ETV Bharat / sports

My husband is fire... ಬುಮ್ರಾ ಚೊಚ್ಚಲ 5 ವಿಕೆಟ್​ ಪಡೆದ ಬೆನ್ನಲ್ಲೇ ಪತ್ನಿ ಸಂಜನಾ ಟ್ವೀಟ್​! - ಬುಮ್ರಾ ಪತ್ನಿ ಸಂಜನಾ ಗಣೇಶನ್

ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ 4 ಓವರ್​ ಎಸೆದ ಬುಮ್ರಾ ಕೇವಲ 10ರನ್ ನೀಡಿ, ಪ್ರಮುಖ ಐದು ವಿಕೆಟ್ ಪಡೆದುಕೊಂಡಿದ್ದು, ಇದಕ್ಕೆ ಅವರ ಪತ್ನಿ ಪ್ರತಿಕ್ರಿಯೆ ನೀಡಿದ್ದಾರೆ.

Sanjana Ganesan tweets
Sanjana Ganesan tweets
author img

By

Published : May 9, 2022, 10:59 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮುಂಬೈ ತಂಡದ ಮಾರಕ ಬೌಲರ್​ ಜಸ್ಪ್ರೀತ್ ಬುಮ್ರಾ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಐದು ವಿಕೆಟ್​ ಪಡೆದು ಮಿಂಚು ಹರಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಪತ್ನಿ ಸಂಜನಾ ಗಣೇಶನ್​ ಟ್ವೀಟ್ ಮಾಡಿ ಸಂಭ್ರಮ ಹೊರಹಾಕಿದ್ದಾರೆ.

ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ 4 ಓವರ್​ಗಳಲ್ಲಿ ಕೇವಲ 10 ರನ್​ ನೀಡುವ ಮೂಲಕ ಪ್ರಮುಖ ಐದು ವಿಕೆಟ್ ಪಡೆದುಕೊಂಡ ಬುಮ್ರಾ, ತಮ್ಮ ವಿಕೆಟ್ ಬರ ನಿಗಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಂಜನಾ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.

  • Holy moly! My husband is 🔥🔥🔥

    — Sanjana Ganesan (@SanjanaGanesan) May 9, 2022 " class="align-text-top noRightClick twitterSection" data=" ">

ಸಂಜನಾ ಟ್ವೀಟ್​: Holy moly! My husband is 🔥🔥🔥 ಎಂದು ಸಂಜನಾ ಟ್ವೀಟ್ ಮಾಡಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಸುನೀಲ್ ನರೈನ್, ಪ್ಯಾಟ್ ಕಮಿನ್ಸ್, ಶೆಲ್ಡನ್ ಜಾಕ್ಸನ್ ನಿತೀಶ್ ರಾಣಾ, ಆಂಡ್ರೆ ರಸೆಲ್ ಅವರ ವಿಕೆಟ್ ಪಡೆದರು.

ಚೊಚ್ಚಲ ಐದು ವಿಕೆಟ್ ಪಡೆದು ಸಾಧನೆ ಮಾಡಿರುವ ಜಸ್ಪ್ರೀತ್ ಬುಮ್ರಾಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ಆಲ್​ರೌಂಡರ್ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಮಾರ್ಚ್​ 15ರಂದು ಟೀಂ ಇಂಡಿಯಾ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ಟಿವಿ ನಿರೂಪಕಿ ಸಂಜನಾ ಗಣೇಶನ್​ ಜೊತೆ ಸಪ್ತಪದಿ ತುಳಿದಿದ್ದು, ಜೀವನದ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಸದ್ದಿಲ್ಲದೇ ಗೋವಾದಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗಿದ್ದರು.

Sanjana Ganesan tweets
ಕಳೆದ ವರ್ಷ ಮಾರ್ಚ್​ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.