ETV Bharat / sports

ಗುಜರಾತ್​ ಬೌಲರ್​ಗಳ ಮೇಲೆ ’ಸೂರ್ಯ’ ಸವಾರಿ: 27 ರನ್​ಗಳ ಜಯ ದಾಖಲಿಸಿದ ಮುಂಬೈ - ಈಟಿವಿ ಭಾರತ ಕನ್ನಡ

ನಿನ್ನೆಯ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಮುಂಬೈ 27 ರನ್​ಗಳ ಜಯ ದಾಖಲಿಸಿದೆ.

ಮೂಬೈ ಇಂಡಿಯನ್ಸ್​​ಗೆ ಜಯ
ಮೂಬೈ ಇಂಡಿಯನ್ಸ್​​ಗೆ ಜಯ
author img

By

Published : May 13, 2023, 7:39 AM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್2023ರ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 27 ರನ್‌ಗಳ ಗೆಲುವು ದಾಖಲಿಸಿತು. ಇಲ್ಲಿಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ನೀಡಿದ್ದ 219 ರನ್‌ಗಳ ಗುರಿ ತಲುಪುವಲ್ಲಿ ಗುಜರಾತ್​ ವಿಫಲವಾಯಿತು. 20 ಓವರ್‌ಗಳಲ್ಲಿ 191 ರನ್‌ಗಳಿಸಲಷ್ಟೇ ಶಕ್ತವಾಯಿತು. ಮುಂಬೈ 27 ರನ್‌ಗಳ ಜಯ ಸಾಧಿಸಿತು.

ಗುಜರಾತ್​ ತಂಡ 108 ರನ್‌ಗಳಿಗೆ ಪ್ರಮುಖ 8 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ, ಮುಂಬೈ ಭಾರಿ ಅಂತರದಿಂದ ಗೆಲುವು ಸಾಧಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ರಶೀದ್ ಖಾನ್ ಮುಂಬೈನ ನಿರೀಕ್ಷೆ ಹುಸಿಗೊಳಿಸಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಅವರು ಮುಂಬೈ ಬೌಲರ್‌ಗಳ ಎಸೆತವನ್ನು ಸಮರ್ಥವಾಗಿ ಎದುರಿಸಿ ಬೌಂಡರಿಗಳ ಸುರಿಮಳೆಯನ್ನೇ ಹರಿಸಿದರು. 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 10 ಸಿಕ್ಸರ್ ನೆರವಿನಿಂದ 79 ರನ್​ಗಳಿಸಿದರು. ಅಲ್ಜಾರಿ ಜೋಸೆಫ್ ಅವರೊಂದಿಗೆ ಎಂಟನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವನ್ನು ಆಡಿದರು. ತಂಡ ಆಲೌಟ್​ ಆಗಲು ಬಿಡದ ರಾಶೀದ್​ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಏಕಾಂಗಿಯಾಗಿ ಹೋರಾಟ ಮುಂದುವರಿಸಿದರು.

ರಾಶೀದ್​ ಖಾನ್​ರ ವಿಕೆಟ್​ ಪಡೆಯಲು ಮುಂಬೈ ಬೌಲರ್​ಗಳು ಎಷ್ಟೇ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಮೈದಾನದಲ್ಲಿ ಸಿಕ್ಸರ್​ಗಳ ಸುರಿಮಳೆಯನ್ನೇ ಹರಿಸಿದ ರಶೀದ್​ರ ಆಟಕ್ಕೆ ಬೇಕ್ರ್​ ಹಾಕುವಲ್ಲಿ ಬೌಲರ್​ಗಳು ವಿಫಲವಾದರು. 8 ವಿಕೆಟ್​ ಕಳೆದುಕೊಂಡು 108ರಲ್ಲಿದ್ದ ಗುಜರಾತ್ ತಂಡವನ್ನು ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 191ಕ್ಕೆ ಕೊಂಡೊಯ್ದರು. ಇದಕ್ಕೂ ಮುನ್ನ ಬೌಲಿಂಗ್​ನಲ್ಲೂ 4 ವಿಕೆಟ್ ಪಡೆದಿದ್ದ ರಶೀದ್ ಬ್ಯಾಟ್​ನಲ್ಲೂ ಮಿಂಚಿದ್ದು ಈ ಪಂದ್ಯದ ಹೈಲೈಟ್ ಆಟಗಾರ ಎನಿಸಿಕೊಂಡರು. ​

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ (49 ಎಸೆತಗಳಲ್ಲಿ 103), ಐಪಿಎಲ್​ನ ಚೊಚ್ಚಲ ಶತಕ ಸಿಡಿಸಿದರೆ, ಇಶಾನ್ ಕಿಶನ್ (31), ರೋಹಿತ್ ಶರ್ಮಾ (29) ಮತ್ತು ವಿಷ್ಣು ವಿನೋದ್ (30) ಉತ್ತಮ ಪ್ರದರ್ಶನ ತೋರಿದ್ದರಿಂದ ಮುಂಬೈ ತಂಡ ದೊಡ್ಡ ಮಟ್ಟದ ಸ್ಕೋರ್ ಗಳಿಸಲು ಸಾಧ್ಯವಾಯಿತು.

ನಂತರ 219 ರನ್​ಗಳ ಗುರಿಯೊಂದಿಗೆ ಕಣಕ್ಕಿಳಿದ ಗುಜರಾತ್ ಟೈಟಾನ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರರಾದ ವೃದ್ದಿಮಾನ್​ ಶಾ (2), ಶುಭಮನ್​ ಗಿಲ್​ (6), ಬಹುಬೇಗ ವಿಕೆಟ್ ​ಕಳೆದುಕೊಂಡರು. ಬಳಿಕ ಕ್ರೀಸ್​ಗಿಳಿದ ನಾಯಕ ಹಾರ್ದಿಕ್​ ಪಾಂಡ್ಯ (4), ಬೇಹ್ರೇಂಡಾರ್ಫ್​ ಎಸೆತದಲ್ಲಿ ಇಶಾನ್​ ಕಿಶನ್​ಗೆ ಕ್ಯಾಚ್​ ನೀಡಿ ಹೊರ ನಡೆದರು. ಮಿಲ್ಲರ್​ (41) ಮತ್ತು ವಿಜಯ್ ಶಂಕರ್ (29) ಕೆಲಹೊತ್ತು ಕ್ರೀಸನಲ್ಲಿದ್ದು ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಹೋರಾಡಿದರು. ಚಹಾಲ್​ ಮತ್ತು ಮಾಧವಲ್​ ಎಸೆತಕ್ಕೆ ಬಲಿಯಾದರು. ಅಭಿನವ್​ ಮನೋಹರ್​ (2), ರಾಹುಲ್​ ತೆವಾಟಿಯಾ (14), ಕೂಡ ಬಹುಬೇಗ ನಿರ್ಗಮಿಸಿದರು. ಈ ಮೂಲಕ ಗುಜರಾತ್​ ತಂಡ ಮುಂಬೈ ವಿರುದ್ದ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ಚೊಚ್ಚಲ ಐಪಿಎಲ್ ಶತಕ ಸಿಡಿಸಿದ SKY ​: ಸೆಲ್ಯೂಟ್​ ಮೂಲಕ ಮೆಚ್ಚಿದ ವಿರಾಟ್​ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.