ETV Bharat / sports

RR vs CSK: ಮೊಯಿನ್ ಅಲಿ ಅಬ್ಬರ... ರಾಜಸ್ಥಾನ ಗೆಲುವಿಗೆ 151ರನ್ ಟಾರ್ಗೆಟ್ ನೀಡಿದ ಸಿಎಸ್​ಕೆ - ಐಪಿಎಲ್​ 2022

ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಮೊಯನ್ ಅಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 151ರನ್​ ಟಾರ್ಗೆಟ್ ನೀಡಿದೆ.

Rajasthan Royals vs Chennai Super Kings
Rajasthan Royals vs Chennai Super Kings
author img

By

Published : May 20, 2022, 7:27 PM IST

Updated : May 20, 2022, 9:20 PM IST

ಮುಂಬೈ: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಸಿಎಸ್​ಕೆ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಋತುರಾಜ್ ಗಾಯಕ್ವಾಡ(2) ಔಟಾದರು. ಈ ವೇಳೆ ಮೈದಾನಕ್ಕೆ ಬಂದ ಮೊಯಿನ್ ಅಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಾವು ಎದುರಿಸಿದ ಕೇವಲ 19 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು.ಇದರ ಬೆನ್ನಲ್ಲೇ ಕಾನ್ವೆ(16) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಬಂದ ಜಗದೀಶನ್​​(1), ರಾಯುಡು(3) ವಿಕೆಟ್ ಕಳೆದದುಕೊಂಡರು. ಇದಾದ ಬಳಿಕ ಒಂದಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(26) ಜವಾಬ್ದಾರಿಯುತ ಬ್ಯಾಟಿಂಗ್​ ಪ್ರದರ್ಶನ ನೀಡಿ, ಮೊಯಿನ್ ಅಲಿಗೆ ಸಾಥ್ ನೀಡಿದರು. ಆದರೆ, 19ನೇ ಓವರ್​​ನಲ್ಲಿ ಚಹಲ್​ ಎಸೆದ ಓವರ್​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು.

ಅಬ್ಬರಿಸಿದ ಮೊಯಿನ್ ಅಲಿ: ಸಿಎಸ್​ಕೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಏಕಾಂಗಿಯಾಗಿ ಅಬ್ಬರಿಸಿದ ಮೊಯಿನ್ ಅಲಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ವಿಯಾದರು. ತಾವು ಎದುರಿಸಿದ 57 ಎಸೆತಗಳಲ್ಲಿ 3 ಸಿಕ್ಸರ್, 13 ಬೌಂಡರಿ ಸಮೇತ 93ರನ್​, ಕೊನೆ ಓವರ್​​ನಲ್ಲಿ ಮ್ಯಾಕೆಗೆ ಬಲಿಯಾದರು. ಈ ಮೂಲಕ ತಂಡ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 150ರನ್​​ಗಳಿಕೆ ಮಾಡಿತು.

ಆರಂಭದಲ್ಲಿ ರಾಜಸ್ಥಾನ ರಾಯಲ್ಸ್​ ಹೆಚ್ಚಿನ ರನ್​ ಬಿಟ್ಟುಕೊಟ್ಟರೂ, ತದನಂತರ ಅದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. ತಂಡದ ಪರ ಮ್ಯಾಕೆ, ಚಹಲ್ ತಲಾ 2 ವಿಕೆಟ್ ಪಡೆದರೆ, ಬೌಲ್ಟ್​ ಹಾಗೂ ಅಶ್ವಿನ್ 1 ವಿಕೆಟ್ ಪಡೆದುಕೊಂಡರು.

ಇಂಡಿಯನ್​ ಪ್ರೀಮಿಯರ್ ಲೀಗ್​​ನ 68ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯಾಗಿವೆ. ಲೀಗ್​​ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯವಾಗಿದ್ದು, ಟಾಸ್​ ಗೆದ್ದಿರುವ ಧೋನಿ ಬಳಗ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ.

ಪ್ಲೇ-ಆಫ್​ ರೇಸ್​​ನಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈಗೆ ಈ ಪಂದ್ಯ ಪ್ರತಿಷ್ಠೆಯಿಂದ ಕೂಡಿದ್ದು, ಮತ್ತೊಂದೆಡೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಕ್ವಾಲಿಫೈಯರ್​​ 1 ಖಚಿತಪಡಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್​ ಮುಂದಾಗಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವು ದಾಖಲು ಮಾಡಿದ್ರೆ, ಫೈನಲ್​ಗೆ ಪ್ರವೇಶ ಪಡೆದುಕೊಳ್ಳಲು ಎರಡು ಅವಕಾಶ ಸಿಗಲಿವೆ.

ಉಭಯ ತಂಡಗಳಲ್ಲಿ ತಲಾ ಒಂದು ಬದಲಾವಣೆ ಮಾಡಲಾಗಿದ್ದು, ರಾಜಸ್ಥಾನ ತಂಡದಲ್ಲಿ ನೇಶಮ್​ ಸ್ಥಾನಕ್ಕೆ ಹೆಟ್ಮಾಯರ್ ಕಮ್​​ಬ್ಯಾಕ್ ಮಾಡಿದ್ದು, ಚೆನ್ನೈ ತಂಡ ಶಿವಂ ಸ್ಥಾನಕ್ಕೆ ರಾಯುಡುಗೆ ಮಣೆ ಹಾಕಿದೆ. ಉಭಯ ತಂಡಗಳು ಐಪಿಎಲ್​​ನಲ್ಲಿ 25 ಸಲ ಮುಖಾಮುಖಿಯಾಗಿದ್ದು, 15 ಪಂದ್ಯಗಳಲ್ಲಿ ಸಿಎಸ್​ಕೆ ಗೆಲುವು ದಾಖಲು ಮಾಡಿದ್ದು, ರಾಜಸ್ಥಾನ 10 ರಲ್ಲಿ ಗೆದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್​: ಋತುರಾಜ್ ಗಾಯಕ್ವಾಡ್​, ಡ್ವೇನ್​​ ಕಾನ್ವೆ, ಮೊಯಿನ್ ಅಲಿ, ಅಂಬಾಟಿ ರಾಯುಡು, ಎನ್​.ಜಗದೀಶನ್​, ಎಂಎಸ್ ಧೋನಿ(ವಿ.ಕೀ, ಕ್ಯಾಪ್ಟನ್), ಮಿಚೆನ್​ ಸ್ಯಾಟ್ನರ್, ಪ್ರಶಾಂತ್​ ಸೊಲಂಕಿ, ಸಿಮ್ರಜಿತ್​ ಸಿಂಗ್​,ಮಾತೇಂಶ್​ ಪತಿರ್ಣ್, ಮುಖೇಶ್ ಚೌಧರಿ

ರಾಜಸ್ಥಾನ ರಾಯಲ್ಸ್​: ಯಶಸ್ವಿ ಜೈಸ್ವಾಲ್​, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ, ಕ್ಯಾಪ್ಟನ್​), ದೇವದತ್​ ಪಡಿಕ್ಕಲ್​, ಶಿಮ್ರಾನ್ ಹೆಟ್ಮಾಯರ್​, ರಿಯಾಗ್ ಪರಾಗ್​, ಆರ್​.ಅಶ್ವಿನ್​, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್​, ಮ್ಯಾಕೆ

Last Updated : May 20, 2022, 9:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.