ಸಲಹೆ ಬಗ್ಗೆ ವೈಶಾಕ್​ ಹೇಳಿಕೊಂಡರು.

"ಮೊಹಮ್ಮದ್ ಸಿರಾಜ್ ಅವರೊಂದಿಗೆ ಮಾತನಾಡಿದ್ದು ಸಂತಸ ನೀಡಿತು. ಅವರು ಅದ್ಭುತ ಬೌಲರ್. ಸಾಕಷ್ಟು ಸಮಯದಿಂದ ಆರ್​ಸಿಬಿಗಾಗಿ ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಸಿರಾಜ್ ನನಗೆ ಸಲಹೆ ನೀಡಿದರು. ನರ್ವಸ್​ ಆದರೆ ಅದರ ಬಗ್ಗೆ ಚಿಂತಿಸಬೇಡ, ನಿನ್ನನ್ನು ನೀನು ನಂಬು. ನೀನಿಷ್ಟು ದಿನ ಏನು ಮಾಡಿದ್ದೀಯೋ ಅದನ್ನೇ ಮಾಡು, ನಿನ್ನ ಬೌಲಿಂಗ್ ಅ​ನ್ನು ನೀನೇ ಮೆಚ್ಚುವಂತೆ ಮಾಡು" ಎಂದು ಸಲಹೆ ನೀಡಿದ್ದಾಗಿ ಹೇಳಿದ್ದಾರೆ.

"ಪಂದ್ಯದಲ್ಲಿ ವೈಶಾಕ್ ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ. ನಾವು ಪಂದ್ಯ ಮತ್ತು ನಿರ್ದಿಷ್ಟವಾಗಿ ಆತನ ಬೌಲಿಂಗ್ ಅನ್ನು ಆನಂದಿಸಿದೆವು. ಏಕೆಂದರೆ ಆತ ಉತ್ತಮ ಲೈನ್ ಮತ್ತು ಲೆಂತ್​ನೊಂದಿಗೆ ಬೌಲಿಂಗ್ ಮಾಡಿದ್ದಾನೆ. ಅವನ ಕನಸುಗಳು ನನಸಾದ ದಿನ" ಎಂದು ವೈಶಾಕ್ ಪೋಷಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದೇಶೀಯ ಕ್ರಿಕೆಟ್‌ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಳ: ರಣಜಿ ವಿಜೇತರಿಗೆ ಸಿಗಲಿದೆ ₹5 ಕೋಟಿ

"ಬೆಂಗಳೂರಿನ ಹುಡುಗನಾಗಿ, ಆರ್​ಸಿಬಿಗಾಗಿ ಆಡುವುದು ಒಂದು ಕನಸು ಮತ್ತು ಅದರ ಭಾಗವಾಗಲು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ. ಮೊದಲ ಎರಡು ಎಸೆತಗಳಿಗೆ ಹೆದರುತ್ತಿದ್ದೆ. ಆದರೆ ಕೆಲವು ಓವರ್‌ಗಳ ನಂತರ, ನಾನು ಅರ್ಹನೆಂದು ಭಾವಿಸಿದೆ. ಈ ಸಮಯದಲ್ಲಿ ನಾನು ಪ್ರಪಂಚದಲ್ಲೇ ಅಗ್ರಸ್ಥಾನದಲ್ಲಿದ್ದೇನೆ ಎಂದು ನನಗನಿಸಿತು" ಎಂದು ವೈಶಾಕ್ ಖುಷಿ ಹಂಚಿಕೊಂಡಿದ್ದಾರೆ.

ವೈಶಾಕ್ ವಿಜಯ್ ಕುಮಾರ್ ಕ್ರಿಕೆಟ್ ಜೀವನ: 26 ವರ್ಷದ ವೈಶಾಕ್ ವಿಜಯ್ ಕುಮಾರ್ ಇದುವರೆಗೆ 31 ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 10 ಪಂದ್ಯಗಳಲ್ಲಿ 38 ವಿಕೆಟ್‌ಗಳೊಂದಿಗೆ ಗರಿಷ್ಠ ಸಂಖ್ಯೆಯ ವಿಕೆಟ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. 14 ಟಿ20 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನ.

ಇದನ್ನೂ ಓದಿ: ಐಪಿಎಲ್​ಗೆ ಕಾಲಿಟ್ಟ ಪುತ್ರನಿಗೆ ಸಚಿನ್​ ಭಾವನಾತ್ಮಕ ಸಂದೇಶ: ಕ್ರಿಕೆಟಿಗರಿಂದ ಮರಿ ತೆಂಡೂಲ್ಕರ್​ಗೆ ಆಲ್​ ದಿ ಬೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.